ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇರಳಂನಲ್ಲಿ ಮುಂದುವರಿದ ಸಿಪಿಎಂ ಗೂಂಡಾಗಿರಿ; ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ, ಇಬ್ಬರಿಗೆ ಗಾಯ

BJP Workers Attacked in Keralam: ಕೇರಳಂನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸಿಪಿಎಂ ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದಾರೆ ಎಂಬುದು ಬಿಜೆಪಿ ಆರೋಪ. ಘಟನೆಯಲ್ಲಿ ಇಬ್ಬರ ಕೈಗಳಿಗೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲಪ್ಪುರಂನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯ ತನಿಖೆ ನಡೆಸಿದ ಪೊಲೀಸರು

ತಿರುವನಂತಪುರಂ, ಜೂ. 15: ಬಿಜೆಪಿ ಕಾರ್ಯಕರ್ತರ (BJP Workers) ವಿರುದ್ಧ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಸ್ಥಳೀಯ ಸಿಪಿಎಂ ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದಾರೆ ಎಂದು ಪಕ್ಷ ಆರೋಪಿಸಿದೆ. ಕೇರಳಂನ (Keralam) ಮಲಪ್ಪುರಂನ ವಂಡೂರಿನಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಕಪ್ಪಿಲ್ ನಿವಾಸಿಗಳಾದ ವಿಶಾಖ್ ಮತ್ತು ಜಿತಿನ್ ಎಂದು ಗುರುತಿಸಲಾಗಿದೆ. ಕಪ್ಪಿಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಇಬ್ಬರ ಕೈಗಳಿಗೂ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ವಂದೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪೆರಿಂಥಲ್ಮನ್ನದ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸಿಪಿಎಂ ವಾರ್ಡ್ ಸದಸ್ಯನೊಬ್ಬನ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ವಂದೂರು ಪಂಚಾಯತ್ ವಾರ್ಡ್ 24 ಸದಸ್ಯ ಸಲಾಂ ಮತ್ತು ಸಿಪಿಎಂ ಕಾರ್ಯಕರ್ತ ಜಿತು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆಂದು ಪಕ್ಷ ಹೇಳಿದೆ.

ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಸಿಪಿಎಂ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಕೃತ್ಯದಲ್ಲಿ ಭಾಗಿಯಾದವರಿಂದ ಹೇಳಿಕೆ ಸಂಗ್ರಹಿಸುತ್ತಿದ್ದಾರೆ. ದಾಳಿಗೆ ಏನು ಕಾರಣ ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಆರೋಪಗಳಿಗೆ ಸಿಪಿಎಂ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಶಾಲಾ ಬಾಲಕಿಯರಿಗೆ ದೊರೆಯಲಿದೆ 3 ದಿನಗಳ ಮುಟ್ಟಿನ ರಜೆ

ಇಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ ಮಾಡಿದ್ದ ಪಿಣರಾಯಿ ಬೆಂಬಲಿಗರು

ಕೇರಳಂನ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮನೆಯನ್ನು ಶೋಧಿಸಲು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಹೋಗಿದ್ದ ಸಂದರ್ಭದಲ್ಲಿ ಅವರ ಬೆಂಬಲಿಗರು ದಾಳಿ ನಡೆಸಿದ ಘಟನೆ ಇತ್ತೀಚೆಗೆ ನಡೆದಿತ್ತು. ಘಟನೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಕೇಂದ್ರ ಪೊಲೀಸ್ ಪಡೆಯ ಸಿಬ್ಬಂದಿಗೂ ಚಪ್ಪಲಿಗಳಿಂದ ಹಲ್ಲೆ ನಡೆಸಲಾಗಿದೆ. ಕ್ಯಾಮರಾದಲ್ಲಿ ಘರ್ಷಣೆಯ ವಿಡಿಯೊ ಸೆರೆಯಾಗಿತ್ತು. ಬೃಹತ್ ಜನಸಮೂಹವು ತನಿಖಾ ಸಂಸ್ಥೆಯ ಬಿಳಿ ಎಸ್‌ಯುವಿ ಕಾರನ್ನು ಸುತ್ತುವರೆದು ಅದರ ವಿಂಡ್ ಷೀಲ್ಡ್ ಅನ್ನು ಪುಡಿ ಮಾಡಲಾಗಿದೆ.

ವಿಜಯನ್ ಅವರ ಮನೆಯ ಹೊರಭಾಗದಲ್ಲಿ ಜಮಾಯಿಸಿದ್ದ ಮತ್ತೊಂದು ಗುಂಪು ಭದ್ರತಾ ರಕ್ಷಣೆಗಾಗಿ ಇಡಿ (ED) ಅಧಿಕಾರಿಗಳೊಂದಿಗೆ ಬಂದಿದ್ದ ಕೇಂದ್ರ ರಿಸರ್ವ್ ಪೊಲೀಸ್ ಪಡೆ (CRPF) ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿತ್ತು. ಕೆಲ ಪೊಲೀಸರು ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ಸುತ್ತುವರಿದು, ಅವರ ಕೈಗೆ ಬಟ್ಟೆ ಕಟ್ಟಲು ಸಹಾಯ ಮಾಡಿದ್ದರು.