ಬಿಹಾರ: ಸಂಗೀತ ಕಾರ್ಯಕ್ರಮದೊಳಗೆ (orchestra) ಬಸ್ ನುಗ್ಗಿ ಐವರು ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ಶುಕ್ರವಾರ ನಡೆದಿದೆ. ಬಿಹಾರದ (Bihar) ಪಶ್ಚಿಮ ಚಂಪಾರಣ್‌ನ ಲೌರಿಯಾ ಬಳಿಯ ಹಳ್ಳಿಯೊಂದರಲ್ಲಿ ಶುಕ್ರವಾರ ತಡರಾತ್ರಿ ಆಯೋಜಿಸಿದ್ದ ಛಾತಿ ಸಮಾರಂಭದ (Chhathi ceremony) ಪ್ರಯುಕ್ತ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದೊಳಗೆ ವೇಗವಾಗಿ ಬಂದ ಬಸ್ ನುಗ್ಗಿದೆ. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ.
ಬಿಹಾರದ ಪಶ್ಚಿಮ ಚಂಪಾರಣ್‌ನ ಲೌರಿಯಾ ಬಳಿಯ ಹಳ್ಳಿಯೊಂದರಲ್ಲಿ ಶುಕ್ರವಾರ ನವಜಾತ ಶಿಶುವಿನ ಛಾತಿ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದರ ಪ್ರಯುಕ್ತ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಬಸ್ ನುಗ್ಗಿದೆ. ಇದರಿಂದ ಕಾರ್ಯಕ್ರಮ ವೀಕ್ಷಿಸುತ್ತಿದ್ದ ಜನರು ಬಸ್ ನಡಿ ಸಿಲುಕಿದ್ದಾರೆ. ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಪ್ಪಿದ ಭಾರೀ ದುರಂತ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಬಾಲಕ್ಕೆ ಡಿಕ್ಕಿ, ಪ್ರಯಾಣಿಕರು ಸೇಫ್
ಮಗು ಜನಿಸಿದ ಆರನೇ ದಿನ ಛಾತಿ ಸಮಾರಂಭವನ್ನು ನಡೆಸಲಾಗುತ್ತದೆ. ಇದೊಂದು ಉತ್ತರ ಮತ್ತು ಮಧ್ಯ ಭಾರತದ ರಾಜ್ಯಗಳಲ್ಲಿ ಪ್ರಮುಖವಾಗಿ ಆಚರಿಸಲಾಗುವ ಸಾಂಪ್ರದಾಯಿಕ ಆಚರಣೆಯಾಗಿದೆ. ನವಜಾತ ಶಿಶು ಮತ್ತು ತಾಯಿಯ ಆರೋಗ್ಯ ರಕ್ಷಣೆಗಾಗಿ ಷಷ್ಠಿ ದೇವಿಯನ್ನು ಪೂಜಿಸಲಾಗುತ್ತದೆ.
ಈ ದಿನ ಮಗು ಮತ್ತು ಬಾಣಂತಿಯನ್ನು ಸ್ನಾನ ಮಾಡಿಸಿ ಪೂಜಾ ವಿಧಿವಿಧಾನಗಳನ್ನು ನಡೆಸಲಾಗುತ್ತಿಯಾದೆ. ಮಧ್ಯರಾತ್ರಿ ದೇವರು ಬಂದು ಮಗುವಿನ ಭವಿಷ್ಯ ಬರೆಯುತ್ತಾರೆ ಎನ್ನುವ ನಂಬಿಕೆಯಿಂದ ಕಾಗದ, ಪೆನ್ ಹಾಗೂ ದೀಪವನ್ನು ಇರಿಸಲಾಗುತ್ತದೆ. ಮಗುವಿಗೆ ದೃಷ್ಟಿ ತಾಕದಂತೆ ಕಪ್ಪು ದಾರವನ್ನು ಕೈ ಅಥವಾ ಕಾಲಿಗೆ ಕಟ್ಟಿ ಕಾಡಿಗೆ ಹಚ್ಚಲಾಗುತ್ತದೆ. ಬಂಕತ್ವಾ ಪರೌಟೋಲಾದಲ್ಲಿ ನಡೆದ ಇಂತಹ ಆಚರಣೆ ಹಿನ್ನೆಲೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು. ಈ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ವೇಗವಾಗಿ ಬಂದ ಬಸ್ ನಿಯಂತ್ರಣ ಕಳೆದುಕೊಂಡು ಸಂಗೀತ ಕಾರ್ಯಕ್ರಮ ನೋಡುತ್ತಿದ್ದ ಜನರ ಮೇಲೆ ಹರಿದಿದೆ.
ಮೀಸಲಾತಿ ಜಾತಿಗೆ ಅಲ್ಲ ಬಡವರಿಗೆ ಸಿಗಲಿ: ಜಂತರ್ ಮಂತರ್ ಪ್ರತಿಭಟನಾಕಾರರ ಆಗ್ರಹ
ಈ ಕುರಿತು ಮಾಹಿತಿ ನೀಡಿದ ಲೌರಿಯಾದ ಸ್ಟೇಷನ್ ಹೌಸ್ ಅಧಿಕಾರಿ (SHO) ಇಂದರ್ಜೀತ್ ಪಾಸ್ವಾನ್, ಆರ್ಕೆಸ್ಟ್ರಾ ಪ್ರದರ್ಶನ ವೀಕ್ಷಿಸುತ್ತಿದ್ದ ಜನರ ಬಳಿಗೆ ಗೋರಖ್‌ಪುರದಿಂದ ಬೆಟ್ಟಿಯಾಗೆ ಹೋಗುವ ಮಾರ್ಗದಲ್ಲಿ ವೇಗವಾಗಿ ಬಂದ ಬಸ್ ನಿಯಂತ್ರಣ ಕಳೆದುಕೊಂಡು ನುಗ್ಗಿದೆ. ಇದರಿಂದ ಐದು ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡರು. ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ಬಸ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎಂದರು.