ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೀಸಲಾತಿ ಜಾತಿಗೆ ಅಲ್ಲ ಬಡವರಿಗೆ ಸಿಗಲಿ: ಜಂತರ್ ಮಂತರ್‌ ಪ್ರತಿಭಟನಾಕಾರರ ಆಗ್ರಹ

ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ಮತ್ತು ಎಸ್‌ಸಿ, ಎಸ್‌ಟಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಮೀಸಲಾತಿ ರಹಿತ ವರ್ಗಗಳ ಯುವಕರು ಪ್ರತಿಭಟನೆ ನಡೆಸಿದರು. ಕೋಟಾ ವ್ಯವಸ್ಥೆಯು ಜಾತಿ ಆಧಾರಿತವಾಗಿ ಅಲ್ಲ, ಆರ್ಥಿಕ ಸ್ಥಿತಿ ಆಧರಿಸಿ ನಿರ್ಧಾರವಾಗಬೇಕು ಎಂದು ಅವರು ಆಗ್ರಹಿಸಿದರು.

ಜಾತಿ ಆಧಾರಿತ ಮೀಸಲಾತಿಗೆ ವಿರೋಧಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ

ಸಂಗ್ರಹ ಚಿತ್ರ -

ನವದೆಹಲಿ: ಜಾತಿ ಆಧಾರಿತ ಮೀಸಲಾತಿಯನ್ನು (caste-based reservation) ವಿರೋಧಿಸಿ, ಎಸ್ಸಿ, ಎಸ್ಟಿ ಕಾಯ್ದೆಯನ್ನು (SC/ST Act) ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ (delhi) ಜಂತರ್ ಮಂತರ್‌ನಲ್ಲಿ (Jantar Mantar protesters) ಶುಕ್ರವಾರ ಮೀಸಲಾತಿ ರಹಿತ ವರ್ಗಗಳ ಯುವಕರು ನೀಟ್ ಆಕಾಂಕ್ಷಿ ಹರ್ಷ್ ದುಬೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕೋಟಾಗಳು ಜಾತಿ ಆಧಾರಿತವಾಗಿ ಅಲ್ಲ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿ ಇರಬೇಕು ಎಂದು ಅವರು ಒತ್ತಾಯಿಸಿದ್ದು, ಹೆಚ್ಚಿನ ಸರ್ಕಾರಿ ಸವಲತ್ತುಗಳು ಹಿಂದುಳಿದವರನ್ನು ತಲುಪುತ್ತಿಲ್ಲ. ಅವುಗಳನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಮಾನತೆಯ ನಿಯಮಗಳನ್ನು ವಿರೋಧಿಸಿದ ಪ್ರತಿಭಟನಾಕಾರರು, ವಿದ್ಯಾರ್ಥಿಗಳಿಗೆ ಜಾತಿಗಿಂತ ಅವರ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಶಿಕ್ಷಣ, ತರಬೇತಿ ಮತ್ತು ಇತರ ಅಗತ್ಯ ಬೆಂಬಲಗಳು ಸಿಗಬೇಕು. ಇದಕ್ಕೆ ಸರ್ಕಾರಿ ಸಹಾಯವನ್ನು ಒದಗಿಸಬೇಕು. ಜಾತಿಗಾಗಿ ಅಲ್ಲ, ಬಡವರಿಗೆ ಮೀಸಲಾತಿ ಸಿಗಬೇಕು ಎಂದು ಆಗ್ರಹಿಸಿದರು.

ಸುಂಕ ರಹಿತ ಸಕ್ಕರೆ‌ ಆಮದಿಗೆ ಅನುಮತಿ: ಸಕ್ಕರೆ ಬೆಲೆ ಏರಿಕೆಗೆ ಕಡಿವಾಣ ಹಾಕಲು ಮಹತ್ವದ ನಿರ್ಧಾರ

ಎಸ್ಸಿ, ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ವಿರೋಧಿಸಿದ ಪ್ರತಿಭಟನಾಕಾರರು, ಅದನ್ನು ರದ್ದುಗೊಳಿಸಬೇಕು. ಯಾಕೆಂದರೆ ಇದರ ಪ್ರಯೋಜನಗಳು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳನ್ನು ತಲುಪುವುದಿಲ್ಲ. ಕಾಯ್ದೆಗಳು ವ್ಯಕ್ತಿಗಳ ವಿರುದ್ಧ ದುರುಪಯೋಗಪಡಿಸಿಕೊಳ್ಳುವಂತೆ ಇರಬಾರದು ಎಂದರು.



ಮೀಸಲಾತಿ ಪರಿಚಯಿಸಿದ ದಶಕಗಳ ಅನಂತರವೂ ಅವುಗಳ ಮುಂದುವರಿದಿರುವುದನ್ನು ಪ್ರಶ್ನಿಸಿದ ಪ್ರತಿಭಟನಾಕಾರರು, ಇಂದಿನ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ನೀತಿಯನ್ನು ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಮೀಸಲಾತಿಯಲ್ಲಿ ಮಾನದಂಡವನ್ನು ಪರಿಚಯಿಸಲು ಕರೆ ನೀಡಿದ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆಗಳಿಗೆ ಆಗ್ರಹಿಸಿದರು.

ಪರಿಸ್ಥಿತಿಗಳು ಬದಲಾಗಿವೆ. ಅಸ್ತಿತ್ವದಲ್ಲಿರುವ ನಿಯಮಗಳ ಚೌಕಟ್ಟನ್ನು ಪರಿಶೀಲಿಸಬೇಕೇ ಮತ್ತು ತಾರತಮ್ಯವಿಲ್ಲದೆ ಆರ್ಥಿಕ ಅನಾನುಕೂಲತೆಯನ್ನು ಹೇಗೆ ಪರಿಹರಿಸಬಹುದು ಎಂಬುದರ ಕುರಿತು ವ್ಯಾಪಕ ಚರ್ಚೆಗಳು ನಡೆಯಲಿ ಎಂದು ಅವರು ಒತ್ತಾಯಿಸಿದರು.

ಜಂತರ್ ಮಂತರ್ ನಲ್ಲಿ ಶುಕ್ರವಾರ 'ಮೀಸಲಾತಿ ಸುಧಾರಣಾ ಆಂದೋಲನ' ಅಭಿಯಾನದ ಅಡಿಯಲ್ಲಿ ಪ್ರತಿಭಟನೆ ಪ್ರಾರಂಭವಾದ ಬಳಿಕ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಯಿತು. ಪೊಲೀಸ್ ಮತ್ತು ಕ್ಷಿಪ್ರ ಕಾರ್ಯ ಪಡೆಯನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಯಿತು. ಈ ಹಿನ್ನೆಲೆಯಲ್ಲಿ ರಾಜಸ್ಥಾನ ಮೂಲದ ಜನರಲ್ ಸೇನಾ, ಚಾಣಕ್ಯ ಸೇನಾ ಹಾಗೂ ಕರ್ಣಿ ಸೇನೆ ಕೂಡ ಪ್ರತಿಭಟನೆಯಲ್ಲಿ ಸೇರಿಕೊಂಡವು. ಯೂಟ್ಯೂಬರ್ ಅಜೀತ್ ಭಾರ್ತಿ ಕೂಡ ಪಾಲ್ಗೊಂಡಿದ್ದರು.

Atrocities Act: ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು ಪ್ರಕಟ: ಸಾರ್ವಜನಿಕರ ಸಮ್ಮುಖದಲ್ಲಿ ಜಾತಿ ನಿಂದನೆಯಾದರಷ್ಟೆ ಅಟ್ರಾಸಿಟಿ ಕಾಯ್ದೆ ಅನ್ವಯ

ದಿನದಾಂತ್ಯದಲ್ಲಿ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಜಂತರ್ ಮಂತರ್‌ನಲ್ಲಿ ಯಾವುದೇ ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ. ರಾಮಲೀಲಾ ಮೈದಾನದಲ್ಲಿ ಸಂಜೆ 4 ಗಂಟೆಯವರೆಗೆ ಗರಿಷ್ಠ 500 ಜನರಿಗೆ ಅವಕಾಶ ನೀಡಿ ಶಾಂತಿಯುತ ಪ್ರತಿಭಟನೆಗೆ ಆಕ್ಷೇಪಣೆ ರಹಿತ ಪ್ರಮಾಣಪತ್ರ (ಎನ್‌ಒಸಿ) ನೀಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.