ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ನಡೆ ನುಡಿಗೆ ಸಾಮ್ಯತೆ ಸಾಧಿಸಿದವರು ಶರಣರು: ಜಿಲ್ಲಾಧಿಕಾರಿ ಜಿ.ಪ್ರಭು

12ನೇ ಶತಮಾನ ಪರಿವರ್ತನೆಯ ಕಾಲ. ಒಂದು ಸಮಾಜ ಪ್ರಗತಿ ಹೊಂದುವುದು ಜ್ಞಾನದ ಮೂಲಕ ಮಾತ್ರ ಎಂದು ಜ್ಞಾನವನ್ನು ಜನರಿಗೆ ಬಿತ್ತರಿಸುವ ಕೆಲಸವನ್ನು ಮಾಚಯ್ಯ ಅವರು ಮಾಡಿದರು. ಅಂದಿನ ವಚನಕಾರರು ಸಾರಿದ ಸಮಾನತೆ, ಸಹೋದರತೆ, ಲಿಂಗ ಸಾಮಾನತೆ, ಜಾತ್ಯತೀತತೆ ಇನ್ನು ಮುಂತಾದ ತತ್ವಗಳನ್ನು ನಮ್ಮ ಇಂದಿನ ಸಂವಿಧಾನದಲ್ಲಿ ಅಳವಡಿಸಿ ಕೊಂಡಿರುವುದನ್ನು ನಾವು ಗಮನಿಸಬಹುದು

ನಡೆ ನುಡಿಗೆ ಸಾಮ್ಯತೆ ಸಾಧಿಸಿದವರು ಶರಣರು: ಜಿಲ್ಲಾಧಿಕಾರಿ ಜಿ.ಪ್ರಭು

-

Ashok Nayak
Ashok Nayak Feb 18, 2026 10:48 PM

ಚಿಕ್ಕಬಳ್ಳಾಪುರ: ನಡೆ ನುಡಿಗೆ ಸಾಮ್ಯತೆ ಸಾಧಿಸಿ, ಸಮಾಜದ ಏಳಿಗೆಗೆ ಶ್ರಮಿಸುವ ಮೂಲಕ ವಿಶ್ವಮಾನ್ಯರಾದವರು ಶರಣರು,ಅಂತಹವರಲ್ಲಿ ಮಡಿವಾಳ ಮಾಚಯ್ಯ ಅಗ್ರಗಣ್ಯರು ಎಂದು ಜಿಲ್ಲಾಧಿಕಾರಿ ಜಿ ಪ್ರಭು ಬಣ್ಣಿಸಿದರು.

ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಭವನದಲ್ಲಿ ಆಯೋಜಿಸಿದ್ದ "ಮಡಿವಾಳ ಮಾಚಿ ದೇವರ ಜಯಂತಿ" ಕಾರ್ಯಕ್ರಮವನ್ನ ಉದ್ಘಾಟಿಸಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

12ನೇ ಶತಮಾನ ಪರಿವರ್ತನೆಯ ಕಾಲ. ಒಂದು ಸಮಾಜ ಪ್ರಗತಿ ಹೊಂದುವುದು ಜ್ಞಾನದ ಮೂಲಕ ಮಾತ್ರ ಎಂದು ಜ್ಞಾನವನ್ನು ಜನರಿಗೆ ಬಿತ್ತರಿಸುವ ಕೆಲಸವನ್ನು ಮಾಚಯ್ಯ ಅವರು ಮಾಡಿದರು. ಅಂದಿನ ವಚನಕಾರರು ಸಾರಿದ ಸಮಾನತೆ, ಸಹೋದರತೆ,ಲಿಂಗ ಸಾಮಾನತೆ, ಜಾತ್ಯತೀತತೆ ಇನ್ನು ಮುಂತಾದ ತತ್ವಗಳನ್ನು ನಮ್ಮ ಇಂದಿನ ಸಂವಿಧಾನ ದಲ್ಲಿ ಅಳವಡಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಅಂತಹ ಅಮೂಲ್ಯ ಕೊಡುಗೆಗೆ ಕಾರಣರಾದವರು ಮಾಚಯ್ಯನವರು ಒಬ್ಬರು ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: Chikkaballapur News: ಜಿಲ್ಲೆಯಲ್ಲಿ 2352 ಕಾರ್ಮಿಕರನ್ನು ಜೀತ ವಿಮುಕ್ತಿಗೊಳಿಸಿ ಪುನರ್ವಸತಿ ಕಲ್ಪಿಸಲಾಗಿದೆ

ಪ್ರಸ್ತುತ ಎಷ್ಟೆಲ್ಲ ಕಾನೂನು ಸುವ್ಯವಸ್ಥೆಗಳು ಇದ್ದರೂ ಸಹ ಇಂದಿಗೂ ಪರಿಪೂರ್ಣ ಸಮಾನತೆಯನ್ನು ಮತ್ತು ಲಿಂಗಸಮಾನತೆಯನ್ನು ತರಲಿಕ್ಕೆ ಈವರೆಗೆ ಸಾಧ್ಯವಾಗುತ್ತಿಲ್ಲ  ಇದನ್ನ ಅಂದೆ ಅರಿತಿದ್ದ ಶರಣರು ಸಮ ಸಮಾಜದ ನಿರ್ಮಾಣಕ್ಕೆ  ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದರು. ನಮ್ಮ ಕುಟುಂಬ, ನಮ್ಮ ಸಮಾಜ ಪ್ರಗತಿ ಹೊಂದಬೇಕಾದರೆ  ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಸಿಗಲಿದೆ. ಭಾರತೀಯ ಮಕ್ಕಳಿಗೆ ವಿಶ್ವಮಾನ್ಯರಾಗುವ ಎಲ್ಲ ಅವಕಾಶಗಳು ಪ್ರಸ್ತುತ ಹೆಚ್ಚಿನ ಮಟ್ಟದಲ್ಲಿ ಇವೆ ಇಂದಿನ ಯುಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಜ್ಞಾನದ ಯುಗವಾಗಿದೆ ಬುದ್ಧಿಶಕ್ತಿ ಉಚ್ಚಮಟ್ಟ ದಲ್ಲಿ ಇರುವವರಿಗೆ ಉನ್ನತ ಸ್ಥಾನಮಾನ ಸಿಗುತ್ತದೆ ಆ ನಿಟ್ಟಿನಲ್ಲಿ ಎಲ್ಲ ಸಮುದಾಯದ ಮಕ್ಕಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯೋಪಾಧ್ಯಾಯ ದೇವರಾಜು  ಮಾಚಿದೇವರ ಜೀವನ ಚರಿತ್ರೆ ಕುರಿತು ಉಪಾನ್ಯಾಸ ನೀಡಿದರು. ಮಡಿವಾಳ ಸಮಾಜ ತಳ ಸಮುದಾಯದ ಒಂದು ವರ್ಗವಾಗಿದೆ. ಈ ವರ್ಗ ದವರಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಹೆಚ್ಚಿನ ಮಟ್ಟದಲ್ಲಿ ಕಲ್ಪಿಸಿ ಕೊಡ ಬೇಕು ಮತ್ತು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು  ನಿರ್ಮಾಣವಾಗಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸ ಲಾಯಿತು. 

ಕಾರ್ಯಕ್ರಮಕ್ಕೂ ಮುನ್ನಾ ಜಾನಪದ ಕಲಾತಂಡಗಳು ಹಾಗೂ ಹೂವಿನ ಪಲ್ಲಕ್ಕಿ ಗಳೊಂದಿಗೆ ನಗರದ  ಅಂಬೇಡ್ಕರ್ ಭವನದದಿಂದ ಬಿ.ಬಿ ರಸ್ತೆ ಮೂಲಕ ಜಿಲ್ಲಾ ಕನ್ನಡ ಭವನದವರೆಗೆ ಅದ್ದೂರಿಯ ಮೆರವಣಿಗೆ ಸಾಗಿತು. 

ಈ ಸಂದರ್ಭದಲ್ಲಿ ಸಮುದಾಯ ಮುಖಂಡರು ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ  ಉಪಸ್ಥಿತರಿದ್ದರು.