ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅರವಿಂದ್ ಕೇಜ್ರಿವಾಲ್ ಹೊಸ ಬಂಗಲೆಯನ್ನು "ಶೀಶ್ ಮಹಲ್ 2" ಎಂದು ಕರೆದ ಬಿಜೆಪಿ; ಆಪ್ ಕೆಂಡಾಮಂಡಲ

ಸಂಸದ ರಾಘವ್ ಚಡ್ಡಾ ಅವರು ಬಿಜೆಪಿ ಸೇರಿದ ಬಳಿಕ ಆಪ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ಆರಂಭವಾಗಿದೆ. ದೆಹಲಿ ಉಪಮುಖ್ಯಮಂತ್ರಿ ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾದ ಹೊಸ ಬಂಗಲೆಯ ಚಿತ್ರವನ್ನು ಹಂಚಿಕೊಂಡಿದ್ದು, ಇದನ್ನು ಬಿಜೆಪಿ "ಶೀಶ್ ಮಹಲ್ 2" ಎಂದು ಕರೆದಿದೆ. ಇದರಿಂದ ಕೆರಳಿದ ಆಪ್ ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

"ಶೀಶ್ ಮಹಲ್ 2" ಬಿಜೆಪಿ- ಆಪ್ ನಡುವೆ ವಾಗ್ವಾದ

ಸಂಗ್ರಹ ಚಿತ್ರ -

ನವದೆಹಲಿ: ಸಂಸದ ರಾಘವ್ ಚಡ್ಡಾ (MP Raghav Chadha) ಅವರು ಆಪ್ (AAP) ತೊರೆದು ಬಿಜೆಪಿ (BJP) ಸೇರಿದ ಮೇಲೆ ಬಿಜೆಪಿ ಮತ್ತು ಮತ್ತು ಆಪ್ ನಡುವೆ ವಾಗ್ಯುದ್ಧ ಆರಂಭವಾಗಿದೆ. ಆಪ್ ನಾಯಕರಾಗಿದ್ದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಅವರು ಶುಕ್ರವಾರ ಪಕ್ಷ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದರು. ಇದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Former Delhi Chief Minister Arvind Kejriwal) ನೇತೃತ್ವದ ಪಕ್ಷಕ್ಕೆ ಭಾರಿ ಹೊಡೆತ ನೀಡಿದೆ. ಇದರಿಂದ ಕೆರಳಿರುವ ಆಪ್ ನಾಯಕರು ಈಗ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ದೆಹಲಿ ಉಪಮುಖ್ಯಮಂತ್ರಿ ಪರ್ವೇಶ್ ವರ್ಮಾ ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾದ ಹೊಸ ಬಂಗಲೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಈ ಮನೆಯಲ್ಲಿನ ಉತ್ತಮ ಗುಣಮಟ್ಟದ ಸೌಕರ್ಯಗಳಿಗೆ "ಖಾಸಗಿ ಹಣ" ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.

ಕುಸಿದು ಬಿದ್ದ ಬ್ಯಾಂಕ್‌ನಿಂದ ನಗದು ಸಂಗ್ರಹಿಸಲು ಸಾರ್ವಜನಿಕರ ದಂಡು; ಕಾಗದ ಪತ್ರ, ಲಾಕರ್‌ ಕೀ ಗತಿ ಏನು?

ಪರ್ವೇಶ್ ವರ್ಮಾ ಅವರು ಹಂಚಿಕೊಂಡಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಲಾದ ಹೊಸ ಬಂಗಲೆಯನ್ನು ಬಿಜೆಪಿ "ಶೀಶ್ ಮಹಲ್ 2" ಎಂದು ಕರೆದಿದ್ದು, ಆಪ್ ನಾಯಕರು ಇದಕ್ಕಾಗಿ ಭಾರಿ ಹಣ ಖರ್ಚು ಮಾಡಿದ್ದಾರೆ ಎಂಬ ಆರೋಪಿಸಿದೆ.

ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಹೊಸ ಮನೆಗೆ ಕಾಲಿಟ್ಟ ಮರುದಿನವೇ ಪರ್ವೇಶ್ ವರ್ಮಾ ಅವರು ಕೇಜ್ರಿವಾಲ್ ಅವರ ಹೊಸ ವಸತಿ ಗೃಹದ ವಿನ್ಯಾಸ ಮತ್ತು ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆಪ್, ಇದೊಂದು ನಕಲಿ ಚಿತ್ರವಾಗಿದೆ. 'ಪಿಂಟರೆಸ್ಟ್' ನಿಂದ ಡೌನ್‌ಲೋಡ್ ಮಾಡಲಾಗಿದೆ ಎಂದು ಹೇಳಿದೆ.



ಅರವಿಂದ್ ಕೇಜ್ರಿವಾಲ್ ಅವರು ಐಷಾರಾಮಿ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ ಎಂದು ಆರೋಪಿಸಿರುವ ಪರ್ವೇಶ್ ವರ್ಮಾ, ಅವರಿಗಾಗಿ ಆಪ್ ನಾಯಕರು "ಶೀಶ್ ಮಹಲ್ 2" ಅನ್ನು ನಿರ್ಮಿಸಿದ್ದಾರೆ. ದೆಹಲಿಯ ಧುರಂಧರ್ ಮತದಾರರು ಶೀಶ್ ಮಹಲ್‌ನಿಂದ ಬಲವಂತವಾಗಿ ಹೊರಹಾಕಿದ ಅನಂತರ, ಅವರು ಪಂಜಾಬ್‌ಗೆ ಸ್ಥಳಾಂತರಗೊಂಡರು. ಅಲ್ಲಿ ಅವರು ಒಂದು ಬಂಗಲೆಯನ್ನು ಪಡೆದುಕೊಂಡರು. ಈಗ ಅವರು ಲೋಧಿ ಎಸ್ಟೇಟ್‌ನಲ್ಲಿ ಶೀಶ್ ಮಹಲ್ 2 ಅನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರವು ಕೇಜ್ರಿವಾಲ್‌ಗೆ ಹಂಚಿಕೆ ಮಾಡಿದ ಬಂಗಲೆಯ ವಿನ್ಯಾಸ ಮತ್ತು ಫೋಟೋಗಳನ್ನು ಪ್ರದರ್ಶಿಸಿದರು. ಸರ್ಕಾರ ಸಾಮಾನ್ಯವಾಗಿ ನಾಯಕರ ಬಂಗಲೆಗಳ ಮೇಲೆ ಹೆಚ್ಚಿನ ಹಣ ವ್ಯಯ ಮಾಡುವುದಿಲ್ಲ. ಆದರೆ ಕೇಜ್ರಿವಾಲ್ ಅವರ ಹೊಸ ಮನೆಗೆ ಖಾಸಗಿ ಹಣವನ್ನು ಬಳಸಿ ಐಷಾರಾಮಿ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಅವರು ಆರೋಪಿಸಿದರು.

ಲೋಧಿ ರಸ್ತೆಯಲ್ಲಿರುವ ಈ ಬಂಗಲೆಗೆ ಎಷ್ಟು ಹಣವನ್ನು ವ್ಯಯ ಮಾಡಲಾಗಿದೆ ಎಂದು ಕೇಜ್ರಿವಾಲ್ ನಮಗೆ ತಿಳಿಸುತ್ತಾರೆಯೇ? ಆ ಹಣ ಎಲ್ಲಿಂದ ಬಂತು ಮತ್ತು ಅದು ಯಾರ ಹಣ? ಎಂದು ಅವರು ಹೇಳಬೇಕು ಎಂದು ತಿಳಿಸಿದ್ದಾರೆ.

ದೆಹಲಿಯ ವ್ಯವಹಾರಗಳಿಗೆ ಆಪ್ ಇಷ್ಟೊಂದು ಸಮಯ, ಖರ್ಚು ಮಾಡುತ್ತಿದ್ದರೆ ಬಹುಶಃ ಅವರ ಕಾರ್ಯಕರ್ತರು ಇಂದು ಪಕ್ಷವನ್ನು ತೊರೆಯುತ್ತಿರಲಿಲ್ಲ ಎಂದು ಹೇಳಿದರು.

ಪರ್ವೇಶ್ ವರ್ಮಾ ಅವರು ಬಿಡುಗಡೆ ಮಾಡಿರುವ ಚಿತ್ರಗಳಿಗೆ ಪ್ರತಿಕ್ರಿಯಿಸಿರುವ ಆಪ್ ನಾಯಕಿ ಅತಿಶಿ, ಬಿಜೆಪಿ ಕೇಜ್ರಿವಾಲ್ ವಿರುದ್ಧ ಏನನ್ನೂ ಕಂಡುಹಿಡಿಯಲು ಸಾಧ್ಯವಾಗದಿದ್ದಾಗ ಇಂಟರ್ನೆಟ್‌ನಿಂದ ಬಂದ ಚಿತ್ರಗಳ ಆಧಾರದ ಮೇಲೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

31 ವರ್ಷಗಳ ಹಿಂದೆ 13ರ ಹರೆಯದ ಬಾಲಕನ್ನು ಕೊಂದ ವ್ಯಕ್ತಿ ಅರೆಸ್ಟ್‌; ವೇಷ ಮರೆಸಿಕೊಂಡಾತ ಬಲೆಗೆ ಬಿದ್ದಿದ್ದು ಹೇಗೆ? ಇಲ್ಲಿದೆ ರೋಚಕ ಕಾರ್ಯಾಚರಣೆಯ ವಿವರ

ಬಿಜೆಪಿ ಸಚಿವರು ಅರವಿಂದ್ ಕೇಜ್ರಿವಾಲ್ ಅವರ ಹೊಸ ಮನೆಯ ಚಿತ್ರಗಳನ್ನು ತೋರಿಸಲು ಮಾಧ್ಯಮಗಳಿಗೆ ಕರೆ ನೀಡಿದರು. ಆದರೆ ತಮಾಷೆಯೆಂದರೆ ಈ ಚಿತ್ರಗಳು ಕೇಜ್ರಿವಾಲ್ ಅವರ ಮನೆಯದ್ದಲ್ಲ. ಪಿಂಟರೆಸ್ಟ್ ನಿಂದ ಡೌನ್‌ಲೋಡ್ ಮಾಡಲಾಗಿದೆ. ಪರ್ವೇಶ್ ವರ್ಮಾ ಇದಕ್ಕಾಗಿ ಎಐ ಚಿತ್ರಗಳನ್ನು ಬಳಸಬಹುದಿತ್ತು; ಕಳ್ಳತನ ಅಷ್ಟು ಬೇಗ ಸಿಕ್ಕಿಬೀಳುವುದಿಲ್ಲ ಎಂದು ತಿಳಿಸಿದರು.

ಶುಕ್ರವಾರವಷ್ಟೇ ಬಿಜೆಪಿ ಸೇರಿರುವ ರಾಘವ್ ಚಡ್ಡಾ ಅವರು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಚುನಾವಣೆ ನಡೆದು ಒಂದು ವರ್ಷ ಕೂಡ ಆಗಿಲ್ಲ. ಆಗಲೇ "ಶೀಶ್ ಮಹಲ್ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದ ಉಳಿದಿವರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕೇಳಲು ನನಗೂ ಕುತಲಾವಿದೆ. ಆಪ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.