ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

11ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾರಿನಲ್ಲಿ ಅತ್ಯಾಚಾರ; ಬೆದರಿಸಿ ಮತಾಂತರಕ್ಕೆ ಯತ್ನ

ಭೋಪಾಲ್‌ನಲ್ಲಿ 11ನೇ ತರಗತಿಯ ವಿದ್ಯಾರ್ಥಿನಿಯನ್ನು ನಾಲ್ವರು ಆರೋಪಿಗಳು ಅಪಹರಿಸಿ, ಅತ್ಯಾಚಾರ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವೇಳೆ ಆಕೆಯನ್ನು ಮತಾಂತರಕ್ಕೆ ಒತ್ತಾಯಿಸಲು ಯತ್ನಿಸಿದ್ದಾರೆಯೆಂಬ ಆರೋಪವೂ ಹೊರಬಿದ್ದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ (Bhopal)ನಲ್ಲಿ 11ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ, ಹಣ ಸುಲಿಗೆ ಮಾಡಿ, ಇಸ್ಲಾಂ (Islam) ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಆರೋಪದ ಮೇಲೆ ಇಬ್ಬರು ನರರೂಪದ ರಾಕ್ಷಸರನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ ಶಹಪುರ (Shahpura) ಪ್ರದೇಶದ ಪ್ರತಿಷ್ಠಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತೆಗೆ, ಸ್ನೇಹಿತೆಯ ಮೂಲಕ ಔಸಾಫ್ ಅಲಿ ಖಾನ್ (Ausaf Ali Khan) ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ಬೆಳೆದು ಸ್ನೇಹಕ್ಕೆ ತಿರುಗಿತ್ತು. ಒಂದು ದಿನ ಔಸಾಫ್, ಲಾಂಗ್ ಡ್ರೈವ್ ಹೆಸರಿನಲ್ಲಿ ಪಕ್ಕದ ಖಾನುಗಾಂವ್ (Khanugaon) ಎಂಬ ನಿರ್ಜನ ಪ್ರದೇಶಕ್ಕೆ ವಿದ್ಯಾರ್ಥಿನಿಯನ್ನು ಕರೆದೊಯ್ದು, ಕಾರಿನೊಳಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬ್ಲಾಕ್‌ಮೇಲ್ ಮತ್ತು ಸುಲಿಗೆ

ಇದು ಮೊದಲೇ ಯೋಜಿತ ಕೃತ್ಯವಾಗಿದ್ದು, ಔಸಾಫ್‌ನ ಸ್ನೇಹಿತ ಹಾಗೂ ಜಿಮ್ ಮಾಲೀಕ ಮಾಜ್ ಖಾನ್ ಕತ್ತಲಲ್ಲಿ ಅಡಗಿ ಕುಳಿತು ಈ ಕೃತ್ಯದ ವಿಡಿಯೋ ಮಾಡಿಕೊಂಡಿದ್ದನು. ಈ ವಿಡಿಯೋ ಇಟ್ಟುಕೊಂಡು ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್ ಮಾಡಲು ಶುರುಮಾಡಿದ ಆರೋಪಿಗಳು, 1 ಲಕ್ಷ ರೂಪಾಯಿ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆತಂಕಕ್ಕೊಳಾಗದ ಬಾಲಕಿಯು ಹಾಗೋ-ಹೀಗೋ 40,000 ರೂಪಾಯಿ ನೀಡಿದ್ದರೂ, ಆರೋಪಿಗಳ ಕಾಮದಾಹ ಮಾತ್ರ ತೀರಿರಲಿಲ್ಲ. ಎರಡು ಸೆಡಾನ್ ಮತ್ತು ಒಂದು ಮಹೀಂದ್ರಾ ಥಾರ್ ಸೇರಿದಂತೆ ಒಟ್ಟು ನಾಲ್ಕು ಕಾರುಗಳಲ್ಲಿ ಆಕೆಯನ್ನು ಹಲವು ಬಾರಿ ಲೈಂಗಿಕವಾಗಿ ಶೋಷಿಸಿದ್ದಾರೆ. ಈ ಎಲ್ಲಾ ವಾಹನಗಳನ್ನು ಪೊಲೀಸರು ಈಗ ವಶಪಡಿಸಿಕೊಂಡಿದ್ದಾರೆ.

ಪತ್ನಿಯ ಗರ್ಭಪಾತದಿಂದ ನೊಂದ ವ್ಯಕ್ತಿ; ಮೂಢನಂಬಿಕೆ ಒಳಗಾಗಿ ನೆರೆಹೊರೆಯವರ ತಲೆಯನ್ನೇ ಕತ್ತರಿಸಿದ!

ಮತಾಂತರಕ್ಕೆ ಒತ್ತಡ

ಸಂತ್ರಸ್ತೆಯು ಆರೋಪಿಗಳ ಜೊತೆ ಮಾತು ನಿಲ್ಲಿಸಿ ಅವರನ್ನು ಬ್ಲಾಕ್ ಮಾಡಿದಾಗ, ಔಸಾಫ್ ಆ ವಿಡಿಯೋವನ್ನು ಆಕೆಯ ಸ್ನೇಹಿತರಿಗೆ ಕಳುಹಿಸಿದ್ದಾನೆ. ಅಷ್ಟೇ ಅಲ್ಲದೆ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಪ್ರಾರ್ಥನೆ ಸಲ್ಲಿಸುವಂತೆ ಆಕೆಯ ಮೇಲೆ ತೀವ್ರ ಒತ್ತಡ ಹೇರಿದ್ದಾನೆ. ಅಂತಿಮವಾಗಿ ವಿದ್ಯಾರ್ಥಿನಿ ಧೈರ್ಯ ಮಾಡಿ ತನ್ನ ಕುಟುಂಬಕ್ಕೆ ಈ ವಿಷಯ ತಿಳಿಸಿದ್ದು, ಹಿಂದೂ ಸಂಘಟನೆಗಳ ಬೆಂಬಲದೊಂದಿಗೆ ಪೊಲೀಸ್ ದೂರು ದಾಖಲಿಸಲಾಗಿದೆ.

ಪೊಲೀಸರಿಂದ ತೀವ್ರ ತನಿಖೆ

ಪ್ರಕರಣದ ತನಿಖೆಗಾಗಿ ಸಹಾಯಕ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ. ಈ ಆರೋಪಿಗಳು ಈ ಹಿಂದೆ ಇನ್ಯಾರನ್ನಾದರೂ ಗುರಿಯಾಗಿಸಿಕೊಂಡಿದ್ದರೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಆರೋಪಿ ಔಸಾಫ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಕೀಲರು ಆತನಿಗೆ ಧರ್ಮದೇಟು ನೀಡಿದ್ದಾರೆ.