ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೂರು ವರ್ಷದ ಪ್ರೀತಿಗೆ ಬಲಿಯಾಯಿತು ಬಾಡಿಬಿಲ್ಡರ್ ಜೀವ

ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಕೈಕೊಟ್ಟ ಕಾರಣಕ್ಕೆ ನೊಂದು ಬಾಡಿಬಿಲ್ಡರ್ ವೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಾಡಿಬಿಲ್ಡರ್ ಮತ್ತು ಜಿಮ್ ತರಬೇತುದಾರನಾಗಿದ್ದ ಕಿರಣ್ ನ ಪ್ರೇಯಸಿ ಬೇರೊಂದು ಹುಡುಗನೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಆತ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂಗ್ರಹ ಚಿತ್ರ

ಬೆಂಗಳೂರು: ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ (Lover) ಯುವತಿ ಕೈಕೊಟ್ಟ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ (self harming) ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬೆಂಗಳೂರಿನ 26 ವರ್ಷದ ಬಾಡಿಬಿಲ್ಡರ್ (Bodybuilder) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತನ ಗೆಳತಿ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದನ್ನು ಶನಿವಾರ ತಿಳಿಸಿದಳು. ಇದರ ಬಳಿಕ ಆತ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಮಹಾಲಕ್ಷ್ಮಿ ಲೇಔಟ್ (Mahalaxmi Layout) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೃತ್ತಿಯಲ್ಲಿ ಬಾಡಿಬಿಲ್ಡರ್ ಮತ್ತು ಜಿಮ್ ತರಬೇತುದಾರನಾಗಿದ್ದ ಕಿರಣ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಶನಿವಾರ ಆಕೆಯನ್ನು ಭೇಟಿಯಾದ ಆತನಿಗೆ ಅವಳು ತಾನು ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ದಾಳೆ. ಇದರಿಂದ ನೊಂದ ಆತ ತನ್ನ ಮನೆಗೆ ಹಿಂತಿರುಗಿ ತನ್ನ ಕೋಣೆಯೊಳಗೆ ಹೋಗಿ ಬೀಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಹೋದರಿಯರ ಆತ್ಮಹತ್ಯೆ ಕೇಸ್‌; ಬಾಲಕಿಯರ ತಂದೆಗೆ ಮೂವರು ಪತ್ನಿಯರು! ಬಗೆದಷ್ಟು ಬಯಲಾಗ್ತಿದೆ ರಹಸ್ಯ

ಮನೆ ಮಂದಿ ಕೋಣೆಯ ಬಾಗಿಲು ಬಡಿದಾಗ ಆತ ಬಾಗಿಲು ತೆರೆಯಲಿಲ್ಲ. ಇದರಿಂದ ಸಂಶಯಗೊಂಡ ಮನೆಯವರು ಬಾಗಿಲು ಒಡೆದು ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಿರಣ್ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆತನ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ.

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಕಿರಣ್ ಈ ಬಾರಿ ಪ್ರೇಮಿಗಳ ದಿನಾಚರಣೆಯ ಉಡುಗೊರೆ ಕೊಡಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಆದರೆ ಈ ನಡುವೆ ಪ್ರೇಯಸಿ ಮತ್ತೊಬ್ಬನ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದರಿಂದ ಕಿರಣ್ ಆಘಾತಕ್ಕೆ ಒಳಗಾಗಿ ​ ದುಡುಕಿನ ನಿರ್ಧಾರ ಕೈಗೊಂಡಿದ್ದಾನೆ.

ಶನಿವಾರ ಕಿರಣ್ ನನ್ನು ಭೇಟಿಯಾಗಿದ್ದ ಯುವತಿ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು, ಹೊಸ ಸೀರೆಯನ್ನು ತೋರಿಸಿದ್ದಳು. ಆತ್ಮಹತ್ಯೆ ಮಾಡುವ ಮೊದಲು ತಾಯಿ ಬಳಿ ಪೆನ್ನು, ಪೇಪರ್ ಕೇಳಿದ್ದನು. ಇದರಿಂದ ಅನುಮಾನಗೊಂಡ ಅವರು ಯಾಕೆ ಎಂದು ಕೇಳಿದಾಗ ಹೆದರಬೇಡ ಲೆಕ್ಕ ಬರೆಯಲು ಇದೆ ಎಂದು ಹೇಳಿದ್ದನು ಎನ್ನಲಾಗಿದೆ.

ಕುಡಿದ ಮತ್ತಿನಲ್ಲಿ ಯುವತಿಯರಿಂದ ಕಿರಿಕ್‌; ಕ್ಯಾಬ್‌ ಚಾಲಕನ ಮೇಲೆ ಹಲ್ಲೆ, ಪೊಲೀಸರೊಂದಿಗೆ ಅಸಭ್ಯ ವರ್ತನೆ

ಡೆತ್ ನೋಟ್ ನಲ್ಲಿ ಆತ ತನ್ನ ಪ್ರೇಯಸಿಯ ಮತ್ತು ಆಕೆಯ ತಾಯಿಯ ಹೆಸರನ್ನು ಉಲ್ಲೇಖಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿರುವ ಮಹಾಲಕ್ಷ್ಮಿ ಲೇಔಟ್‌ ಠಾಣೆಯ ಪೊಲೀಸರು ಈ ಕುರಿತು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.

ಘಟನಾ ಸ್ಥಳಕ್ಕೆ ಮಹಾಲಕ್ಷ್ಮೀಲೇಔಟ್ ಠಾಣೆಯ ಪೊಲೀಸರು ಭೇಟಿ ನೀಡಿ ಕಿರಣ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author