ಜನದಟ್ಟಣೆಯ ರಸ್ತೆಯಲ್ಲೇ ಬೈಕ್ ಸವಾರನನ್ನು ಬೆನ್ನಟ್ಟಿ ಕೊಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Crime News: ಪವನ್ ಪರಾಶರ್ ಎಂಬಾತ ದೀಕ್ಷಿತ್ ಎಂಬುವವರ ಸ್ಕೂಟರ್ಗೆ ಹಿಂದಿನಿಂದ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ದೀಕ್ಷಿತ್ ರಸ್ತೆಗೆ ಎಸೆಯಲ್ಪಟ್ಟರು. ನಂತರ ಪರಾಶರ್ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ನಿಂದ ಅವರ ಮೇಲೆ ಹಲ್ಲೆ ನಡೆಸಿ, ತಲೆ ಮತ್ತು ಮುಖದ ಮೇಲೆ ಹೊಡೆದನು. ಪರಿಣಾಮ ದೀಕ್ಷಿತ್ ಸ್ಥಳದಲ್ಲೇ ಸಾವಿಗೀಡಾದರು.
ಬೈಕ್ ಸವಾರನನ್ನು ಬೆನ್ನಟ್ಟಿ ಕೊಲೆ -
ಮುಂಬೈ, ಅ.23: ಹಾಡಹಗಲೇ ಜನದಟ್ಟಣೆಯ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನಿಂದ ಸ್ಕೂಟರ್ಗೆ ಡಿಕ್ಕಿ ಹೊಡೆದು, ಬಳಿಕ ಆತನನ್ನು ಬೆನ್ನಟ್ಟಿ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ನಿಂದ ತಲೆ ಹಾಗೂ ಮುಖಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಮಹಾರಾಷ್ಟ್ರ (Maharashtra)ದ ಛತ್ರಪತಿ ಸಂಭಾಜಿನಗರದ ಜನನಿಬಿಡ ಭಾಗವಾದ ಸಿಡ್ಕೊದ ಎನ್-7 ಪ್ರದೇಶದ ಬಜರಂಗ್ ಚೌಕ್ ಬಳಿ ಈ ದಾಳಿ ನಡೆದಿದೆ. ಮೃತ ವ್ಯಕ್ತಿಯನ್ನು ದೇವೇಶ್ ಅಲಿಯಾಸ್ ಬಂಟಿ ದೀಕ್ಷಿತ್ ಎಂದು ಗುರುತಿಸಲಾಗಿದೆ.
ಘಟನೆ ನಡೆದಾಗ ಕೊಲೆಯಾದ ದೇವೇಶ್ ಅಲಿಯಾಸ್ ಬಂಟಿ ದೀಕ್ಷಿತ್ ಜಿಮ್ನಿಂದ ಹಿಂತಿರುಗುತ್ತಿದ್ದರು. ಈ ವೇಳೆ, ಪವನ್ ಪರಾಶರ್ ಎಂಬಾತ ದೀಕ್ಷಿತ್ ಅವರ ಸ್ಕೂಟರ್ಗೆ ಹಿಂದಿನಿಂದ ತನ್ನ ಕಾರಿನಿಂದ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ದೀಕ್ಷಿತ್ ರಸ್ತೆಗೆ ಎಸೆಯಲ್ಪಟ್ಟರು. ನಂತರ ಪರಾಶರ್ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ನಿಂದ ಅವರ ಮೇಲೆ ಹಲ್ಲೆ ನಡೆಸಿ, ತಲೆ ಮತ್ತು ಮುಖದ ಮೇಲೆ ಹೊಡೆದನು. ಪರಿಣಾಮ ದೀಕ್ಷಿತ್ ಸ್ಥಳದಲ್ಲೇ ಸಾವಿಗೀಡಾದರು.
ದಾಳಿಯ ನಂತರ, ಪರಾಶರ್ ಸಿಡ್ಕೊ ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಘಟನೆಯಲ್ಲಿ ಬಳಸಲಾದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲ್ಲೆಗೆ ಬಳಸಲಾದ ಕಬ್ಬಿಣದ ರಾಡ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪರಾಶರ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಕಾರಣ ಮತ್ತು ಮುಂದಿನ ಕಾನೂನು ಕ್ರಮಗಳ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸರು ನಿರಾಕರಿಸಿದ್ದಾರೆ.
ಕೊಲೆಯಾದ ದೀಕ್ಷಿತ್ ಊಟದ ಮೆಸ್ ನಡೆಸುತ್ತಿದ್ದರು ಹಾಗೂ ಪ್ಲಾಟಿಂಗ್ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ದೀಕ್ಷಿತ್ ಮತ್ತು ಪವನ್ ಪರಾಶರ್ ನಡುವೆ ಕಳೆದ ಕೆಲ ಸಮಯದಿಂದ ವಿವಾದವಿತ್ತು. ಹಳೆಯ ವೈಷಮ್ಯ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿವಾದಗಳು ಈ ಕೊಲೆಗೆ ಕಾರಣವಿರಬಹುದು ಎನ್ನಲಾಗಿದೆ.
ಪ್ರಿಯಕರನ ಜತೆ ಸೇರಿ ಪತಿಯ ಹತ್ಯೆ:
ಪತ್ನಿಯೊಬ್ಬಳು ತನ್ನ ಪತಿಯನ್ನೇ ಕೊಲೆಗೈದ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ. ಕೊಲೆ ಮಾಡಿರುವುದು ಪತ್ತೆಯಾಗದಂತೆ ಇಬ್ಬರೂ ಸೇರಿ ಸಂಚು ರೂಪಿಸಿದ್ದರು. ಸಿಸಿಟಿವಿ ಕ್ಯಾಮರಾಗಳಲ್ಲಿ ಎಲ್ಲೂ ಸೆರೆಯಾಗದಂತೆ ಪ್ರಿಯಕರ ಯಾವ ಮಾರ್ಗದಲ್ಲಿ ತೆರಳಬೇಕು ಎಂಬುದರಿಂದ ಹಿಡಿದು, ಪತಿಗೆ ಮದ್ಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸುವವರೆಗೆ ಎಲ್ಲವನ್ನೂ ಪತ್ನಿಯೇ ಯೋಜನೆ ರೂಪಿಸಿದ್ದಳು.
ಪ್ರಿಯಕರ ಆಕೆಯ ಪತಿಯನ್ನು ಕೊಲೆ ಮಾಡುತ್ತಿದ್ದಾಗಲೂ ವಾಟ್ಸ್ಆ್ಯಪ್ ಮೂಲಕ ನಿರಂತರವಾಗಿ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಳು. ಪತಿಯನ್ನು ಕೊಂದು, ಪ್ರಿಯಕರನ ಜತೆ ಡೆಹ್ರಾಡೂನ್ಗೆ ತೆರಳಿ ಹೊಸ ಜೀವನ ಆರಂಭಿಸುವುದು ಈ ಇಬ್ಬರು ಆರೋಪಿಗಳ ಉದ್ದೇಶವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.