Social Media Influencer Arrested: ನಾಯಿ ಮೇಲೆ ಅತ್ಯಾಚಾರ ಎಸಗಿ ವಿಡಿಯೊ ಶೇರ್- ಸೋಶಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್ ಅರೆಸ್ಟ್
ಸಾಮಾಜಿಕ ಮಾಧ್ಯಮದ ಪ್ರಭಾವಿ ಮಹಿಳೆ ಲೋಗನ್ ಗುಮಿನ್ಸ್ಕಿ (Social Media Influencer Arrested) ತನ್ನ ನಾಯಿಯೊಂದಿಗೆ ಲೈಂಗಿಕ ಕ್ರಿಯೆಗಳನ್ನು ನಡೆಸಿರುವ ವಿಡಿಯೋವನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಬಳಿಕ ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಮಾರ್ಚ್ 21 ರಂದು ಬಂಧಿಸಲಾಗಿದ್ದು, ಬಳಿಕ 10,000 ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ.


ಫ್ಲೋರಿಡಾ: ನಾಯಿಯ ಮೇಲೆ ಅತ್ಯಾಚಾರ (Physical Abuse) ನಡೆಸಿದ ಆರೋಪದಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಮಹಿಳೆಯೊಬ್ಬಳನ್ನು (Social Media Influencer ) ಫ್ಲೋರಿಡಾದಲ್ಲಿ (Florida) ಮಾರ್ಚ್ 21 ರಂದು ಬಂಧಿಸಲಾಗಿದ್ದು, ಬಳಿಕ 10,000 ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ. ಸಾಕು ನಾಯಿಯ ಮೇಲೆ ಅತ್ಯಾಚಾರ ನಡೆಸಿ ಇದರ ವಿಡಿಯೋಗಳನ್ನು ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರಿಂದ ಆಕೆ ಸಿಕ್ಕಿಬಿದ್ದಿದ್ದಾಳೆ. ಸಾಮಾಜಿಕ ಮಾಧ್ಯಮದ ಪ್ರಭಾವಿ ಮಹಿಳೆ 27 ವರ್ಷದ ಲೋಗನ್ ಗುಮಿನ್ಸ್ಕಿ ತನ್ನ ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಪೊಲೀಸರು ಆಕೆಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಲೋಗನ್ ಗುಮಿನ್ಸ್ಕಿ ತನ್ನ ನಾಯಿಯೊಂದಿಗೆ ಲೈಂಗಿಕ ಕ್ರಿಯೆಗಳನ್ನು ನಡೆಸಿರುವ ವಿಡಿಯೋವನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಬಳಿಕ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಆಕೆಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.
ತನ್ನ ಸಾಕು ನಾಯಿಯಾದ ಚಿಹೋವಾ ಜೊತೆ ಫ್ಲೋರಿಡಾದ ಮರಿಯನ್ ಕೌಂಟಿಯ ಓಕಾಲಾದ ಲೋಗನ್ ಗುಮಿನ್ಸ್ಕಿ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವುದನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ. ತನ್ನನ್ನು 'ನಾಯಿ ತಾಯಿ' ಎಂದು ಬಣ್ಣಿಸಿಕೊಂಡಿರುವ ಆಕೆ ಮೆಟಾ-ಮಾಲೀಕತ್ವದ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 15,000 ಅನುಯಾಯಿಗಳನ್ನು ಹೊಂದಿದ್ದಾಳೆ.
ಲೋಗನ್ ಗುಮಿನ್ಸ್ಕಿಯನ್ನು ಮಾರ್ಚ್ 21 ರಂದು ಬಂಧಿಸಲಾಗಿದೆ. ಆಕೆಯ ವಿರುದ್ಧ ಪ್ರಾಣಿಯೊಂದಿಗೆ ಲೈಂಗಿಕ ಚಟುವಟಿಕೆ ಮತ್ತು ಅಂತಹ ದೃಶ್ಯಗಳ ಚಿತ್ರೀಕರಣ ಪ್ರಕರಣವನ್ನು ದಾಖಲಿಸಲಾಗಿದೆ. ಮೇರಿಯನ್ ಕೌಂಟಿ ಶೆರಿಫ್ ಕಚೇರಿಯು ಫೇಸ್‌ಬುಕ್ ಪೋಸ್ಟ್‌ನಲ್ಲಿ ಲೋಗನ್ ಗುಮಿನ್ಸ್ಕಿಯನ್ನು ಬಂಧಿಸಿರುವುದಾಗಿ ತಿಳಿಸಿದೆ. ಇದರೊಂದಿಗೆ ಆಕೆಯ ಬಂಧನದ ಚಿತ್ರವನ್ನು ಬಿಡುಗಡೆ ಮಾಡಿದೆ. ಲೋಗನ್ ಗುಮಿನ್ಸ್ಕಿಯ ಇನ್‌ಸ್ಟಾಗ್ರಾಮ್‌ನ ಪೋಸ್ಟ್ ಗಳ ಬಗ್ಗೆ ಅನಾಮಧೇಯ ವ್ಯಕ್ತಿಯೊಬ್ಬ ಜನವರಿಯಲ್ಲಿ ದೂರು ನೀಡಿದ್ದು ಬಳಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: Madenuru Manu Case: ನನ್ನ ಗಂಡ ಬೆಳೀತಿದ್ದಾನೆ ಎಂದು ಷಡ್ಯಂತ್ರ: ಮಡೆನೂರು ಮನು ಪತ್ನಿ ಆರೋಪ
ಡಿಟೆಕ್ಟಿವ್ ಬ್ಯಾಟ್ಸ್ ನೇತೃತ್ವದಲ್ಲಿ ನಡೆದ ತನಿಖೆಯ ವೇಳೆ ಸಂಗ್ರಹಿಸಿದ ದಾಖಲೆಗಳು ಪುರಾವೆಗಳು ಗುಮಿನ್ಸ್ಕಿ ಆಪಾದಿತ ಕೃತ್ಯಗಳಲ್ಲಿ ತೊಡಗಿರುವುದನ್ನು ದೃಢಪಡಿಸಿದೆ. ತನಿಖೆ ವೇಳೆ ಗುಮಿನ್ಸ್ಕಿ 500 ಡಾಲರ್ ಗೆ ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರೊಂದಿಗೆ ಈ ವಿಡಿಯೊವನ್ನು ರಚಿಸಿ ಹಂಚಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಬೇರೊಂದು ನಾಯಿ ಮೇಲೂ ಈ ರೀತಿ ಅತ್ಯಾಚಾರ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಅವಳ ಫೋನ್‌ನಲ್ಲಿ ಲಭ್ಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಮಿನ್ಸ್ಕಿಯನ್ನು ಮಾರ್ಚ್ 22 ರಂದು ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ 22 ರಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಆದೇಶಿಸಲಾಗಿದೆ.