ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hidden Camera: ಸಿನಿಮಾ ಥಿಯೇಟರ್‌ನ ಮಹಿಳಾ ಟಾಯ್ಲೆಟ್‌ನಲ್ಲಿ ಗುಪ್ತ ಕ್ಯಾಮೆರಾ ಇಟ್ಟ ವಿಕೃತಕಾಮಿ!

ಸಿನಿಮಾ ನೋಡಲು ಬಂದಿದ್ದ ಮಹಿಳೆಯರು ವಾಶ್‌ರೂಮ್‌ಗೆ ಹೋದಾಗ, ಕ್ಯಾಮೆರಾ ಕಂಡು ಶಾಕ್ ಆಗಿದ್ದಾರೆ. ನಂತರ ಆರೋಪಿಯನ್ನು ಹಿಡಿದು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗುಪ್ತ ಕ್ಯಾಮರಾ ಕಂಡ ಮಹಿಳೆಯರು ಇದನ್ನು ಗಮನಿಸಿ ತಕ್ಷಣವೇ ಹೊರಬಂದು ಕಿರುಚಾಡಿದ್ದಾರೆ. ಇದರಿಂದ ಥಿಯೇಟರ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸಿನಿಮಾ ಥಿಯೇಟರ್‌ನ ಮಹಿಳಾ ಟಾಯ್ಲೆಟ್‌ನಲ್ಲಿ ಗುಪ್ತ ಕ್ಯಾಮೆರಾ ಇಟ್ಟ ವಿಕೃತ

ಸಿನಿಮಾ ಥಿಯೇಟರ್‌ನಲ್ಲಿ ಗುಪ್ತ ಕ್ಯಾಮರಾ -

ಹರೀಶ್‌ ಕೇರ
ಹರೀಶ್‌ ಕೇರ Jan 5, 2026 9:03 AM

ಬೆಂಗಳೂರು, ಜ.05 : ಬೆಂಗಳೂರಿನ (Bengaluru Crime news) ಸಿನಿಮಾ ಥಿಯೇಟರ್‌ ಒಂದರಲ್ಲಿ ಲೇಡೀಸ್ ಟಾಯ್ಲೆಟ್ ರೂಮ್‌ನಲ್ಲಿ ಕ್ಯಾಮೆರಾ ಇಟ್ಟು (Hidden Camera) ಯುವಕನೊಬ್ಬ ವಿಕೃತಿ ಮೆರೆದಿದ್ದಾನೆ. ಮಡಿವಾಳದಲ್ಲಿರುವ ಸಂಧ್ಯಾ ಥಿಯೇಟರ್‌ನ (cinema theatre)‌ ಮಹಿಳಾ ಶೌಚಾಲಯದಲ್ಲಿ ವಿಕೃತಕಾಮಿಯೊಬ್ಬ ಗುಪ್ತ ಕ್ಯಾಮರಾ ಇಟ್ಟಿದ್ದ. ಸಿನಿಮಾ ನೋಡಲು ಬಂದಿದ್ದ ಮಹಿಳೆಯರು ಇದನ್ನು ಪತ್ತೆಹಚ್ಚಿ, ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ನುವ್ವು ನಾಕು ನಚ್ಚಾವ್’ ಸಿನಿಮಾ ನೋಡಲು ಬಂದಿದ್ದ ಮಹಿಳೆಯರು ವಾಶ್‌ರೂಮ್‌ಗೆ ಹೋದಾಗ, ಕ್ಯಾಮೆರಾ ಕಂಡು ಶಾಕ್ ಆಗಿದ್ದಾರೆ. ನಂತರ ಆರೋಪಿಯನ್ನು ಹಿಡಿದು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗುಪ್ತ ಕ್ಯಾಮರಾ ಕಂಡ ಮಹಿಳೆಯರು ಇದನ್ನು ಗಮನಿಸಿ ತಕ್ಷಣವೇ ಹೊರಬಂದು ಕಿರುಚಾಡಿದ್ದಾರೆ. ಇದರಿಂದ ಥಿಯೇಟರ್ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ದೇವರಾಯನದುರ್ಗದಲ್ಲಿ 11 ಕೋತಿಗಳ ಕಳೇಬರ ಪತ್ತೆ, ವಿಷಪ್ರಾಶನ ಶಂಕೆ

ತುಮಕೂರು : ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ 11 ಮಂಗಗಳು ನಿಗೂಢವಾಗಿ ಸಾವನ್ನಪ್ಪಿವೆ. ತುಮಕೂರು ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 2 ದಿನಗಳ ಅಂತರದಲ್ಲಿ ಒಟ್ಟು 11 ಮಂಗಗಳ ಕಳೇಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮಂಗಗಳಿಗೆ ವಿಷಪ್ರಾಷನ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಮೊದಲ ದಿನ 7 ಮಂಗಗಳು ಹಾಗೂ ಎರಡನೇ ದಿನ 4 ಮಂಗಗಳ ಕಳೇಬರ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿಯನ್ನು ಆಧರಿಸಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಅನುಮಾನಗೊಂಡು ಅರಣ್ಯ ಪ್ರದೇಶದಲ್ಲಿ ಎರಡು ದಿನಗಳ ಕಾಲ ಶೋಧ ನಡೆಸಿದ್ದಾರೆ. ಮಂಗಗಳು ಯಾವುದೇ ಕಾಯಿಲೆಯಿಂದ ಮೃತಪಟ್ಟಿಲ್ಲ ಎಂಬುದು ದೃಢಪಟ್ಟಿದೆ. ಮಂಗಗಳ ಸಾವಿನ ಕಾರಣ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಊರ್ಡಿಗಿರಿಯ ಪಶು ಆಸ್ಪತ್ರೆಯಲ್ಲಿ ಮಂಗಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಪರೀಕ್ಷೆ ವೇಳೆ ಮೃತ ಮಂಗಗಳ ದೇಹ ಹಾಗೂ ಕರುಳಿನಲ್ಲಿ ಅನ್ನ ಪತ್ತೆಯಾಗಿದೆ.

ಯಲ್ಲಾಪುರ ರಂಜಿತಾ ಹತ್ಯೆ ಪ್ರಕರಣ; ಆರೋಪಿ ರಫೀಕ್‌ ಶವ ಕಾಡಿನಲ್ಲಿ ಪತ್ತೆ!