ಕೇರಳಂನಲ್ಲಿ ಇಂಗ್ಲೆಂಡ್ ಪ್ರವಾಸಿ ಮೇಲೆ ಲೈಂಗಿಕ ದೌರ್ಜನ್ಯ; ಮಧ್ಯರಾತ್ರಿ ಖಾಲಿ ರಸ್ತೆಯಲ್ಲಿ ನಡೆದಿದ್ದೇನು?
Crime News: ಪ್ರವಾಸಕ್ಕೆಂದು ಬಂದಿದ್ದ ಬ್ರಿಟನ್ ಮಹಿಳೆಯ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕೇರಳಂನ ರಾಜಧಾನಿ ತಿರುವನಂತಪುರಂನ ವರ್ಕಲದಲ್ಲಿ ನಡೆದಿದೆ. ಮಹಿಳೆ ಊಟ ಮಾಡಿ ಅಕ್ಟೋಬರ್ 19ರ ಮಧ್ಯರಾತ್ರಿ 1.30ರ ವೇಳೆ ಹೊಟೇಲ್ ರೂಂಗೆ ಹಿಂದಿರುಗುತ್ತಿದ್ದಾಗ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಅಪರಾಧಿ ಶಹಾದ್ನನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ -
ತಿರುವನಂತಪುರಂ, ಅ. 20: ಪ್ರವಾಸಿಗರ ನೆಚ್ಚಿನ ಕೇರಳಂನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಬ್ರಿಟನ್ ಮಹಿಳೆಯ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ (Crime News). ಅಲ್ಲದೆ ಆಕೆಯ ಬಟ್ಟೆ ಹರಿದು ವಿಕೃತಿ ಮೆರೆದಿದ್ದಾನೆ. ದೇಶವೇ ತಲೆ ತಗ್ಗಿಸುವ ಈ ಘಟನೆ ರಾಜ್ಯ ರಾಜಧಾನಿ ತಿರುವನಂತಪುರಂನ ವರ್ಕಲದಲ್ಲಿ ನಡೆದಿದೆ. ಮಹಿಳೆ ಅಕ್ಟೋಬರ್ 19ರ ಮಧ್ಯರಾತ್ರಿ 1.30ರ ವೇಳೆ ಹೊಟೇಲ್ ರೂಂಗೆ ಹಿಂದಿರುಗುತ್ತಿದ್ದಾಗ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೌರ್ಜನ್ಯ ಎಸಗಿದ ಅಪರಾಧಿಯನ್ನು ಸ್ಥಳೀಯ ನಿವಾಸಿ ಶಹಾದ್ ಎಂದು ಗುರುತಿಸಲಾಗಿದೆ. ಪ್ರವಾಸಿ ಮಹಿಳೆ ಊಟ ಸೇವಿಸಿ ರೂಂಗೆ ಮರಳುತ್ತಿದ್ದಾಗ ಎದುರಾದ ಶಹಾದ್ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಮಹಿಳೆಯ ಬಟ್ಟೆ ಹರಿದು ದೌರ್ಜನ್ಯ ಎಸಗಿದ್ದಾನೆ ಎಂದು ಸುದ್ದಿಸಂಸ್ಥೆ ಪಿಟಿಐ ತಿಳಿಸಿದೆ.
ವಿಡಿಯೊ ಮೂಲಕ ಅಪರಾಧಿಯ ಪತ್ತೆ
ಬಟ್ಟೆ ಹರಿದ ಸ್ಥಿತಿಯಲ್ಲಿ ಮಹಿಳೆ ಸ್ವಲ್ಪ ದೂರದಲ್ಲಿದ್ದ ಪ್ರವಾಸಿಗರ ಗುಂಪೊಂದರ ಬಳಿ ಆಶ್ರಯ ಪಡೆದರು. ಅವರು ಮಧ್ಯ ಪ್ರವೇಶಿಸಿ ಶಹಾದ್ನನ್ನು ತಡೆದರು. ಬೆಳಗ್ಗೆ ಸಂತ್ರಸ್ತೆ ಪೊಲೀಸರನ್ನು ಸಂಪರ್ಕಿಸಿ ಪ್ರಕರಣ ದಾಖಲಿಸಿದರು. ಮಹಿಳೆ ಚಿತ್ರೀಕರಿಸಿದ ವಿಡಿಯೊದ ಸಹಾಯದಿಂದ ಪೊಲೀಸರು ಶಹಾದ್ನನ್ನು ಗುರುತಿಸಿ ಬಂಧಿಸಿದರು.
ಆರೋಪಿಯನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ಶಾಲೆ ಶಿಕ್ಷಕ
ಕಳೆದ ವರ್ಷ ಹಂಪಿಯಲ್ಲಿ ವಿದೇಶಿ ಪ್ರಜೆ ಮೇಲೆ ಸಾಮೂಹಿಕ ಅತ್ಯಾಚಾರ
ಕೊಪ್ಪಳ: ರಾಜ್ಯದ ಖ್ಯಾತ ಪ್ರವಾಸಿ ಕ್ಷೇತ್ರ ಹಂಪಿಯ ಬಳಿಯ ಸಾನಾಪುರ ಕೆರೆಯ ಸಮೀಪ ವಿದೇಶಿ ಮಹಿಳೆ ಮೇಲೆ ಕಳೆದ ವರ್ಷ ನಡೆದ ಗ್ಯಾಂಗ್ ರೇಪ್ ಭಾರಿ ಸದ್ದು ಮಾಡಿತ್ತು. ಹಂಪಿಗೆ ಪ್ರವಾಸ ಬಂದಿದ್ದ ವಿದೇಶಿ ಮಹಿಳೆ ಸೇರಿ ಹೋಮ್ ಸ್ಟೇ ಮಾಲಕಿ ಸೇರಿ ಇಬ್ಬರ ಮೇಲಿನ ಬರ್ಬರ ಅತ್ಯಾಚಾರ ನಡೆಸಲಾಗಿತ್ತು.
2025ರ ಮಾರ್ಚ್ 6ರಂದು ತುಂಗಭದ್ರಾ ಎಡದಂಡೆ ಕಾಲುವೆ ಬಳಿ ತಡರಾತ್ರಿಯವರೆಗೆ ಸಂಗೀತ ಕೇಳುತ್ತ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿದ್ದರು. ಜತೆಗೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಇತರ ಮೂವರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದು, ಒಬ್ಬರು ಮೃತಪಟ್ಟಿದ್ದರು. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿತ್ತು. ಬಳಿಕ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.
ಕ್ರೈಂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.