ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೈಬರ್ ಕ್ರೈಮ್ ಹೊಸ ತಂತ್ರ.. ಸೈಲೆಂಟ್ ಕಾಲ್ ಮೂಲಕವೂ ವಂಚಿಸ್ತಾರೆ ಎಚ್ಚರ

ಕರೆ ಮಾಡಿ ಯಾರೂ ಮಾತನಾಡದೇ ಇದ್ದರೆ ಅದು ವಂಚನೆಯ ಕಾಲ್ ಆಗಿರಬಹುದು. ಆದ್ದರಿಂದ ಅಪರಿಚಿತ ಸಂಖ್ಯೆಯಿಂದ ಕರೆ ಬಂದರೆ ಎಚ್ಚರವಾಗಿರುವಂತೆ ದೂರಸಂಪರ್ಕ ಇಲಾಖೆ ಎಚ್ಚರಿಸಿದೆ. ಇನ್ನು ಮುಂದೆ ಮೊಬೈಲ್ ಗೆ ಸೈಲೆಂಟ್ ಕರೆಗಳು ಬಂದರೆ ಅದಕ್ಕೆ ಪ್ರತಿಕ್ರಿಯಿಸಿದೇ ಇರುವುದು ಒಳ್ಳೆಯದು. ಇಂತಹ ಕರೆಗಳನ್ನು ನಿರ್ಬಂಧಿಸುವುದು ಒಳ್ಳೆಯದು.

ಸೈಲೆಂಟ್ ಕಾಲ್ ಬಗ್ಗೆ ಎಚ್ಚರ

ಸಾಂದರ್ಭಿಕ ಚಿತ್ರ -

ನವದೆಹಲಿ: ದೇಶದಲ್ಲಿ ಸೈಬರ್ ವಂಚನೆಯ (Cyber fraud) ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಅಪರಿಚಿತ ಕರೆಗಳ (Silent call) ಬಗ್ಗೆ ಎಚ್ಚರಿಕೆ ವಹಿಸುವಂತೆ ದೂರ ಸಂಪರ್ಕ ಇಲಾಖೆ (Department of Telecommunications) ತಿಳಿಸಿದೆ. ಅಪರಿಚಿತ ಸಂಖ್ಯೆಯಿಂದ ಬಂದ ಕರೆಯಲ್ಲಿ ಯಾರೂ ಮಾತನಾಡದೇ ಇದ್ದರೆ ಅಂತಹ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದು ಸೈಬರ್ ವಂಚನೆಯ (scam) ಕರೆಯಾಗಿರಬಹುದು. ಇಂತಹ ಕರೆಗಳನ್ನು ಬ್ಲಾಕ್ ಮಾಡುವುದು, ಈ ಬಗ್ಗೆ ಸಂಚಾರಿ ಸಾಥಿ ಪೋರ್ಟಲ್ (Sanchar Saathi portal) ನಲ್ಲಿ ವರದಿ ಮಾಡುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಜನರನ್ನು ವಂಚಿಸಲು, ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಸೈಬರ್ ಕ್ರೈಮ್ ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಇತ್ತೀಚೆಗೆ ಕರೆ ಮಾಡಿ ಮಾತನಾಡದೇ ಇರುವುದು ಕೂಡ ಇದರಲ್ಲಿ ಒಂದಾಗಿದೆ. ಫೋನ್ ಕರೆಗಳು, ವಾಟ್ಸಾಪ್, ಇತರ ಸಂದೇಶ ಅಪ್ಲಿಕೇಶನ್ ಮೂಲಕ ಜನರನ್ನು ಸಂಪರ್ಕಿಸುವ ವಂಚಕರು ಮೊಬೈಲ್ ಗಳಲ್ಲಿರುವ ಎಲ್ಲ ಮಾಹಿತಿಯನ್ನು ಕದಿಯುತ್ತಾರೆ. ಈ ಮೂಲಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಹಣ ಕದಿಯುತ್ತಾರೆ.

Viral Video: ಪಾರ್ಕ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಣ್ಣ-ತಂಗಿಯನ್ನು ತಡೆದ ಪೊಲೀಸ್‌ ಅಧಿಕಾರಿ: ನೆಟ್ಟಿಗರಿಂದ ತರಾಟೆ

ಸೈಲೆಂಟ್ ಕರೆಗಳ ಬಗ್ಗೆ ಎಚ್ಚರಿಕೆ ನೀಡಿರುವ ದೂರಸಂಪರ್ಕ ಇಲಾಖೆ, ಬಳಕೆದಾರರು ಇಂತಹ ವಂಚನೆ ಕರೆಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಲು ಸೂಚಿಸಿದೆ.

ಏನಿದು ಸೈಲೆಂಟ್ ಕರೆ ?

ಸೈಲೆಂಟ್ ಕರೆಗಳೆಂದರೆ ಅಪರಿಚಿತ ಸಂಖ್ಯೆಯಿಂದ ಮೊಬೈಲ್ ಗೆ ಕರೆ ಬರುತ್ತದೆ. ಕರೆ ಸ್ವೀಕರಿಸಿದ ಮೇಲೆ ಇನ್ನೊಂದು ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಇದು ಸಾಮಾನ್ಯ ವಿಚಾರವಲ್ಲ. ಇದು ವಂಚನೆಯ ಕರೆಯಾಗಿರುತ್ತದೆ. ನಿಮ್ಮ ಸಾಧನ ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಲು ವಂಚಕರು ಈ ತಂತ್ರವನ್ನು ಬಳಸುತ್ತಿದ್ದಾರೆ ಎಂದು ದೂರ ಸಂಪರ್ಕ ಇಲಾಖೆ ತಿಳಿಸಿದೆ.

ಮೊಬೈಲ್ ಸಂಖ್ಯೆ ಸಕ್ರಿಯವಾಗಿದೆ ಎಂದು ವಂಚಕರು ದೃಢಪಡಿಸಿದ ಬಳಿಕ ಅದನ್ನು ಹ್ಯಾಕ್ ಮಾಡಿ ಸಾಧನದಲ್ಲಿರುವ ಅಮೂಲ್ಯ ಮಾಹಿತಿಗಳನ್ನು ಪಡೆಯುತ್ತಾರೆ. ಈ ಮೂಲಕ ಜನರು ವಂಚನೆಗೆ ಗುರಿಯಾಗುತ್ತಾರೆ. ಇಂತಹ ಕರೆಗಳು ಬಂದರೆ ಅದನ್ನು ತಕ್ಷಣ ನಿರ್ಬಂಧಿಸಬೇಕು.

ಅಪರಿಚಿತ ಸಂಖ್ಯೆಯಿಂದ ಸೈಲೆಂಟ್ ಕರೆಗಳು ಬಂದರೆ ಅದನ್ನು ತಕ್ಷಣ ನಿರ್ಬಂಧಿಸಲು ಸಂಚಾರ್ ಸಾಥಿ ಪೋರ್ಟಲ್ ನಲ್ಲಿ ವರದಿ ಮಾಡುವಂತೆ ದೂರವಾಣಿ ಸಂಪರ್ಕ ಇಲಾಖೆ ತಿಳಿಸಿದೆ.

Karnataka Winter Session: ಕುಣಿಗಲ್‌ಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ನಿವಾರಣೆ: ಸಿಎಂ ಭರವಸೆ

ಹೇಗೆ ನಿರ್ಬಂಧಿಸುವುದು?

ಸಂಚಾರ್ ಸಾಥಿ ಪೋರ್ಟಲ್ ನಲ್ಲಿ ಸೈಲೆಂಟ್ ಕರೆಗಳ ಬಗ್ಗೆ ದೂರು ಸಲ್ಲಿಸಬಹುದು. ಈ ಮೂಲಕ ನಕಲಿ ಸಂದೇಶ ಅಥವಾ ಕರೆಗಳ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಾಗಿ sancharsaathi.gov.in ವೆಬ್ ಸೈಟ್ ನಲ್ಲಿ ಲಾಗಿನ್ ಆಗಿ ಸಿಟಿಜನ್ ಸೆಂಟ್ರಿಕ್ ಸರ್ವೀಸಸ್ ವಿಭಾಗದ ಅಡಿಯಲ್ಲಿ "ಚಕ್ಷು" ಎಂದಿರುವ ಆಯ್ಕೆಯನ್ನು ಕ್ಲಿಕ್ ಮಾಡಿ ಅಲ್ಲಿ ನೀಡಿರುವ ವಿವರವನ್ನು ಸಲ್ಲಿಸಿ. ಇಲ್ಲಿ ವಯಕ್ತಿಕ ಮಾಹಿತಿಯನ್ನು ಕೂಡ ಒದಗಿಸಬೇಕಾಗುತ್ತದೆ. ಪರಿಶೀಲನೆಗಾಗಿ ನೀಡುವ ಪಾಸ್ವರ್ಡ್ ಅನ್ನು ಸಲ್ಲಿಸಿದರೆ ದೂರು ಅಧಿಕೃತವಾಗಿ ದಾಖಲಾಗುತ್ತದೆ. ಮುಂದೆ ಇದರ ಕುರಿತು ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ತಿಳಿಸಿದೆ.