ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ರೂ. 25 ಕೋಟಿ ಮೋಟಾರ್ ಅಪಘಾತ ಇನ್ಶೂರೆನ್ಸ್ ವಂಚನೆ ಬಯಲು; ಎಫ್ಐಆರ್ ದಾಖಲು
ಕಂಪನಿಯು ಎಫ್‌ಐಆರ್ ಮತ್ತು ಪೂರಕ ದಾಖಲೆಗಳನ್ನು ಅನುಮಾನಾಸ್ಪದ ಮತ್ತು ಪೂರ್ವ ಯೋಜಿತ ವಂಚನೆಯ ಪ್ರಯತ್ನ ಎಂದು ಪತ್ತೆ ಮಾಡಿತು. ನ್ಯಾಯಾಂಗ ಹಸ್ತ ಕ್ಷೇಪದ ಅಗತ್ಯವನ್ನು ಗುರುತಿಸಿ, ಬಜಾಜ್ ಜನರಲ್ ಇನ್ಶೂರೆನ್ಸ್ ಗೌರವಾನ್ವಿತ ಗುಜರಾತ್ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು.
-
ಭಾರತದ ಪ್ರಮುಖ ಖಾಸಗಿ ಜನರಲ್ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾದ ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಈ ಮೊದಲು ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು), ನಕಲಿ ಥರ್ಡ್ ಪಾರ್ಟಿ ಪರಿಹಾರ ಕ್ಲೈಮ್ ಆಧಾರದ ರೂ. 25 ಕೋಟಿ ಮೋಟಾರ್ ಅಪಘಾತ ಇನ್ಶೂರೆನ್ಸ್ ವಂಚನೆಯನ್ನು ಯಶಸ್ವಿಯಾಗಿ ಬಯಲು ಮಾಡಿದೆ.
ಸುಳ್ಳು ಎಫ್ಐಆರ್ ಮತ್ತು ಭುಜ್‌ನ ಮೋಟಾರ್ ಅಪಘಾತ ದಾವೆಗಳ ನ್ಯಾಯಮಂಡಳಿ (ಎಂಎಸಿಟಿ) ಗೆ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಈ ವಂಚನೆಯನ್ನು ರೂಪಿಸ ಲಾಗಿತ್ತು. ಭಾರತೀಯ ದಂಡ ಸಂಹಿತೆ ಮತ್ತು ಮೋಟಾರ್ ವಾಹನ ಕಾಯ್ದೆಯಡಿ ಸಾನಂದ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಿಂದ ಈ ಪ್ರಕರಣ ಆರಂಭ ವಾಯಿತು.
ಇದ್ದಕ್ಕಿದ್ದಂತೆ ನಾಯಿಯೊಂದು ರಸ್ತೆಗೆ ಅಡ್ಡ ಬಂದು ತಾನು ಚಲಾಯಿಸುತ್ತಿದ್ದ ಮಹೀಂದ್ರಾ ಕ್ಸೈಲೋ ಕಾರು ಪಲ್ಟಿಯಾಯ್ತು ಎಂದು ಕಾರು ಚಾಲಕ ವ್ಯಕ್ತಿ ತನ್ನ ದೂರಿನಲ್ಲಿ ದಾಖಲಿಸಿದ್ದರು. ತನ್ನ ಪಕ್ಕದಲ್ಲಿ ಕುಳಿತಿದ್ದ ಸಹ ಚಾಲಕನಿಗೆ ಮಾರಣಾಂತಿಕ ಗಾಯಗಳಾಗಿ, ಆತ ಸಾನಂದ್ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಅವರು ಆರೋಪಿಸಿದ್ದರು. ಇದರ ನಂತರ, ಮೃತ ವ್ಯಕ್ತಿಯ ಕಾನೂನು ಉತ್ತರಾಧಿಕಾರಿಗಳು ಭುಜ್ ಎಂಎಸಿಟಿಯಲ್ಲಿ ರೂ.25 ಕೋಟಿ ಪರಿಹಾರಕ್ಕಾಗಿ ಕ್ಲೈಮ್ ಸಲ್ಲಿಸಿದರು.
ಇದನ್ನೂ ಓದಿ: Bangalore Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಬಜಾಜ್ ಜನರಲ್ ಇನ್ಶೂರೆನ್ಸ್ ನ್ಯಾಯಾಲಯದ ಸಮನ್ಸ್ ಪಡೆದು, ತನ್ನ ಆಂತರಿಕ ತನಿಖೆಯನ್ನು ಆರಂಭಿಸಿತ್ತು. ಕಂಪನಿಯು ಎಫ್ಐಆರ್, ಚಾರ್ಜ್‌ಶೀಟ್, ಮರಣೋತ್ತರ ಪರೀಕ್ಷೆ ವರದಿ, ಸ್ಥಳ ಮತ್ತು ವಿಚಾರಣೆ ಪಂಚನಾಮೆ ಮತ್ತು ವಾಹನ ದಾಖಲೆಗಳನ್ನು ಪಡೆದುಕೊಂಡಿತು.
ಕಂಪನಿಯು ಎಫ್‌ಐಆರ್ ಮತ್ತು ಪೂರಕ ದಾಖಲೆಗಳನ್ನು ಅನುಮಾನಾಸ್ಪದ ಮತ್ತು ಪೂರ್ವಯೋಜಿತ ವಂಚನೆಯ ಪ್ರಯತ್ನ ಎಂದು ಪತ್ತೆ ಮಾಡಿತು. ನ್ಯಾಯಾಂಗ ಹಸ್ತ ಕ್ಷೇಪದ ಅಗತ್ಯವನ್ನು ಗುರುತಿಸಿ, ಬಜಾಜ್ ಜನರಲ್ ಇನ್ಶೂರೆನ್ಸ್ ಗೌರವಾನ್ವಿತ ಗುಜರಾತ್ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು. ಅಪಘಾತವು ಮೇಲ್ನೋಟಕ್ಕೆ ಅನುಮಾನಾ ಸ್ಪದವಾಗಿದೆ ಎಂದು ತೀರ್ಪು ನೀಡಿದ ನ್ಯಾಯಾಲಯವು, ಪ್ರಕರಣದ ಮರು-ತನಿಖೆಗಾಗಿ ಸಿಐಡಿ ಕ್ರೈಂ ಬ್ರಾಂಚ್ ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ನೇಮಿಸಿತು.
ಎಸ್‌ಐಟಿ ವರದಿ ಬರುವವರೆಗೂ ಮೋಟಾರ್ ಅಪಘಾತ ಕ್ಲೈಮ್ ಅರ್ಜಿಯ ಎಲ್ಲಾ ವಿಚಾರಣೆಗಳನ್ನು ತಡೆ ಹಿಡಿಯಲಾಯಿತು. ಗುಜರಾತ್ ರಾಜ್ಯದ ಸಿಐಡಿ ಅಪರಾಧ ಮತ್ತು ರೈಲ್ವೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದ ಎಸ್‌ಐಟಿ ತನ್ನ ಸಾಕ್ಷಿಗಳನ್ನು ಸಲ್ಲಿಸಿದೆ. ಅಪಘಾತದ ಸಮಯದಲ್ಲಿ ಸಹ-ಚಾಲಕ ಏಕಾಂಗಿಯಾಗಿ ವಾಹನ ಚಾಲನೆ ಮಾಡುತ್ತಿದ್ದ ವಿಷಯ ತನಿಖೆಯಿಂದ ದೃಢವಾಗಿದೆ.
ಈ ವಿಷಯವನ್ನು ತಿಳಿದ ನಂತರವೂ ಆರೋಪಿ ಚಾಲಕ ಸುಳ್ಳು ಎಫ್‌ಐಆರ್ ದಾಖಲಿಸಿ, ಸುಳ್ಳು ಸಾಕ್ಷಿಗಳನ್ನು ನೀಡಿ ಮತ್ತು ಮೋಸದ ಕ್ಲೈಮ್ ಬೆಂಬಲಕ್ಕಾಗಿ ನಕಲಿ ಪುರಾವೆ ಗಳನ್ನು ಸಲ್ಲಿಸಿದ್ದರು. ವಿಮೆದಾರರಾಗಿದ್ದ ವಾಹನ ಮಾಲೀಕರು, ಈ ಮೊದಲು ಕ್ಲೈಮ್ ನಿರಾಕರಿಸಲ್ಪಟ್ಟಿದ್ದರೂ ಕೂಡಾ ಮೆಹ್ಸಾನಾದ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ನಿಯಮಿತ ಇತರ ಹಾನಿಯ ಮೂಲಕ ಸ್ವಂತ ಹಾನಿ ಪರಿಹಾರವನ್ನು ಕ್ಲೈಮ್ ಮಾಡಲು ಪ್ರಯತ್ನಿಸಿದ್ದರು.
ಅಧಿಕೃತ ಪುರಾವೆಗಳ ಬೆಂಬಲದೊಂದಿಗೆ, ಬಜಾಜ್ ಜನರಲ್ ಇನ್ಶೂರೆನ್ಸ್ ಆರೋಪಿ ಚಾಲಕ ಮತ್ತು ವಿಮಾದಾರ ಇಬ್ಬರ ವಿರುದ್ಧವೂ ಸಾನಂದ್ ಪೊಲೀಸ್ ಠಾಣೆಯಲ್ಲಿ ಪಿತೂರಿ, ಸುಳ್ಳು ಸಾಕ್ಷ್ಯಗಳ ಸೃಷ್ಟಿ ಮತ್ತು ವಂಚನೆಗೆ ಯತ್ನಿಸಿದ ಆರೋಪದ ಮೇಲೆ ಎಫ್‌ಐಆರ್ ಸಲ್ಲಿಸಿದೆ. ಇನ್ಶೂರೆನ್ಸ್ ವಂಚನೆಯ ಕುರಿತಾಗಿ ಬಜಾಜ್ ಜನರಲ್ ಇನ್ಶೂರೆನ್ಸ್ ಶೂನ್ಯ-ಸಹಿಷ್ಣುತೆಯ ನಿಲುವನ್ನು ಹೊಂದಿದೆ. ಕಂಪನಿಯು ವಂಚನೆಯ ಗುರುತಿಸಲು, ತನಿಖೆ ಮಾಡಲು ಮತ್ತು ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ. ಎಲ್ಲಾ ಪಾಲಿಸಿದಾರರಿಗೆ ಜಾಗರೂಕರಾಗಿರಲು ಮತ್ತು ಯಾವುದೇ ಅನುಮಾ ನಾಸ್ಪದ ನಡವಳಿಕೆಯನ್ನು ತ್ವರಿತವಾಗಿ ವರದಿ ಮಾಡಲು ಇದು ಒತ್ತಾಯಿಸುತ್ತದೆ.
ಇನ್ಶೂರೆನ್ಸ್ ವಂಚನೆಯು ವ್ಯವಹಾರಗಳಿಗೆ ಮಾತ್ರವಲ್ಲದೆ, ಪ್ರಾಮಾಣಿಕ ಗ್ರಾಹಕರು ಮತ್ತು ವಿಶಾಲ ಸಮುದಾಯಕ್ಕೆ ಹಾನಿ ಮಾಡುತ್ತದೆ. ಯಾವುದೇ ಹಿನ್ನೆಲೆಯ, ಯಾರು ಬೇಕಾದರೂ ವಂಚನೆಯಲ್ಲಿ ಭಾಗಿಯಾಗಬಹುದು ಎಂಬುದಕ್ಕೆ ಈ ಪ್ರಕರಣವು ಸಾಕ್ಷಿಯಾಗಿದೆ.
ನ್ಯಾಯಕ್ಕಾಗಿ ಬಜಾಜ್ ಜನರಲ್ ಇನ್ಶೂರೆನ್ಸ್ ಕಾನೂನು ಜಾರಿ ಮತ್ತು ನ್ಯಾಯಾಲಯ ಗಳೊಂದಿಗೆ ಸಹಯೋಗವನ್ನು ಮುಂದುವರಿಸುತ್ತದೆ. ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಈ ಮೊದಲು ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು) ಪರಿಚಯ ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಈ ಮೊದಲು ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು) ಭಾರತದ ಪ್ರಮುಖ, ಅತ್ಯಂತ ವಿಶ್ವಾಸಾರ್ಹ ಮತ್ತು ಕ್ರಿಯಾತ್ಮಕ ಖಾಸಗಿ ಜನರಲ್ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾಗಿದೆ.
ಇದು ಭಾರತದ ಪ್ರಮುಖ ಮತ್ತು ಅತ್ಯಂತ ವೈವಿಧ್ಯಮಯ ಹಣಕಾಸು ಸೇವೆಗಳ ಗುಂಪಾದ ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಬಜಾಜ್ ಜನರಲ್ ಮೋಟಾರ್, ಹೆಲ್ತ್ ಮತ್ತು ಹೋಮ್ ಇನ್ಶೂರೆನ್ಸ್ ಜೊತೆಗೆ ಪೆಟ್ ಇನ್ಶೂರೆನ್ಸ್, ವೆಡ್ಡಿಂಗ್ ಇನ್ಶೂರೆನ್ಸ್, ಇವೆಂಟ್ ಪ್ರೊಟೆಕ್ಷನ್, ಸೈಬರ್ ಇನ್ಶೂರೆನ್ಸ್ ಮತ್ತು ರೂರಲ್ ಇನ್ಶೂರೆನ್ಸ್‌ನಂತಹ ವಿಶೇಷ ಉತ್ಪನ್ನಗಳೊಂದಿಗೆ ನವೀನ ಮತ್ತು ಗ್ರಾಹಕ-ಕೇಂದ್ರಿತ ಇನ್ಶೂರೆನ್ಸ್ ಪರಿಹಾರಗಳ ವಿಶಾಲ ಪೋರ್ಟ್‌ಫೋಲಿಯೋವನ್ನು ಒದಗಿಸುತ್ತದೆ.
ನಿಮ್ಮ ಆರೋಗ್ಯ ಮತ್ತು ಮನೆಯನ್ನು ರಕ್ಷಿಸುವುದರಿಂದ ಹಿಡಿದು, ನಿಮ್ಮ ಪ್ರಯಾಣಗಳು ಮತ್ತು ಜೀವನದ ಅತ್ಯಂತ ಪ್ರಮುಖ ಕ್ಷಣಗಳನ್ನು ರಕ್ಷಿಸುವವರೆಗೆ, ಬಜಾಜ್ ಜನರಲ್ ನಿಮ್ಮ ಜೀವನದ ಪ್ರಯಾಣದಲ್ಲಿ ನಿರಂತರವಾಗಿ ಜೊತೆಗಿರುವ ಗುರಿಯನ್ನು ಹೊಂದಿದೆ.
ಬಜಾಜ್ ಜನರಲ್ ಕಾರ್ಪೊರೇಟ್‌ಗಳು ಮತ್ತು ಎಸ್‌ಎಂಇಗಳಿಗೆ ಬೆಂಕಿ, ಮರೈನ್, ಎಂಜಿನಿಯರಿಂಗ್, ಹೊಣೆಗಾರಿಕೆ ಮತ್ತು ಖಾತರಿ ಇನ್ಶೂರೆನ್ಸ್ ಸೇರಿದಂತೆ ಸಮಗ್ರ ಮತ್ತು ಉತ್ತಮ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳನ್ನು ಸಮಾನವಾಗಿ ಒದಗಿಸುತ್ತದೆ. ಹಣಕಾಸಿನ ಸೇರ್ಪಡೆಯ ಮೇಲೆ ಗಮನ ಹರಿಸುವ ಮೂಲಕ ಕಂಪನಿಯು ವಿವಿಧ ಸರ್ಕಾರಿ ಯೋಜನೆಗಳಲ್ಲಿ ಭಾಗವಹಿಸುತ್ತದೆ.
ಕಂಪನಿಯು ತನ್ನ ಬಲವಾದ ಅಪಾಯ ಆಯ್ಕೆ ಸಾಮರ್ಥ್ಯಗಳು, ಡಿಜಿಟಲ್ ಅಳವಡಿಕೆ ಮತ್ತು ಉತ್ಪನ್ನ ನಾವೀನ್ಯತೆಗೆ ಕೂಡಾ ಹೆಸರುವಾಸಿಯಾಗಿದೆ. 2001 ರಲ್ಲಿ ಸ್ಥಾಪನೆಯಾದ ಕಂಪನಿಯು, ಭಾರತದಾದ್ಯಂತ ಸುಮಾರು 1,500 ಪಟ್ಟಣಗಳು ಮತ್ತು ನಗರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಸುಲಭ ಸಂಪರ್ಕ ಮತ್ತು ಗ್ರಾಹಕರೊಂದಿಗೆ ನಿಕಟ ಸಂಬಂಧ ವನ್ನು ಖಚಿತಪಡಿಸುತ್ತದೆ. ವೈಯಕ್ತಿಕ ಏಜೆಂಟ್‌ಗಳು, ಪಾಯಿಂಟ್-ಆಫ್-ಸೇಲ್ಸ್ ಸಿಬ್ಬಂದಿ, ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು, ಮೋಟಾರ್ ಡೀಲರ್‌ಗಳು, ಬ್ರೋಕರ್‌ಗಳು ಮತ್ತು ಕಂಪನಿ ಮಾಲೀಕತ್ವದ ಮಾರಾಟ ಪಡೆಗಳನ್ನು ಹೊಂದಿರುವ ಅತಿದೊಡ್ಡ ವಿತರಣಾ ಜಾಲದ ಮೂಲಕ ಈ ಸಂಪರ್ಕವನ್ನು ಸಕ್ರಿಯಗೊಳಿಸಲಾಗಿದೆ.
ಇದು ಐಸಿಆರ್‌ಎ ಲಿಮಿಟೆಡ್‌ನಿಂದ [ಐಸಿಆರ್‌ಎ] ಎಎಎ ರೇಟಿಂಗ್ ಹೊಂದಿರುವುದು, ತನ್ನ ಹಣಕಾಸಿನ ಶಕ್ತಿ ಮತ್ತು ಸ್ಥಿರತೆಯಲ್ಲಿ ಅತ್ಯಧಿಕ ಮಟ್ಟದ ವಿಶ್ವಾಸವನ್ನು ಪ್ರತಿಬಿಂಬಿಸು ತ್ತದೆ.
ಸದೃಢ ಪರಂಪರೆ, ಭವಿಷ್ಯದ ಬಗ್ಗೆ ಯೋಚಿಸುವ ಮನಸ್ಥಿತಿ ಮತ್ತು ತನ್ನ 'ಗ್ರಾಹಕರಿಗೆ ಆದ್ಯತೆ' ತತ್ವದ ಮೇಲಿನ ಅಸಾಧಾರಣ ಗಮನದೊಂದಿಗೆ, ಬಜಾಜ್ ಜನರಲ್ ಅತ್ಯಂತ ಮುಖ್ಯವಾದದ್ದನ್ನು ರಕ್ಷಿಸಲು, ವ್ಯಕ್ತಿಗಳು, ಕುಟುಂಬಗಳು ಮತ್ತು ಬಿಸಿನೆಸ್‌ಗಳನ್ನು ಆತ್ಮವಿಶ್ವಾಸ ಮತ್ತು ನೆಮ್ಮದಿಯಿಂದ ಬದುಕಲು ಸಬಲೀಕರಣಗೊಳಿಸಲು ಬದ್ಧವಾಗಿದೆ.