Belagavi news: ಬೆಳಗಾವಿಯಲ್ಲಿ ದೇವಾಲಯಕ್ಕೆ ಕಲ್ಲು ಎಸೆದ ಯುವಕ, ವಾತಾವರಣ ಉದ್ವಿಗ್ನ
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎರಡೂ ಸಮುದಾಯದ ಜನರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಯುವಕನನ್ನು ತಮಗೆ ಒಪ್ಪಿಸುವಂತೆ ಹಿಂದೂ ಯುವಕರ ಪಡೆ ಒತ್ತಾಯಿಸಿತು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಕಲ್ಲೆಸೆತ ಆರೋಪಿ

ಬೆಳಗಾವಿ: ನಗರದ (Belagavi news) ಪಾಂಗೂಳ್ ಗಲ್ಲಿಯಲ್ಲಿರುವ ದಕ್ಷಿಣ ಭಾರತದ ಏಕೈಕ ಅಶ್ವತ್ಥಾಮ ದೇವಸ್ಥಾನಕ್ಕೆ ಮುಸ್ಲಿಂ ಯುವಕನೊಬ್ಬ ಕಲ್ಲು ಹೊಡೆದಿದ್ದಾನೆ (Stone Pelting) ಎಂಬ ಆರೋಪ ಕೇಳಿಬಂದಿದೆ. ಕಲ್ಲು ಎಸೆದ ಬಳಿಕ ಆತ ಪರಾರಿಯಾಗಲು (Crime news) ಯತ್ನಿಸಿದ್ದಾನೆ. ಆಗ ಸ್ಥಳೀಯರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಬೆಳಗಾವಿ ಉಜ್ವಲನಗರದ ನಿವಾಸಿ ಯಾಸೀರ್ ಯೂಸುಫ್ (19) ಎಂಬಾತನೇ ಆರೋಪಿ ಎಂದು ಗುರುತಿಸಲಾಗಿದೆ.
ಉಜ್ವಲ್ ನಗರದ ನಿವಾಸಿ ಯಾಸೀರ್ ಎಂಬಾತ ಬುಧವಾರ ರಾತ್ರಿ ದೇಗುಲಕ್ಕೆ ಕಲ್ಲು ತೂರಿದ್ದಾನೆ. ತಕ್ಷಣವೇ ಧಾವಿಸಿ ಬಂದ ಸ್ಥಳೀಯರು ಯಾಸೀರ್ನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಎರಡೂ ಸಮುದಾಯದ ಜನರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಯುವಕನನ್ನು ತಮಗೆ ಒಪ್ಪಿಸುವಂತೆ ಹಿಂದೂ ಯುವಕರ ಪಡೆ ಒತ್ತಾಯಿಸಿತು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಮತ್ತು ಕೆಎಸ್‌ಆರ್‌ಪಿ ತುಕಡಿಯನ್ನು ದೇವಸ್ಥಾನದ ಬಳಿ ನಿಯೋಜಿಸಲಾಗಿದೆ.
ಈ ಪ್ರಕರಣವನ್ನು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಇತ್ತೀಚೆಗೆ ಹೋಳಿ ಹಬ್ಬದಂದು ಹಿಂದೂ ಯುವಕನೊಬ್ಬ ಮೆರವಣಿಗೆಯಲ್ಲಿ ಬುರ್ಖಾ ಧರಿಸಿ ನರ್ತಿಸಿ ಇಸ್ಲಾಂ ಧರ್ಮಕ್ಕೆ ಅವಮಾನಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಕಲ್ಲು ಎಸೆದಿರಬಹುದು ಎಂದು ಹೇಳಲಾಗುತ್ತಿದೆ. ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮರಳು ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರ ಸಾವು
ಕೊಪ್ಪಳ: ಅಕ್ರಮವಾಗಿ ಮರಳು (sand mafia) ಸಾಗಿಸುತ್ತಿದ್ದ ಟಿಪ್ಪರ್ ಹರಿದು (Road Accident News) ಬೈಕ್ ಸವಾರರಿಬ್ಬರು (bike riders) ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppala News) ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ನಡೆದಿದೆ. ರಮೇಶ ಜವಳಗೇರಿ (27), ಸಿದ್ದಪ್ಪ ಪ್ಯಾಟ್ಯಾಳ್ (34) ಮೃತ ಯುವಕರು. ಸಾವನ್ನಪ್ಪಿರುವ ಇಬ್ಬರು ಯುವಕರು ಕನಕಗಿರಿ ತಾಲೂಕಿನ ಗುಡೂರಿನ ನಿವಾಸಿಗಳಾಗಿದ್ದು, ಇಂದು ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಹರಿದಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿ ಯುವಕರ ದೇಹ ಛಿದ್ರವಾಗಿದೆ.
ನವಲಿ ಕಡೆಯಿಂದ ಗುಡೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಪೈಕಿ ಒಬ್ಬನ ಮೃತದೇಹ ಛಿದ್ರ ಛಿದ್ರವಾಗಿದೆ. ರಸ್ತೆ ತುಂಬ ದೇಹದ ಮಾಂಸ ಚೆಲ್ಲಾಪಿಲ್ಲಿಯಾಗಿದೆ. ಮತ್ತೋರ್ವ ಯುವಕನ ತಲೆ ಛದ್ರಗೊಂಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಗಲು ರಾತ್ರಿ ಎನ್ನದೇ ಇಲ್ಲಿ ಮರಳು ತುಂಬಿದ ಟಿಪ್ಪರ್ ಗಳು ಓಡಾಡುತ್ತಿದ್ದು, ಅಕ್ರಮ ಮರಳು ದಂಧೆಗೆ ಯುವಕರು ಬಲಿಯಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಈ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Self Harming: ಹಂಪಿ ಪ್ರವಾಸದಲ್ಲಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ; ಒಬ್ಬರ ಸಾವು