ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಾರಿನಲ್ಲಿ ಬಾಂಬ್‌ ಸ್ಫೋಟ: ರಷ್ಯಾದ ಹಿರಿಯ ಜನರಲ್ ಸಾವು, ಉಕ್ರೇನ್ ಕೈವಾಡ?

ಕಾರಿನ ಕೆಳಗೆ ಬಾಂಬ್ ಸ್ಪೋಟಗೊಂಡು ರಷ್ಯಾದ ಹಿರಿಯ ಜನರಲ್ ಸಾವನ್ನಪ್ಪಿರುವ ಘಟನೆ ಮಾಸ್ಕೋದಲ್ಲಿ ಸೋಮವಾರ ನಡೆದಿದೆ. ಈ ಸ್ಪೋಟದ ಹಿಂದೆ ಉಕ್ರೇನ್ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಜನರಲ್ ಸ್ಟಾಫ್‌ನೊಳಗಿನ ತರಬೇತಿ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫನಿಲ್ ಸರ್ವರೋವ್ ಸಾವನ್ನಪ್ಪಿದ್ದಾರೆ.

ಬಾಂಬ್ ಸ್ಪೋಟದಿಂದ ರಷ್ಯಾದ ಹಿರಿಯ ಜನರಲ್ ಸಾವು

(ಸಂಗ್ರಹ ಚಿತ್ರ) -

ರಷ್ಯಾ: ಕಾರಿನ ಕೆಳಗೆ ಬಾಂಬ್ ಸ್ಪೋಟಗೊಂಡು ರಷ್ಯಾದ ಹಿರಿಯ ಜನರಲ್ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ದಕ್ಷಿಣ ಮಾಸ್ಕೋದಲ್ಲಿ ಸೋಮವಾರ ನಡೆದ ಈ ಘಟನೆಯಲ್ಲಿ ಜನರಲ್ ಸ್ಟಾಫ್‌ನೊಳಗಿನ ತರಬೇತಿ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫನಿಲ್ ಸರ್ವರೋವ್ ಸಾವನ್ನಪ್ಪಿದ್ದಾರೆ. ಅವರ ಕಾರಿನ ಕೆಳಗೆ ಸ್ಪೋಟಕವನ್ನು ಇರಿಸಲಾಗಿತ್ತು. ಇದು ಸ್ಪೋಟಗೊಂಡು ಅವರು ಸಾವನ್ನಪ್ಪಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಸ್ಪೋಟದಲ್ಲಿ ಉಕ್ರೇನ್ ಕೈವಾಡವಿದೆಯೇ ಎನ್ನುವ ಕುರಿತು ತನಿಖೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜನರಲ್ ಸ್ಟಾಫ್‌ನೊಳಗಿನ ತರಬೇತಿ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫನಿಲ್ ಸರ್ವರೋವ್ ಅವರ ಕೊಲೆಯ ತನಿಖೆಯನ್ನು ರಷ್ಯಾದ ಪ್ರಮುಖ ಅಪರಾಧಗಳನ್ನು ಪರಿಶೀಲಿಸುವ ತನಿಖಾ ಸಮಿತಿಯು ಕೈಗೆತ್ತಿಕೊಂಡಿದೆ. ಈ ದಾಳಿಯಲ್ಲಿ ಉಕ್ರೇನಿಯನ್ ವಿಶೇಷ ಪಡೆಗಳು ಭಾಗವಹಿಸಿರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.

ಮೋದಿ-ಲಕ್ಸನ್ ಮಹತ್ವದ ಚರ್ಚೆ; ಭಾರತ- ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ

ಮಾಸ್ಕೋದ ಮಧ್ಯಮ ವರ್ಗದ ನೆರೆಹೊರೆಯ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದ್ದು, ವಿಶೇಷ ಸೇವಾ ಮಾರ್ಗಗಳ ಮೂಲಕ ಸರ್ವರೋವ್ ಸಾವಿನ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಕ್ಷಣವೇ ತಿಳಿಸಲಾಗಿದೆ.

56 ವರ್ಷದ ಸರ್ವರೋವ್ ಒಂಬತ್ತು ವರ್ಷಗಳ ಕಾಲ ತರಬೇತಿ ವಿಭಾಗದ ಮುಖ್ಯಸ್ಥರಾಗಿದ್ದರು. ಸಿರಿಯಾದಲ್ಲಿ ಕಾರ್ಯಾಚರಣೆಯನ್ನು ಸಂಘಟಿಸುವ ಮತ್ತು ನಡೆಸುವ ಕಾರ್ಯಗಳನ್ನು ನಿರ್ವಹಿಸಿದ್ದರು.

2022ರ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ಮಾಸ್ಕೋ ದಾಳಿ ನಡೆಸಲು ಪ್ರಾರಂಭಿಸಿದ ಬಳಿಕ ರಷ್ಯಾ ಮತ್ತು ರಷ್ಯಾ ನಿಯಂತ್ರಿತ ಉಕ್ರೇನಿಯನ್ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಮತ್ತು ಆಡಳಿತದಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಲಾಗಿದೆ. ಇದಕ್ಕೆ ರಷ್ಯಾವು ಕೈವ್ ಅನ್ನು ದೂಷಿಸಿದೆ.

2022ರ ಏಪ್ರಿಲ್ ನಲ್ಲಿ ಜನರಲ್ ಸ್ಟಾಫ್‌ನ ಉಪನಾಯಕ ಜನರಲ್ ಯಾರೋಸ್ಲಾವ್ ಮೊಸ್ಕಲಿಕ್ ಅವರು ಮಾಸ್ಕೋ ಬಳಿ ಕಾರ್ ಸ್ಫೋಟದಲ್ಲಿ ಕೊಲ್ಲಲ್ಪಟ್ಟರು. ಇವರ ಬಳಿಕ ಆಗಸ್ಟ್ ನಲ್ಲಿ, ಅಲ್ಟ್ರಾನ್ಯಾಷನಲಿಸ್ಟ್ ವಿಚಾರವಾದಿ ಅಲೆಕ್ಸಾಂಡರ್ ಡುಗಿನ್ ಅವರ ಮಗಳು ಡೇರಿಯಾ ಡುಗಿನಾ ಕಾರ್ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದರು.

Bomb Threat: ಆಲೂರು, ಸರಗೂರು ತಾಲೂಕು ಕಚೇರಿಗಳಿಗೆ ಬಾಂಬ್‌ ಬೆದರಿಕೆ

2023ರ ಏಪ್ರಿಲ್ ನಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಕೆಫೆಯಲ್ಲಿ ಪ್ರತಿಮೆ ಸ್ಫೋಟಗೊಂಡು ರಷ್ಯಾದ ಮಿಲಿಟರಿ ಬ್ಲಾಗರ್ ಮ್ಯಾಕ್ಸಿಮ್ ಫೋಮಿನ್ ಸಾವನ್ನಪ್ಪಿದರು.

2024ರ ಡಿಸೆಂಬರ್ ನಲ್ಲಿ ಮಾಸ್ಕೋದಲ್ಲಿ ಬೂಬಿ ಟ್ರಾಪ್ಡ್ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು ರಷ್ಯಾದ ವಿಕಿರಣಶಾಸ್ತ್ರ, ರಾಸಾಯನಿಕ ಮತ್ತು ಜೈವಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಇಗೊರ್ ಕಿರಿಲ್ಲೊವ್ ಸಾವನ್ನಪ್ಪಿದರು.