ಮಲೆ ಮಹದೇಶ್ವರ ಬೆಟ್ಟದಲ್ಲಿ ಪೋಷಕರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದು ಕೊಂದ ಚಿರತೆ!
leopard attack in male mahadeshwara hills: ಮಲೆ ಮಹದೇಶ್ವರನ 77 ಮಲೆಗಳಲ್ಲಿ ಒಂದಾದ ನಾಗಮಲೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾಗ ಬಾಲಕನ ಮೇಲೆ ಚಿರತೆ ದಾಳಿ ಮಾಡಿ ಕೊಂದಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಚಿರತೆ ಎಳೆದೊಯ್ದಿದೆ.
ಮಲೆ ಮಹದೇಶ್ವರ ದೇವಸ್ಥಾನ. -
ಚಾಮರಾಜನಗರ: ನಾಗಮಲೆಗೆ ಪಾದಯಾತ್ರೆ ಹೋಗುತ್ತಿದ್ದ ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೆದುರೇ ಚಿರತೆಯು ಎಳೆದೊಯ್ದು, ಕೊಂದಿರುವ ಘೋರ ಘಟನೆ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಬಳಿ ನಡೆದಿದೆ. ಮೃತ ಬಾಲಕನನ್ನು ಬೆಂಗಳೂರಿನ ಲಗ್ಗೆರೆ ನಿವಾಸಿ ಹರ್ಷಿತ್ ಎಂದು ಗುರುತಿಸಲಾಗಿದೆ.
ಬೆಳಗ್ಗೆ ಕುಟುಂಬದ 10 ಮಂದಿ ಸದಸ್ಯರೊಂದಿಗೆ ಹರ್ಷಿತ್ ನಾಗಮಲೆ ಹಾದಿಯಲ್ಲಿ ತೆರಳುತ್ತಿದ್ದಾಗ, ಇಂಡಿಗನತ್ತ ಸಮೀಪ ಚಿರತೆ ದಾಳಿ ಮಾಡಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಚಿರತೆ ಎಳೆದೊಯ್ದಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ, ಅರಣ್ಯದೊಳಗೆ ಬಾಲಕನ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಬಾಲಕನ ಕುಟುಂಬಸ್ಥ ಆಕ್ರಂದನ ಮುಗಿಲು ಮುಟ್ಟಿದೆ.
ಬಾಲಕನ ಪೋಷಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಾವು ನಾಗಮಲೆಗೆ ದೇವರ ದರ್ಶನಕ್ಕೆ ಹೋಗುತ್ತಿದ್ದೆವು. ವನ್ಯ ಪ್ರಾಣಿಗಳು ಇರುವ ಬಗ್ಗೆ ನಮಗೆ ಯಾರೂ ಕೂಡ ಮಾಹಿತಿ ಕೊಟ್ಟಿಲ್ಲ. ನಮ್ಮ ಜತೆಗೆ ಯಾವ ಅರಣ್ಯ ಸಿಬ್ಬಂದಿ ಕೂಡ ಇರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್ಪೆಕ್ಟರ್
ಮಲೆ ಮಹದೇಶ್ವರನ 77 ಮಲೆಗಳಲ್ಲಿ ಒಂದಾದ ನಾಗಮಲೆ ಮಾರ್ಗದಲ್ಲಿ ಈ ಹಿಂದೆಯೂ ಚಿರತೆ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಮತ್ತೊಬ್ಬ ಚಿರತೆ ದಾಳಿಯಲ್ಲಿ ಗಾಯಗೊಂಡಿದ್ದ. ಇದೀಗ ಬಾಲಕನನ್ನು ಚಿರತೆ ಬಲಿ ಪಡೆದಿದೆ.
ಮನೆ ಮುಂದೆ ಆಟವಾಡುವಾಗ ಗೇಟ್ ಬಿದ್ದು 5 ವರ್ಷದ ಬಾಲಕಿ ಸಾವು
ಬೆಂಗಳೂರು: ಮನೆ ಮುಂದೆ ಆಟವಾಡುವಾಗ ಗೇಟ್ ಬಿದ್ದು, ಐದು ವರ್ಷದ ಬಾಲಕಿ ಮೃತಪಟ್ಟು, ಮತ್ತೊಬ್ಬ ಬಾಲಕಿ ಗಾಯಗೊಂಡಿರುವ ಘಟನೆ ಚಿಕ್ಕಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಕಾನಗರದಲ್ಲಿ ನಡೆದಿದೆ. ಗೌಸಿಯಾ (5) ಸಾವನ್ನಪ್ಪಿದ ಬಾಲಕಿ. ಘಟನೆಯಲ್ಲಿ ಆರು ವರ್ಷದ ಬಾಲಕಿ ಸುಮಾಯ್ಯಾ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಶುಕ್ರವಾರ ಸಂಜೆ ಈ ದುರಂತ ನಡೆದಿದೆ. ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಚಿಕ್ಕಬಾಣಾವರ ಠಾಣಾ ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಬಾಲಕಿ ತಂದೆ ಇಮಾಮ್ ಹಣ್ಣು ಮಾರಾಟ ಮಾಡುತ್ತಿದ್ದರೆ, ತಾಯಿ ರಮೀಜಾ ಗೃಹಿಣಿಯಾಗಿದ್ದಾರೆ. ಕಳೆದ ಆರು ತಿಂಗಳಿಂದಯಷ್ಟೇ ದ್ವಾರಕನಗರದಲ್ಲಿನ ಮನೆಯಲ್ಲಿ ದಂಪತಿ ಬಾಡಿಗೆ ಬಂದಿದ್ದರು.
ಶುಕ್ರವಾರ ಸಂಜೆ ಗೌಸಿಯಾ ಹಾಗೂ ಆಕೆಯ ಸಂಬಂಧಿ ಸುಮಯ್ಯಾ ಸೇರಿದಂತೆ ನೆರೆಹೊರೆ ಮನೆಯವರ ಮಕ್ಕಳು ಆಟವಾಡುವಾಗ ಏಕಾಏಕಿ ಕಾಂಪೌಂಡ್ ಗೇಟ್ ಉರುಳಿಬಿದ್ದು ದುರಂತ ಸಂಭವಿಸಿದೆ.