ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA Pradeep Eshwar: ಶಾಸಕರಾಗಿ ನೀಡಿರುವ ಭರವಸೆಗಳನ್ನು ಈಡೇರಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ : ಸುಷ್ಮಾ ಶ್ರೀನಿವಾಸ್ ಆಗ್ರಹ

ಯುವಕರು, ಪ್ರಜ್ಞಾವಂತರು, ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯನೊಬ್ಬ ಚುನಾವಣೆ ಯಲ್ಲಿ ಗೆದ್ದು ಬಂದಾಗ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದು ತಿಳಿದಿದ್ದೆವು. ಆದರೆ ಶಾಸಕ ಪ್ರದೀಪ್ ಈಶ್ವರ್ ಜನತೆಯಿಟ್ಟಿ ನಂಬಿಕೆಯನ್ನು ಈ 3 ವರ್ಷಗಳಲ್ಲಿ ಹುಸಿ ಗೊಳಿಸಿದ್ದಾರೆ. ಶಾಸಕರಾಗುವುದಕ್ಕೂ ಮುನ್ನ ಹೆಚ್.ಎನ್.ವ್ಯಾಲಿ ನೀರಿನ ಅಪಾಯಗಳ ಬಗ್ಗೆ ವೀರಾವೇಶದಿಂದ ಆಡಿದ್ದ ಮಾತುಗಳೇಕೋ ಮರೆತಂತಿದೆ.

ಶಾಸಕರಾಗಿ ನೀಡಿರುವ ಭರವಸೆಗಳನ್ನು ಈಡೇರಿಸಿ, ಇಲ್ಲವೇ ಪ್ರತಿಭಟನೆ ಎದುರಿಸಿ

ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುಷ್ಮಾಶ್ರೀನಿವಾಸ್ ಮಾತನಾಡಿದರು. -

Ashok Nayak
Ashok Nayak Mar 10, 2026 11:20 PM

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರೇ ನೀವು ಚುನಾವಣೆಗೂ ಮುನ್ನ ಜನತೆಗೆ ನೀಡಿದ್ದ ಭರವಸೆ ಗಳನ್ನು ಈಡೇರಿಸುವಲ್ಲಿ 3 ವರ್ಷ ಗಳಿಂದ ಸಂಪೂರ್ಣ ವಿಫಲರಾಗಿದ್ದೀರಿ. ನೀಡಿರುವ ಭರವಸೆಗಳನ್ನು ಈಡೇರಿಸಲಿಲ್ಲ ಎಂದರೆ ನಿಮ್ಮ ಕಾರ್ಯವೈಖರಿ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರೈತ ಜನ ಸೇನಾ(Raitha Jana Sena) ಪಕ್ಷದ ರಾಜ್ಯಾಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ರೈತ ಜನ ಸೇನಾ ಪಕ್ಷದ ವತಿ ಯಿಂದ ನಡೆಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಯುವಕರು, ಪ್ರಜ್ಞಾವಂತರು, ರಾಜಕೀಯ ಹಿನ್ನೆಲೆ ಇಲ್ಲದ ಸಾಮಾನ್ಯನೊಬ್ಬ ಚುನಾವಣೆ ಯಲ್ಲಿ ಗೆದ್ದು ಬಂದಾಗ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ ಎಂದು ತಿಳಿದಿದ್ದೆವು. ಆದರೆ ಶಾಸಕ ಪ್ರದೀಪ್ ಈಶ್ವರ್ ಜನತೆಯಿಟ್ಟಿ ನಂಬಿಕೆಯನ್ನು ಈ 3 ವರ್ಷಗಳಲ್ಲಿ ಹುಸಿ ಗೊಳಿಸಿದ್ದಾರೆ. ಶಾಸಕರಾಗುವುದಕ್ಕೂ ಮುನ್ನ ಹೆಚ್.ಎನ್.ವ್ಯಾಲಿ ನೀರಿನ ಅಪಾಯಗಳ ಬಗ್ಗೆ ವೀರಾವೇಶದಿಂದ ಆಡಿದ್ದ ಮಾತುಗಳೇಕೋ ಮರೆತಂತಿದೆ.

ಇದನ್ನೂ ಓದಿ: HN Valley: ಹೆಚ್.ಎನ್.ವ್ಯಾಲಿ ಶುದ್ಧೀಕರಣಕ್ಕೆ ಆಗ್ರಹಿಸಿ ಸಚಿವರಿಗೆ ಕೊಳಚೆ ನೀರು ಕಳಿಸಿ ಆಕ್ರೋಶ ವ್ಯಕ್ತಪಡಿಸಿದ ಹರೀಶ್‌ರೆಡ್ಡಿ

ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿಗೆ ಕನ್ನಡ ಭವನದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗೆ ಏರ್ಪಡಿಸಿದ್ದ ಪ್ರೇರಣಾ ಕಾರ್ಯಕ್ರಮದ ನಂತರ ಮಾಧ್ಯಮದೊಂದಿಗೆ ಮಾತನಾಡಿ ಶಾಸನನಗೆ ಇನ್ನೂ ಹೆಚ್ಚಿನ ಪವರ್ ಬಂದರೆ ಚಿಕ್ಕಬಳ್ಳಾಪುರಕ್ಕೆ ಹೆಚ್.ಎನ್.ವ್ಯಾಲಿ ಮೂರನೇ ಹಂತದ ಪರಿಷ್ಕರಣೆ ಮಾಡುತ್ತೇನೆ ಎಂದು ಹೇಳಿರುವುದು ಹಾಸ್ಯಾಸ್ಪದ ಮಾತಾಗಿದೆ.ಇವರ ಮಾತಿನಲ್ಲಿ ಉನ್ನತ ಸ್ಥಾನ ಎಂದರೆ ಏನು? ಇವರು ಮುಖ್ಯಮಂತ್ರಿ ಆಗಬೇಕಾಗಿತ್ತೇನು? ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಕೇಂದ್ರದಲ್ಲಿ ಶಾಸಕರ ಕಚೇರಿಯಿದೆ. ತಾಲೂಕು ದಂಡಾಧಿಕಾರಿಗಳ ಕಚೇರಿ ಸಮುಚ್ಛಯದಲ್ಲಿರುವ ಶಾಸಕರ ಕಚೇರಿಗೇ ವಾರಕ್ಕೆ ಒಮ್ಮೆಯೂ ಇವರು ಬರುವುದಿಲ್ಲ. ಇವರು ಕಚೇರಿಗೆ ನಿಯಮಿತವಾಗಿ ಬಂದರೆ, ಬರುವ ಮಾಹಿತಿ ಜನಸಾಮಾನ್ಯರಿಗೆ ತಿಳಿಸಿದ್ದರೆ ಆ ದಿನದಂದು ಜನ ಹೋಗಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬಹುದು. ಆದರೆ ಶಾಸಕರು ಹಾಗೆ ಮಾಡುವುದಿಲ್ಲ. ಅದಕ್ಕೆ ಬದಲಾಗಿ ನಮ್ಮೂರಿಗೆ ನಮ್ಮ ಶಾಸಕ ಎಂದು ಹೇಳಿಕೊಂಡು  ಊರೂರು ತಿರುಗುತ್ತಿರುವುದು ಹಾಸ್ಯಸ್ಪದದಂತಿದೆ ಎಂದು ದೂರಿದರು.

ಕೆಲ ತಿಂಗಳುಗಳ ಹಿಂದೆ ಅಜ್ವವಾರ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಮ್ಮ ಗ್ರಾಮದ ನಾಲ್ವರು ಕಡು ಬಡುವರು ಮನೆಗೆ ಆಧಾರವಾಗಿದ್ದ ಯುವಕರು ಮೃತಪಟ್ಟಿ ದ್ದರು. ಆಗ ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿದ್ದ ಶಾಸಕರು ಘಟನೆಗೆ ವಿಷಾಧ ವ್ಯಕ್ತಪಡಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ ಕೊಡಿಸುತ್ತೇನೆ, ಗಂಡನನ್ನು ಕಳೆದುಕೊಂಡ ಯುವತಿಗೆ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದರು..

ಆದರೆ ಅಮಾಯಕರು ಸತ್ತು  ಎರಡು ತಿಂಗಳುಗಳಾದರೂ ಇವರು 5 ಲಕ್ಷ ಇರಲಿ, ಕನಿಷ್ಟ 50000 ದಷ್ಟೂ ನೆರವು ಕೊಡಿಸಲೂ ಇಲ್ಲ. ಹೀಗಾಗಿ ಶಾಸಕರಿಗೆ ಈ ಮೂಲಕ ಹೇಳಬಯ ಸೋದು ಏನೆಂದರೆ ಕೇವಲ ಅಂಬೇಡ್ಕರ್ ಪೋಟೋ ಹಿಡಿಸುಕೊಂಡು ನಾವು ದಲಿತ ಪರ ಎಂದು ಹೇಳಿದರೆ ಸಾಲದು. ನುಡಿದಂತೆ ನಡೆದುಕೊಳ್ಳಬೇಕು.ನಾನು ಇಲ್ಲಿ ಕುಳಿತು ಮಾತನಾಡಲೂ ಕೂಡ ಅಂಬೇಡ್ಕರ್ ಸಂವಿಧಾನ ನೀಡಿರುವ ಶಕ್ತಿಯೇ ಕಾರಣ. ಈ ವಿಚಾರ ದಲ್ಲಿ ಇನ್ನು ಕೆಲವು ದಿನಗಳ ಕಾಲ ನಾವು ಕಾಯುತ್ತೇವೆ. ನೀವು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ಕೊಡಿಸದೆ ಹೋದರೆ ನಾವು ನಿಮ್ಮ ವಿರುದ್ಧ ಪ್ರತಿಭಟನೆಯ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆ ಒಳಗೊಂಡAತೆ ಜಿಲ್ಲೆಯ ವಿವಿಧ ಕೆರೆಗಳಿಗೆ ಸರಬರಾಜು ಆಗುತ್ತಿರುವ ಹೆಚ್.ಎನ್ ವ್ಯಾಲಿಯ ೨ನೇ ಹಂತದ ಶುದ್ಧೀಕರಣದ ಕಲುಷಿತ ವಾದ ನೀರನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು. ಇದಕ್ಕಾಗಿ ನಾವು ಒಂದು ತಿಂಗಳು ಕಾಲಾವಧಿಯನ್ನು ನಿಮಗೆ ನೀಡುತ್ತೇವೆ. ಇದಾಗಲಿಲ್ಲ ಎಂದರೆ ಖಂಡಿತವಾಗಿ ಜನಾಂದೋ ಲನ ರೂಪಿಸಿ ಪ್ರತಿಭಟನೆಗಿಳಿಯುತ್ತೇವೆ. ಇದರ ಹೊಣೆಯನ್ನು ಸರ್ಕಾರ ಹೊರ ಬೇಕಾಗುತ್ತದೆ ಎಂದರು.

ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ ಮತ್ತು ವಿವಿಧ ಸಂಘಟನೆ ಗಳು ಸೇರಿ ಮಾ.15ರ ಚಿಕ್ಕಬಳ್ಳಾಪುರ ನಗರ ಬಂದ್‌ಗೆ ಕರೆ ನೀಡಿರುವುದು ಸರಿಯಿದೆ.ಇದಕ್ಕೆ ರಾಜ್ಯ ರೈತ ಜನಸೇನಾ ಪಕ್ಷ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸುತ್ತದೆ ಎಂದೂ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಜನಸನ ಪಕ್ಷದ ಅನೇಕ ಯುವಕರು ಹಾಗೂ ಸದಸ್ಯರುಗಳು ಹಾಜರಿದ್ದರು.