ನ್ಯಾಯಾಧೀಶರ ಪತ್ನಿ ಶವವಾಗಿ ರೈಲಿನ ಶೌಚಾಲಯದಲ್ಲಿ ಪತ್ತೆ
ರಾಜಸ್ಥಾನದ ನ್ಯಾಯಾಧೀಶರ ಪತ್ನಿ ರೈಲಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಉಷಾ ಚೌಹಾಣ್ ಮೃತರು. ಅವರು ತಮ್ಮ ಪತಿ ರಾಜಸ್ಥಾನದ ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ ಅವರೊಂದಿಗೆ ಜೋಧ್‌ಪುರದಿಂದ ನಿಂಬಹೆರಾಕ್ಕೆ ಮನೆಗೆ ಮರಳುತ್ತಿದ್ದ ಈ ಘಟನೆ ನಡೆದಿದೆ. ಜೋರಾ ನಿಲ್ದಾಣದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ -
ಜೈಪುರ: ರಾಜಸ್ಥಾನದ (Rajasthan) ನ್ಯಾಯಾಧೀಶರ ಪತ್ನಿ ರೈಲಿನ ಶೌಚಾಲಯದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ (Kanchiguda-Bhagat Ki Kothi Express) ರೈಲಿನಲ್ಲಿ ನಡೆದಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ (Additional District Judge Rajkumar Chauhan) ಅವರ ಪತ್ನಿ ಉಷಾ ಚೌಹಾಣ್ ಮೃತರು. ಅವರು ತಮ್ಮ ಪತಿಯೊಂದಿಗೆ ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ (17606) ರೈಲಿನಲ್ಲಿ ಜೋಧ್‌ಪುರದಿಂದ ನಿಂಬಹೆರಾಕ್ಕೆ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಶೌಚಾಲಯದ ಬಾಗಿಲನ್ನು ರಕ್ಷಣಾ ತಂಡ ಒಡೆದು ಅಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಉಷಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.
ರಾಜಸ್ಥಾನದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜ್‌ಕುಮಾರ್ ಚೌಹಾಣ್ ಅವರು ತಮ್ಮ ಪತ್ನಿ ಉಷಾ ಚೌಹಾಣ್ ಅವರೊಂದಿಗೆ ಕಾಂಚಿಗುಡ-ಭಗತ್ ಕಿ ಕೋಥಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮನೆಗೆ ಮರಳುತ್ತಿದ್ದರು.
Leopard attack: ಚದುಮನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಹಾಡಹಗಲೇ ಚಿರತೆ ದಾಳಿ, ಜಾನುವಾರುಗಳ ಸಾವು
ರೈಲಿನಲ್ಲಿ ಶೌಚಾಲಯಕ್ಕೆಂದು ಹೋಗಿದ್ದ ಉಷಾ ಅವರು ದೀರ್ಘಕಾಲದವರೆಗೆ ಮರಳಿ ಬಾರದೇ ಇದ್ದುದರಿಂದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಜೋರಾ ನಿಲ್ದಾಣದಲ್ಲಿ ಶೌಚಾಲಯದ ಬಾಗಿಲು ಒಡೆದರು. ಆಗ ಅಲ್ಲಿ ಉಷಾ ಅವರು ಅದಾಗಲೇ ಸಾವನ್ನಪ್ಪಿದ್ದರು.
ರಾಜ್‌ಕುಮಾರ್ ಚೌಹಾಣ್ ಮತ್ತು ಅವರ ಪತ್ನಿ ಜೋಧ್‌ಪುರದಿಂದ ನಿಂಬಹೆರಾಕ್ಕೆ ಮರಳಿ ಬರುತ್ತಿದ್ದರು. ಒಟ್ಟಿಗೆ ಪ್ರಯಾಣಿಸುತ್ತಿದ್ದರೂ ಅವರು ಪ್ರತ್ಯೇಕ ಬೋಗಿಗಳಲ್ಲಿ ಕುಳಿತಿದ್ದರು. ರೈಲು ನಿಂಬಹೆರಾಕ್ಕೆ ಬರುವ ಕೆಲ ಸಮಯದ ಮೊದಲು ಉಷಾ ಚೌಹಾಣ್ ಅವರು ಶೌಚಾಲಯಕ್ಕೆ ಹೋಗುವುದಾಗಿ ಹೇಳಲು ಪತಿಗೆ ಕರೆ ಮಾಡಿದರು.
ರೈಲು ನಿಂಬಹೆರಾ ನಿಲ್ದಾಣ ತಲುಪಿದಾಗ ರಾಜ್ ಕುಮಾರ್ ಅವರು ರೈಲಿನಿಂದ ಇಳಿದು ಪತ್ನಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದರು. ಆದರೆ ಅವರು ರೈಲಿನಿಂದ ಇಳಿಯದೇ ಇದ್ದಾಗ ಗಾಬರಿಗೊಂಡು ತಕ್ಷಣ ಜಿಆರ್‌ಪಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಜಿಆರ್‌ಪಿ ತಂಡವು ನಿಂಬಹೆರಾ ನಿಲ್ದಾಣದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿತ್ತು. ರೈಲಿನಿಂದ ಉಷಾ ಚೌಹಾಣ್ ಇಳಿದಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಮೇಲೆ ಅವರು ರೈಲಿನಲ್ಲೇ ಇರ ಬಹುದು ಎಂದು ಅರಿತು ರೈಲು ಮಂದಸೌರ್ ಕಡೆಗೆ ಚಲಿಸುತ್ತಿದ್ದಂತೆ ಹುಡುಕಾಟ ತೀವ್ರಗೊಳಿಸಲಾಯಿತು.
ಮಂದಸೌರ್ ನಿಲ್ದಾಣದಲ್ಲಿ ರೈಲಿನ ಶೌಚಾಲಯದ ಬಾಗಿಲು ತೆರೆಯದೇ ಇರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಬಾಗಿಲನ್ನು ತೆರೆಯಲು ಪ್ರಯತ್ನಿಸಿ ವಿಫಲರಾದರು. ಬಳಿಕ ರತ್ಲಂ ಜಿಲ್ಲೆಯ ಜವೊರಾ ನಿಲ್ದಾಣದಲ್ಲಿಶೌಚಾಲಯದ ಬಾಗಿಲು ತೆರೆದು ನೋಡಿದಾಗ ಉಷಾ ಚೌಹಾಣ್ ಅವರು ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ನೋಡಿ, ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
Murder Case: ರುಂಡವಿಲ್ಲದ ಮಹಿಳೆಯ ಶವದ ರಹಸ್ಯ ಬಯಲು: ಬಂಗಾರದ ಆಸೆಗಾಗಿ ಕೊಂದ ಪಾಪಿ!
ಉಷಾ ಅವರಿಗೆ ಮೂಕ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕುಟುಂಬವು ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದರಿಂದ ಅಗತ್ಯ ಕಾನೂನು ನಿಯಮಗಳನ್ನು ಪೂರ್ಣಗೊಳಿಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.