Bengaluru Crime: ಡ್ರಗ್ ಪೆಡ್ಲರ್‌ಗಳ ಜೊತೆ ಪಾರ್ಟಿ ಮಾಡಿದ 11 ಪೊಲೀಸ್ ಅಧಿಕಾರಿಗಳ ಅಮಾನತು
Police: ಪೊಲೀಸರು ಮಾಮೂಲಿ ಪಡೆಯುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ಕಡಿಮೆ ಬೆಲೆಗೆ ಟೈಡಲ್ ಮಾತ್ರೆ ಖರೀದಿಸಿ 300 400 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಖರೀದಿಸಿ ಪೊಲೀಸರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದರು. ಪ್ರತಿ ತಿಂಗಳು ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳಿಗೆ ಹಣ ನೀಡುತ್ತಿದ್ದರು.

-

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru Crime News) ಡ್ರಗ್ ಪೆಡ್ಲರ್‌ಗಳ (Drug peddlers) ಜೊತೆಗೆ ಹಲವು ಪೊಲೀಸ್ ಅಧಿಕಾರಿಗಳು (police) ಶಾಮೀಲಾಗಿರುವುದು ಕಂಡು ಬಂದಿದೆ. ಡ್ರಗ್ ಪೆಡ್ಲರ್ಸ್ ಜೊತೆಗೆ ಪಾರ್ಟಿ ಮಾಡಿದ ಎರಡು ಪೊಲೀಸ್ ಠಾಣೆಗಳ ಒಟ್ಟು 11 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಮಾನತು (Suspend) ಮಾಡಲಾಗಿದೆ. ಒಂದು ಕಡೆ ರಾಜ್ಯ ಸರ್ಕಾರ ಡ್ರಗ್ಸ್ ಮುಕ್ತ ಬೆಂಗಳೂರು ಕನಸು ಕಾಣುತ್ತಿದೆ. ಇನ್ನೊಂದು ಕಡೆ ಕೆಲವು ಪೊಲೀಸರೇ ಈ ದುಷ್ಕರ್ಮಿಗಳಿಗೆ ಬೆಂಬಲವಾಗಿ ನಿಂತಿದ್ದು, ಇಲಾಖೆಯೇ ಮುಖ ಮುಚ್ಚಿಕೊಳ್ಳುವಂಥ ಪರಿಸ್ಥಿತಿ ತಂದಿಟ್ಟಿದ್ದಾರೆ.
ಚಾಮರಾಜಪೇಟೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಟಿ ಮಂಜಣ್ಣ ಹೆಡ್ ಕಾನ್ಸೆಪ್ಟ್ಗಳಾದ ರಮೇಶ್ ಶಿವರಾಜ್ ಪಿಸಿ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಜಯನಗರ ಠಾಣೆಯ ಎ ಎಸ್ ಐ ಕುಮಾರ್ ಹೆಡ್ ಕಾನ್ಸ್ಟೇಬಲ್ ಆನಂದ್ ಸಿಬ್ಬಂದಿಗಳಾದ ಬಸವನಗೌಡ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇವರು ಡ್ರಗ್ಸ್ ಪೆಡ್ಲರುಗಳ ಜೊತೆಗೆ ನೇರವಾಗಿ ನಂಟು ಹೊಂದಿರುವುದಲ್ಲದೆ ಅವರ ಜೊತೆಗೆ ಪಾರ್ಟಿ ಸಹ ಮಾಡಿದ್ದಾರೆ. ತಿಂಗಳಿಗೆ 1.5 ರಿಂದ 2 ಲಕ್ಷದವರೆಗೆ ಮಾಮೂಲಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಆಗಸ್ಟ್ 22ರಂದು ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸಲಾಗಿತ್ತು. ಇವರು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಬರುವ ಟೈಡಲ್-100 ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದರು. ಸಲ್ಮಾನ್, ನಯಾಜ್ ಉಲ್ಲಾ , ನಯಾಜ್ ಖಾನ್ ಸೇರಿದಂತೆ ಆರು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಆರೋಪಿಗಳ ಬಳಿ 1000 ಟೈಡಲ್-100 ಮಾತ್ರೆಗಳು ಪತ್ತೆಯಾಗಿದ್ದವು. ಬಂಧಿತ ಆರೋಪಿಗಳ ಮೊಬೈಲ್ ಪರಿಶೀಲನೆಯ ವೇಳೆ ಅಧಿಕಾರಿಗಳಿಗೆ ಶಾಕ್ ಆಗಿದೆ. ಪೊಲೀಸರ ಜೊತೆಗೆ ಪೆಡ್ಲರ್‌ಗಳು ನಿರಂತರ ಸಂಪರ್ಕದಲ್ಲಿದ್ದರು. ಹಣಕಾಸಿಗೆ ಸಂಬಂಧಿಸಿದ ಮೆಸೇಜ್ ಮತ್ತು ಆಡಿಯೋಗಳು ಸಹ ಪತ್ತೆಯಾಗಿದೆ. ಆರೋಪಿಗಳ ಜೊತೆಗೆ ಪೊಲೀಸರು ಪಾರ್ಟಿ ಮಾಡಿದ ಫೋಟೋಗಳು ಪತ್ತೆಯಾಗಿವೆ. ತನಿಖೆಗಾಗಿ ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಪೊಲೀಸರು ಮಾಮೂಲಿ ಪಡೆಯುತ್ತಿದ್ದ ಸಂಗತಿ ತನಿಖೆಯಲ್ಲಿ ಬಯಲಾಗಿದೆ. ಕಡಿಮೆ ಬೆಲೆಗೆ ಟೈಡಲ್ ಮಾತ್ರೆ ಖರೀದಿಸಿ 300 400 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ಖರೀದಿಸಿ ಪೊಲೀಸರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದರು. ಪ್ರತಿ ತಿಂಗಳು ಇನ್ಸ್ಪೆಕ್ಟರ್ ಸೇರಿದಂತೆ ಸಿಬ್ಬಂದಿಗಳಿಗೆ ಹಣ ನೀಡುತ್ತಿದ್ದರು. ತಮ್ಮ ಸಂಬಂಧಿಕರ ಖಾತೆಗೂ ಕೂಡ ಪೊಲೀಸರು ಹಣ ಹಾಕಿಸಿಕೊಂಡಿದ್ದಾರೆ. ಪೊಲೀಸರ ಕಳ್ಳಾಟಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಅವರಿಗೆ ಎಸಿಪಿ ಭರತ್ ರೆಡ್ಡಿ ವರದಿ ನೀಡಿದ್ದಾರೆ.
ಇದನ್ನೂ ಓದಿ: CCB Raid: ಡ್ರಗ್ಸ್ ಬಳಕೆ; ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಮೇಲೆ ಸಿಸಿಬಿ ದಾಳಿ