ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉನ್ನತ ಮಟ್ಟದ ಭದ್ರತೆಯನ್ನು ಭೇದಿಸಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಶ್ವೇತಭವನದ ಭೋಜನ ಕೂಟಕ್ಕೆ ವರದಿಗಾರನಾಗಿ ಆಗಮಿಸಿದ ಶಂಕಿತನನ್ನು ಬಂಧಿಸಲಾಗಿದೆ. ವಾಷಿಂಗ್ಟನ್ ಡಿ.ಸಿ.ಯ ಶ್ವೇತಭವನದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ವರದಿಗಾರರ ಭೋಜನಕೂಟಕ್ಕೆ ಬಂದಿದ್ದ ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ ಕೋಲ್ ತೋಮಸ್ ಅಲೆನ್ (31) ಎಂಬಾತ ಭದ್ರತಾ ತಪಾಸಣೆ ಪ್ರದೇಶದ ಬಳಿ ಗುಂಡಿನ ದಾಳಿ ನಡೆಸಿದ್ದು ತಕ್ಷಣವೇ ಆತನನ್ನು ಬಂಧಿಸಲಾಯಿತು.
ಶ್ವೇತಭವನದ ಭದ್ರತಾ ತಪಾಸಣೆ ಪ್ರದೇಶದ ಬಳಿ ಶನಿವಾರ ರಾತ್ರಿ ನಡೆದ ಗುಂಡಿನ ದಾಳಿಯು ಆತಂಕವನ್ನು ಉಂಟು ಮಾಡಿದ್ದು ತಕ್ಷಣವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಗಣ್ಯರನ್ನು ಸ್ಥಳದಿಂದ ಸ್ಥಳಾಂತರಿಸಲಾಯಿತು. ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಬಂಧಿಸಲಾಗಿದ್ದು, ಉನ್ನತ ಮಟ್ಟದ ಭದ್ರತೆಯನ್ನು ಆತ ಉಲ್ಲಂಘಿಸಿದ್ದು ಹೇಗೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.
ಅರವಿಂದ್ ಕೇಜ್ರಿವಾಲ್ ಹೊಸ ಬಂಗಲೆಯನ್ನು "ಶೀಶ್ ಮಹಲ್ 2" ಎಂದು ಕರೆದ ಬಿಜೆಪಿ; ಆಪ್ ಕೆಂಡಾಮಂಡಲ
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಶ್ವೇತಭವನದ ಉನ್ನತ ಮಟ್ಟದ ವರದಿಗಾರರ ಭೋಜನಕೂಟದಲ್ಲಿ ನಡೆದ ಗುಂಡಿನ ದಾಳಿಗೆ ಕಾರಣನಾದ ಕೋಲ್ ತೋಮಸ್ ಅಲೆನ್ ಯುನೈಟೆಡ್ ಸ್ಟೇಟ್ಸ್‌ನ ಅತ್ಯಂತ ಬಿಗಿ ಭದ್ರತೆಯೊಂದಿಗೆ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಾಷಿಂಗ್ಟನ್ ಹಿಲ್ಟನ್‌ನಲ್ಲಿ ಶನಿವಾರ ರಾತ್ರಿ ಮ್ಯಾಗ್ನೆಟೋಮೀಟರ್ ಸ್ಕ್ರೀನಿಂಗ್ ಪ್ರದೇಶದ ಬಳಿ ಹಲವು ಗುಂಡಿನ ದಾಳಿ ನಡೆದಿದೆ. ಇದರಿಂದ ಭಯಭೀತರಾದ ನೂರಾರು ಪತ್ರಕರ್ತರು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಓಡತೊಡಗಿದರು. ತಕ್ಷಣವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಇತರ ಉನ್ನತ ಅಧಿಕಾರಿಗಳನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳು ಸ್ಥಳಾಂತರಿಸಿದರು.
ಭದ್ರತಾ ತಪಾಸಣಾ ಪ್ರದೇಶದ ಕಡೆಗೆ ತೆರಳಿದ ಅಲೆನ್ ಅಲ್ಲಿ ಗುಂಡು ಹಾರಿಸುವ ಮೊದಲು ಶಸ್ತ್ರವನ್ನು ಸಿದ್ಧಪಡಿಸಿಕೊಂಡಿದ್ದಾನೆ. ಘಟನೆಯ ಕೆಲವೇ ಕ್ಷಣಗಳಲ್ಲಿ ಅಲೆನ್ ನನ್ನ ಯುಎಸ್ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ನೆಲಕ್ಕೆ ದೂಡಿ ಬಂಧಿಸಿದರು. ಈ ಸಂದರ್ಭದಲ್ಲಿ ಕಾನೂನು ಜಾರಿ ಅಧಿಕಾರಿಯೊಬ್ಬರ ಮೇಲೆ ಗುಂಡು ಹಾರಿದ್ದು, ಅವರು ಗುಂಡು ನಿರೋಧಕ ಜಾಕೆಟ್ ಹೊಂದಿದ್ದರಿಂದ ರಕ್ಷಿಸಲ್ಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ಸುಮಾರು ಐದರಿಂದ ಎಂಟು ಗುಂಡೇಟಿನ ಶಬ್ದಗಳು ಕೇಳಿದೆ. ಭದ್ರತಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಜನರ ರಕ್ಷಣೆಗೆ ಮುಂದಾದರು. ಸ್ಥಳವನ್ನು ತ್ವರಿತವಾಗಿ ಖಾಲಿ ಮಾಡಲಾಯಿತು. ಆವರಣವನ್ನು ಸುರಕ್ಷಿತವಾಗಿಡಲು ರಾಷ್ಟ್ರೀಯ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜೆನ್ ಝೀ ಎಫೆಕ್ಟ್: ಬಿಜೆಪಿ ಸೇರಿದ ಮೇಲೆ 10 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡ ರಾಘವ್ ಚಡ್ಡಾ
ಘಟನೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿದ ಟ್ರಂಪ್, ಎಲ್ಲಾ ರಕ್ಷಕ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಕುರಿತು ಮುಂದಿನ ನಿರ್ಧಾರಗಳನ್ನು ಕಾನೂನು ಜಾರಿ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.