Crime News: ಪರಸ್ತ್ರೀಗಾಗಿ ಪತ್ನಿಯನ್ನೇ ಕೊಲೆ ಮಾಡಲು ಮುಂದಾದ ಬೆಂಗಳೂರು ಡಿವೈಎಸ್‌ಪಿ
ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಡಿವೈಎಸ್‌ಪಿ ಗೋವರ್ದನ್ ತನ್ನ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಗೋವರ್ದನ್ ಮತ್ತು ಅವರ ತಂದೆ-ತಾಯಿಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
![ಪರಸ್ತ್ರೀಗಾಗಿ ಪತ್ನಿಯನ್ನೇ ಕೊಲೆ ಮಾಡಲು ಮುಂದಾದ ಡಿವೈಎಸ್‌ಪಿ](https://cdn-vishwavani-prod.hindverse.com/media/original_images/Crime_News_1.jpg)
ಸಾಂದರ್ಭಿಕ ಚಿತ್ರ.
![Profile](https://vishwavani.news/static/img/user.png)
ಬೆಂಗಳೂರು: ಡಿವೈಎಸ್‌ಪಿ ಗೋವರ್ದನ್ ತನ್ನ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಗೋವರ್ದನ್ ಮತ್ತು ಅವರ ತಂದೆ-ತಾಯಿಯ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (Crime news). ಪರಸ್ತ್ರೀಗಾಗಿ ಗೋವರ್ಧನ್ ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾಗಿ ಅವರ ಪತ್ನಿ ಅಮೃತಾ ದೂರು ನೀಡಿದ್ದಾರೆ. ಮಾತ್ರವಲ್ಲ ಪತಿಯ ಜತೆಗೆ ಆತ್ಮೀಯವಾಗಿದ್ದ ಪ್ರೊಬೆಷನರಿ ಮಹಿಳಾ ಡಿವೈಎಸ್‌ಪಿ ವಿರುದ್ಧವೂ ಅಮೃತಾ ದೂರು ನೀಡಿದ್ದಾರೆ. ಇನ್ನು ಅತ್ತೆ ಸೀಮೆಎಣ್ಣೆ ಸುರಿದು ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದೂ ಅವರ ಆರೋಪಿಸಿದ್ದಾರೆ. ಗೋವರ್ಧನ್ ಜತೆ ಆತ್ಮೀಯವಾಗಿರುವ ಪ್ರೊಬೆಷನರಿ ಮಹಿಳಾ ಡಿವೈಎಸ್‌ಪಿಗೆ ಮಕ್ಕಳಿದ್ದಾರೆ ಎನ್ನಲಾಗಿದೆ.
ಪರಸ್ತ್ರೀಯೊಂದಿಗೆ ಸಲುಗೆಯಿಂದ ಇದ್ದಿದ್ದನ್ನು ವಿರೋಧಿಸಿದ್ದರಿಂದ ಗೋವರ್ದನ್ ಹಲ್ಲೆ ನಡೆಸಿದ್ದಾರೆಂತೆ. ಇತ್ತ ಗೋವರ್ದನ್ ಗೆಳತಿ ಅಮೃತಾಗೆ ಡಿವೋರ್ಸ್ ಕೊಡುವಂತೆಯೂ ಆಗ್ರಹಿಸುತ್ತಿದ್ದಳು ಎನ್ನವ ಆರೋಪವೂ ಕೇಳಿ ಬಂದಿದೆ.
ಇದನ್ನು ಅತ್ತೆ-ಮಾವ ಬಳಿ ಹೇಳಿದಾಗ ಅವರೂ ಕೊಲೆಗೆ ಯತ್ನಿಸಿದ್ದಾರೆ ಎಂದು ಅಮೃತಾ ದೂರಿನಲ್ಲಿ ವಿವರಿಸಿದ್ದಾರೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
50 ವರ್ಷದ ಅಂಕಲ್ ಜತೆ 18ರ ಯುವತಿ ಪರಾರಿ
ಹುಬ್ಬಳ್ಳಿ: 18 ವರ್ಷದ ಯುವತಿ ಜತೆ 50 ವರ್ಷದ ಅಂಕಲ್ ಲವ್ವಿ ಡವ್ವಿ ಶುರು ಮಾಡಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದ್ದು, ಅಂಕಲ್‌ನ ಪ್ರೇಮ ಪಾಷದಲ್ಲಿ ಸಿಲುಕಿದ ಯುವತಿ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ಕೊಲ್ಹಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ. ಯುವತಿಯ ತಲೆಕೆಡೆಸಿ ಆಕೆಯೊಂದಿಗೆ ಅಂಕಲ್ ಊರು ಬಿಟ್ಟು ಪರಾರಿಯಾಗಿಯಾಗಿದ್ದು, ಇದರಿಂದ ಯುವತಿಯ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಜೋಡಿ ಓಡಿ ಹೋಗಿ 40 ದಿನಗಳಾದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಯುವತಿ ಮನೆಯವರು ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Crime news: ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವತಿ, ಮರ್ಯಾದೆಗೇಡು ಹತ್ಯೆ ಶಂಕೆ
ಹುಬ್ಬಳ್ಳಿ ಚಾಲುಕ್ಯ ನಗರದ 18 ವರ್ಷದ ಯುವತಿ ಅದೇ ಏರಿಯಾದ 50 ವರ್ಷದ ಪ್ರಕಾಶ್ ಗೋಪಿ ಎಂಬಾತನ ತೆ ಓಡಿಹೋಗಿದ್ದಾಳೆ ಎನ್ನಲಾಗಿದೆ. ಯುವತಿಯ ಬಡತನವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂಕಲ್ ಆಕೆಯ ತಲೆ ಕೆಡಿಸಿದ್ದಾನೆ. ಯುವತಿಯ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾರೆ. ಅಂಕಲ್ ಪ್ರಕಾಶ್‌ಗೆ ಮದುವೆಯಾಗಿ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ಎರಡು ಮೂರು ವರ್ಷದ ಹಿಂದೆ ಯುವತಿಯ ಹಿಂದೆ ಬಿದ್ದಿದ್ದ.
ಈ ವಿಚಾರವಾಗಿ ಕಳೆದ ವರ್ಷ ಪ್ರಕಾಶ್ ಮೇಲೆ ಪೋಕ್ಸೊ ಪ್ರಕರಣ ಸಹ ದಾಖಲಾಗಿತ್ತು. ಇದಾದ ಬಳಿಕ ಇತ್ತೀಚೆಗೆ ಯುವತಿಯು ತನ್ನ ಅಜ್ಜಿಯ ಮನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವಾಸವಿದ್ದಳು. ಜ. 3ರಂದು ಯುವತಿ ಅಜ್ಜಿ ಮನೆಯಿಂದ ಕಾಣೆಯಾಗಿದ್ದಳು. ಅಲ್ಲಿಂದಲೇ ಪ್ರಕಾಶ್ ಕರೆದುಕೊಂಡು ಹೋಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.