ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Case filed against police constable: ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಕೆ: ಲೈಂಗಿಕ ದೌರ್ಜನ್ಯ: ಪೊಲೀಸ್ ಪೇದೆ ವಿರುದ್ಧ ಕೇಸ್

ಆ.7ರಂದು ರಾತ್ರಿ ಮನೆಗೆ ಬಂದ ಆರೋಪಿ, ಬಾಗಿಲು ತೆರೆಯುವಂತೆ ಒತ್ತಾಯಿಸಿ ಒಳನುಗ್ಗಿ ಮಹಿಳೆಯ ಮುಖಕ್ಕೆ ಹೊಡೆದಿದ್ದಾನೆ. ಬಳಿಕ ಅಡುಗೆ ಕೋಣೆಯಿಂದ ಚಾಕು ತಂದು ಬೆದರಿಸಿ, ಬಲವಂತವಾಗಿ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕೃತ್ಯದ ವೇಳೆ ಮೊಬೈಲ್‌ನಲ್ಲಿ ಚಿತ್ರ ತೆಗೆದಿದ್ದು, ಬಳಿಕ ಬಟ್ಟೆಗಳನ್ನು ತೊಳೆಯುವಂತೆ ಸೂಚಿಸಿದ್ದಾನೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಲಬುರಗಿ: ಮಹಿಳೆಯೊಬ್ಬರ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿದ ಬಳಿಕ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪೊಲೀಸ್ ಪೇದೆ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಮರ್ ಕಾಲೋನಿ ನಿವಾಸಿ ಸಮಾಜ ಸೇವಕಿ ಮುಜೀಬುನ್ನಿಸಾ ಬೇಗಂ (40) ನೀಡಿದ ದೂರಿನ ಆಧಾರದ ಮೇಲೆ ಗಲೀಬ್ ಕಾಲೋನಿ, ಎಂಎಸ್‌ಕೆ ಮಿಲ್ ನಿವಾಸಿ ಪೊಲೀಸ್ ಪೇದೆ ಸೈಯದ್ ತೌಶೀಫ್ ಹುಸೇನ್ (41) ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರರಿಗೆ 2023ರಿಂದ ಆರೋಪಿ ಪರಿಚಯವಿದ್ದು, 2024ರಿಂದ ಸ್ನೇಹ ಹಾಗೂ ಪ್ರೀತಿಯ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ನಿರಾಕರಿಸಿದ ಬಳಿಕ ದೂರವಾಣಿ ಮೂಲಕ ಕಿರುಕುಳ ನೀಡುತ್ತಿದ್ದ. ತನ್ನ ಮಾತು ಕೇಳದಿದ್ದರೆ ಕಲಬುರಗಿಯಲ್ಲಿ ಜೀವನ ನಡೆಸಲು ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Kalaburagi Breaking: ಶಂಕಿತ ಉಗ್ರನ ಸಂಪರ್ಕ ಜಾಲದ ತನಿಖೆ: ಶಂಕಿತ ಉಗ್ರನ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲು

ಮನೆಗೆ ನುಗ್ಗಿ ದೌರ್ಜನ್ಯ ಆರೋಪ: ಆ.7ರಂದು ರಾತ್ರಿ ಮನೆಗೆ ಬಂದ ಆರೋಪಿ, ಬಾಗಿಲು ತೆರೆಯುವಂತೆ ಒತ್ತಾಯಿಸಿ ಒಳನುಗ್ಗಿ ಮಹಿಳೆಯ ಮುಖಕ್ಕೆ ಹೊಡೆದಿದ್ದಾನೆ. ಬಳಿಕ ಅಡುಗೆ ಕೋಣೆಯಿಂದ ಚಾಕು ತಂದು ಬೆದರಿಸಿ, ಬಲವಂತವಾಗಿ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕೃತ್ಯದ ವೇಳೆ ಮೊಬೈಲ್‌ನಲ್ಲಿ ಚಿತ್ರ ತೆಗೆದಿದ್ದು, ಬಳಿಕ ಬಟ್ಟೆಗಳನ್ನು ತೊಳೆಯುವಂತೆ ಸೂಚಿಸಿದ್ದಾನೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ತಡವಾಗಿದ್ದೇಕೆ?

ಆ.7ರಂದು ಘಟನೆ ನಡೆದಿದ್ದರೂ ಮಹಿಳೆ ತಕ್ಷಣ ಪೊಲೀಸರಿಗೆ ದೂರು ನೀಡಿರಲಿಲ್ಲ. ಘಟನೆ ಬಳಿಕ ಆರೋಪಿ ಕ್ಷಮೆ ಕೇಳಿ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದ. ಪೊಲೀಸ್ ಇಲಾಖೆಯಲ್ಲಿನ ತನ್ನ ಪ್ರಭಾವ ಹಾಗೂ ಕೆಲಸಕ್ಕೆ ಆಗಬಹುದಾದ ಪರಿಣಾಮಗಳನ್ನು ಉಲ್ಲೇಖಿಸಿ ದೂರು ನೀಡದಂತೆ ಮನವೊಲಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಸೆ.17 ಹಾಗೂ 18ರಂದು ಮತ್ತೆ ಸಂಪರ್ಕಿಸಿ ಬೆದರಿಕೆ ಹಾಕಿದ್ದಾನೆ. ದೂರು ನೀಡಿದರೆ ಮಹಿಳೆ ಹಾಗೂ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಲ್ಲದೆ, ತನ್ನ ವಿರುದ್ಧ ಕ್ರಮ ಕೈಗೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಬೆದರಿಕೆ ಹಾಕಿದ್ದಾನೆ ಎಂದು FIRನಲ್ಲಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ಚರ್ಚಿಸಿದ ಬಳಿಕ ನ.15ರಂದು ಮಹಿಳೆ ವಿಶ್ವವಿದ್ಯಾ ಲಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲು: ಬಿಎನ್‌ಎಸ್ 64(2)(ಎ): ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪ; 115(2): ಹಲ್ಲೆ ಆರೋಪ; 351(2): ಅಪರಾಧಾತ್ಮಕ ಬೆದರಿಕೆ; 352: ಉದ್ದೇಶಪೂರ್ವಕ ಅವಮಾನ; 238(ಬಿ): ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಆರೋಪ. ಈ ಕಲಂಗಳಡಿ ಪೊಲೀಸ್ ಪೇದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.