Iran–Israel war: ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿದ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ
Iran–Israel war: ಅರಬ್ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತಾಗಿ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಇದೀಗ ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯರ ನೆರವಿಗಾಗಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಂದ ಸಹಾಯವಾಣಿ ಆರಂಭಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧ (Iran–Israel war) ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ಭಾರತದ ಹಲವು ರಾಜ್ಯಗಳ ಜನರು ಅರಬ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿದ್ದು, ಸ್ವದೇಶಕ್ಕೆ ಹಿಂತಿರುಗಲು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಕನ್ನಡಿಗರನ್ನು ಸುರಕ್ಷಿತಾಗಿ ಕರೆತರಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಇದೀಗ ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯರ ನೆರವಿಗಾಗಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಂದ ಸಹಾಯವಾಣಿ ಸಂಖ್ಯೆ (Helpline Numbers) ಆರಂಭಿಸಲಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರು, ಈ ಕೆಳಕಂಡ ದೇಶಗಳ ಭಾರತ ರಾಯಭಾರ ಕಚೇರಿಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದು.
ಸಹಾಯವಾಣಿ ಸಂಖ್ಯೆಗಳು
ಇಸ್ರೇಲ್: +972-54-7520711
ಇರಾನ್: +98 9128109115, +98912 810 9109, +98 912 8109102, +98993 217 9359
ಸೌದಿ ಅರೇಬಿಯಾ:
ರಿಯಾಧ್: 00-966-11-4884697 | 00-966-542126748 (WhatsApp) 800 247 1234 (Toll-Free)
ಜೆಡ್ಡಾ: WhatsApp: +966536209704, Landline: 00966 126648660/00966122614093, Mobile: +966 556122301 | Toll-Free: 800 244 0003
ಯುಎಇ: Toll-Free: 800-46342 | WhatsApp: +9715430 90571
ಕತಾರ್: 00974-55647502
ಬಹ್ರೇನ್: 00973-39418071
ಜೋರ್ಡಾನ್: 00962-770 422 276
ಒಮಾನ್: Toll-Free: 8007 1234 | WhatsApp: +9689828 2270
ಇರಾಕ್: +964 771 651 1185 (English & Hindi), +964 770 444 4899 (Arabic)
ಕುವೈತ್: +96565501946
ಪ್ಯಾಲೆಸ್ತೀನ್: +970 592916418

ರಾಜ್ಯದ ವಿವಿಧ ಜಿಲ್ಲಾಡಳಿತಗಳಿಂದ ಸಹಾಯವಾಣಿ ಆರಂಭ
ಯುದ್ಧಪೀಡಿತ ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು. ಈ ಹಿನ್ನೆಲೆಯಲ್ಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭಿಸಲಾಗಿದೆ.
ಬೆಂ. ಗ್ರಾಮಾಂತರ ಜಿಲ್ಲಾಡಳಿತ ಸಹಾಯವಾಣಿ:
ಗಲ್ಫ್ ರಾಷ್ಟ್ರಗಳಲ್ಲಿ ಜಿಲ್ಲೆಯವರು ಸಿಲುಕಿದ್ದರೆ ನೆರವು ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯ ವಿಪತ್ತು ನಿರ್ವಹಣಾ ಕೇಂದ್ರ ದೂ.ಸಂ: 080-28388005 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಲಾರ ಜಿಲ್ಲಾಡಳಿತ ಸಹಾಯವಾಣಿ
ಕೋಲಾರ ಜಿಲ್ಲೆಯಲ್ಲೂ ವಿಪತ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದ್ದು, 9740050061 ಅಥವಾ 9606241449 ನಂಬರ್ಗೆ ಕರೆ ಮಾಡಬಹುದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾಹಿತಿ ನೀಡಿದ್ದಾರೆ.
ಉಡುಪಿ ಶಾಸಕರ ಕಚೇರಿ ಸಹಾಯವಾಣಿ
ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಯುದ್ಧದ ಆತಂಕ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಗಾಗಲೇ ಕೇಂದ್ರ ಸರಕಾರ ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗೆ ಕ್ರಮಗಳನ್ನು ಕೈಗೊಂಡಿದೆ. ಯುದ್ಧ ಪೀಡಿತ ದೇಶದಲ್ಲಿರುವ ಉಡುಪಿ ಮೂಲದ ಭಾರತೀಯರ ಸಹಾಯಕ್ಕಾಗಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಿದ್ದು, ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಸಹಾಯವಾಣಿ ನಂ.: 8197421962, 9901190402, 9606698577, 9620788889, 9886212643, 9964023344
ಇರಾನ್ ಮೇಲೆ ಅಮೆರಿಕದಿಂದ ಅನಗತ್ಯ ದಾಳಿ; ಖಮೇನಿ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದ ಸಿಎಂ
ದುಬೈ ಒಕ್ಕಲಿಗರ ಸಂಘದ ಸಹಾಯವಾಣಿ
ದುಬೈನಲ್ಲಿ ಇರುವ ಕನ್ನಡಿಗರ ರಕ್ಷಣೆಗೆ ದುಬೈ ಒಕ್ಕಲಿಗರ ಸಂಘ ಮುಂದಾಗಿದೆ. ಸಹಾಯ ಬೇಕಿದ್ದವರು ಸಂಪರ್ಕ ಮಾಡುವಂತೆ ದುಬೈ ಒಕ್ಕಲಿಗರ ಸಂಘ ತಿಳಿಸಿದೆ. ಊಟ, ವಸತಿ, ವಿಮಾನ ಟಿಕೆಟ್ ಏನೇ ಬೇಕಾದರೂ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು +971555114205 ಈ ನಂಬರ್ಗೆ ಸಂಪರ್ಕಿಸುವಂತೆ ಮನವಿ ಮಾಡಿದೆ.