ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪತ್ನಿಯ ಗರ್ಭಪಾತದಿಂದ ನೊಂದ ವ್ಯಕ್ತಿ; ಮೂಢನಂಬಿಕೆ ಒಳಗಾಗಿ ನೆರೆಹೊರೆಯವರ ತಲೆಯನ್ನೇ ಕತ್ತರಿಸಿದ!

ಪತ್ನಿಗೆ ಗರ್ಭಪಾತವಾದ ಹಿನ್ನೆಲೆ ದೇವರು ಕೋಪಗೊಂಡಿದ್ದಾರೆ ಎಂಬ ಅಂಧನಂಬಿಕೆಯಿಂದ ವ್ಯಕ್ತಿಯೊಬ್ಬರು ನೆರೆಹೊರೆಯ ಇಬ್ಬರನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಅಂಧನಂಬಿಕೆಯ ಅಪಾಯವನ್ನು ಮತ್ತೊಮ್ಮೆ ನೆನಪಿಸಿದೆ.

ಮೂಢನಂಬಿಕೆಗೆ ನೆರೆಹೊರೆಯವರನ್ನು ಹತ್ಯೆಗೈದ ವ್ಯಕ್ತಿ

ಸಾಂದರ್ಭಿಕ ಚಿತ್ರ -

Profile
Sushmitha Jain Feb 13, 2026 1:09 PM

ಭೋಪಾಲ್: ಮಧ್ಯಪ್ರದೇಶ (Madhya Pradesh)ದ ಸಿಂಗ್ರೌಲಿ (Singrauli) ಜಿಲ್ಲೆಯಲ್ಲಿ ಮೂಢನಂಬಿಕೆಯ ಪರಮಾವಧಿಯಂತಿರುವ ಭೀಕರ ಘಟನೆಯೊಂದು ನಡೆದಿದೆ. ಪತ್ನಿಯ ಗರ್ಭಪಾತದಿಂದ ಮನನೊಂದಿದ್ದ ಯುವಕನೊಬ್ಬ, ದೇವರನ್ನು ಪ್ರಸನ್ನಗೊಳಿಸಲು ತನ್ನ ಇಬ್ಬರು ನೆರೆಹೊರೆಯವರನ್ನು ಬಲಿ ನೀಡಿದ ಘಟನೆ ಗುರುವಾರ ಮುಂಜಾನೆ ವರದಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ದಾಳಿ ವೇಳೆ ರಕ್ಷಣೆಗೆ ಬಂದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೂಜೆಯ ನೆಪದಲ್ಲಿ ಕರೆದು ಕೃತ್ಯ

ಸಿಂಗ್ರೌಲಿ ಜಿಲ್ಲೆಯ ಅತರ್ವಾ ಗ್ರಾಮದಲ್ಲಿ ಈ ಭೀಕರ ಕೃತ್ಯ ನಡೆದಿದೆ. ಆರೋಪಿ 21 ವರ್ಷದ ಛತ್ರಪತಿ ಸಿಂಗ್ (Chhatrapati Singh), ತನ್ನ ಮನೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿರುವುದಾಗಿ ನೆರೆಹೊರೆಯವರಾದ 50 ವರ್ಷ ಫೂಲ್ ಕುಮಾರಿ ಸಿಂಗ್ (Phool Kumari Singh) ಮತ್ತು 65 ವರ್ಷದ ಕೆಮ್ಲಾ ಸಿಂಗ್ (Kemla Singh) ಅವರನ್ನು ಆಹ್ವಾನಿಸಿದ್ದಾನೆ. ಇವರು ಮುಂಜಾನೆ 4 ಗಂಟೆಯ ಸುಮಾರಿಗೆ ಸಿಂಗ್ ಮನೆಗೆ ಬಂದಾಗ, ಆರೋಪಿ ಅವರ ಮೇಲೆ ಹಠಾತ್ತನೆ ಮಾರಕಾಸ್ತ್ರದಿಂದ ದಾಳಿ ನಡೆಸಿ ಶಿರಚ್ಛೇದ ಮಾಡಿದ್ದಾನೆ ಎಂದು ವರ್ಇಗಳು ತಿಳಿಸಿವೆ. ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಸುಮಿತ್ರಾ ಸಿಂಗ್ ಮತ್ತು ರಾಮ್‌ಭಜನ್ ಸಿಂಗ್ ಅವರ ಮೇಲೆಯೂ ಆರೋಪಿ ಯುವಕ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Bengaluru Crime News: ಹಿಂದೂ ಯುವತಿಗೆ ಮಗು ಕೊಟ್ಟು ಪರಾರಿಯಾದ ಮುಸ್ಲಿಂ ಯುವಕ

ಮೂಢನಂಬಿಕೆಯ ಪರಮಾವಧಿ

ಪ್ರಾಥಮಿಕ ತನಿಖೆಯ ಪ್ರಕಾರ, ಈ ಕೊಲೆಗಳಿಗೆ 'ಮಾಟಮಂತ್ರ' ಮತ್ತು 'ಮೂಢನಂಬಿಕೆ'ಯೇ ಪ್ರಮುಖ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಯ ಪತ್ನಿ ಇತ್ತೀಚೆಗೆ ಗರ್ಭಪಾತಕ್ಕೊಳಗಾಗಿದ್ದರು. ಇದರಿಂದ ದೇವರು ಕೋಪಗೊಂಡಿದ್ದಾರೆ ಮತ್ತು ಬಲಿ ನೀಡಿದರೆ ಮಾತ್ರ ದೇವರು ಶಾಂತರಾಗುತ್ತಾರೆ ಎಂಬ ಬಲವಾದ ನಂಬಿಕೆ ಆರೋಪಿಯಲ್ಲಿ ಮನೆಮಾಡಿತ್ತು ಎಂದು ತಿಳಿದುಬಂದಿದೆ. ಕೊಲೆಗೂ ಕೆಲವು ದಿನಗಳ ಮೊದಲು ಆರೋಪಿ ತನ್ನ ಮನೆಯ ಹೊರಗೆ ಮಣ್ಣಿನ ಪೀಠವನ್ನು ನಿರ್ಮಿಸಿ, ಗುರುವಾರ ವಿಶೇಷ ಪೂಜೆ ಮಾಡುವುದಾಗಿ ನೆರೆಹೊರೆಯವರಿಗೆ ಹೇಳಿದ್ದನು. ಘಟನಾ ಸ್ಥಳದಿಂದ ತೆಂಗಿನಕಾಯಿ ಹಾಗೂ ಪೂಜಾ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಗಾಯತ್ರಿ ತಿವಾರಿ ಮಾತನಾಡಿ, "ಆರೋಪಿ ಮತ್ತು ಸಂತ್ರಸ್ತರು ಒಂದೇ ಸಮುದಾಯದವರಾಗಿದ್ದು, ದೂರದ ಸಂಬಂಧಿಗಳಾಗಿದ್ದಾರೆ. ವಿಧಿವಿಜ್ಞಾನ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ," ಎಂದು ತಿಳಿಸಿದ್ದಾರೆ. ಪ್ರಸ್ತುತ ಆರೋಪಿ ಛತ್ರಪತಿ ಸಿಂಗ್ ಪೊಲೀಸ್ ವಶದಲ್ಲಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ಮಾನಸಿಕ ಭ್ರಮೆಯಿಂದ ನಡೆಸಿದ್ದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.