ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸೌರಭ 2026; ನಾಗಾರ್ಜುನ ಡಿಗ್ರಿ ಕಾಲೇಜಿಗೆ ಡಾ.ರಾಜಕುಮಾರ್ ಸರ್ವೋತ್ತಮ ಕಾಲೇಜು ಪರ್ಯಾಯ ಪಾರಿತೋಷಕ

Sourabha 2026: ರಂಗ ಸೌರಭದಿಂದ ಆಯೋಜಿಸಿದ್ದ ಸೌರಭ 2026; ರಾಜ್ಯಮಟ್ಟದ ಅಂತರ ಕಾಲೇಜು ರಂಗ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದ ಸಂಸ ಬಯಲು ರಂಗ ಮಂದಿರದಲ್ಲಿ ಶನಿವಾರ ನೆರವೇರಿತು.

ನಾಗಾರ್ಜುನ ಕಾಲೇಜಿಗೆ ರಾಜಕುಮಾರ್ ಸರ್ವೋತ್ತಮ ಕಾಲೇಜು ಪಾರಿತೋಷಕ

ಸೌರಭ 2026 ಅಂತರ ಕಾಲೇಜು ರಂಗಸ್ಪರ್ಧೆಗಳ ಸಮಾರೋಪ ಸಮಾರಂಭ. -

Prabhakara R
Prabhakara R Mar 1, 2026 7:21 PM

ಬೆಂಗಳೂರು: ಸೌರಭ 2026 – ರಾಜ್ಯಮಟ್ಟದ ಅಂತರ ಕಾಲೇಜು ರಂಗಸ್ಪರ್ಧೆಗಳು ಫೆಬ್ರವರಿ 11ರಿಂದ 28ವರೆಗೆ ಯಶಸ್ವಿಯಾಗಿ ನೆರವೇರಿದ್ದು, ಕಾರ್ಯಕ್ರಮದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭವು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಶನಿವಾರ ಜರುಗಿತು.

_Sourabha 2026

ಕಾರ್ಯಕ್ರಮವನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಿ ಮಾತನಾಡಿ, ಸ್ಪರ್ಧಾ ಮನೋಭಾವವನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ವಿಜಯ ರಾಘವೇಂದ್ರ, ಅರುಣ್ ಸಾಗರ್, ನಿರಂಜನ ದೇಶಪಾಂಡೆ, ಸುಜಯ್ ಶಾಸ್ತ್ರಿ ಮುಂತಾದವರು ಪಾಲ್ಗೊಂಡಿದ್ದರು. ನಾಗಾರ್ಜುನ ಡಿಗ್ರಿ ಕಾಲೇಜು ಈ ಸಾಲಿನ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಸರ್ವೋತ್ತಮ ಕಾಲೇಜು ಪರ್ಯಾಯ ಪಾರಿತೋಷಕವನ್ನು ಗೆದ್ದುಕೊಂಡಿತು.