ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chamarajanagara: ಮದುವೆ ಮುಹೂರ್ತಕ್ಕೆ ಬರುತ್ತಿದ್ದ ವರನಿಗೇ ಮಹೂರ್ತ ಇಟ್ಟಳಾ ಭಾವಿ ವಧು!

ಚಾಕು ಚುಚ್ಚಿದ ವಧುವಿನ ಮಾಜಿ ಲವರ್ ಅನ್ನು ಪೊಲೀಸರು ಬಂಧಿಸಿ ಸರಿಯಾಗಿ ವಿಚಾರಣೆ ಮಾಡಿದ್ದಾರೆ. ಆಗ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮದುವೆಯಾಗಲಿದ್ದ ವಧುವೇ ಭಾವಿ ಪತಿಗೆ ಮುಹೂರ್ತ ಫಿಕ್ಸ್​ ಮಾಡಿರೋದು ಬಯಲಾಗಿದೆ. ಚಾಕು ಇರಿತ ಪ್ರಕರಣದಲ್ಲಿ ವಧು ನಯನ ಕೈವಾಡ ಬಹಿರಂಗವಾಗಿದೆ. ವಧು ನಯನ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆ ಮುಹೂರ್ತಕ್ಕೆ ಬರುತ್ತಿದ್ದ ವರನಿಗೇ ಮಹೂರ್ತ ಇಟ್ಟಳಾ ಭಾವಿ ವಧು!

ವರ ರವೀಶ್‌, ಆರೋಪಿ ನಯನ -

ಹರೀಶ್‌ ಕೇರ
ಹರೀಶ್‌ ಕೇರ Feb 2, 2026 10:24 AM

ಚಾಮರಾಜನಗರ, ಫೆ.2: ಮೊನ್ನೆ ಮೊನ್ನೆಯಷ್ಟೇ ಚಾಮರಾಜನಗರ (Chamarajanagara) ಜಿಲ್ಲೆಯ ಕೊಳ್ಳೇಗಾಲದಲ್ಲಿ (Kollegala) ಮದುವೆ ಮಂಟಪಕ್ಕೆ ಹೋಗುತ್ತಿದ್ದ ವರನಿಗೆ (Groom) ಚಾಕು ಇರಿದ ಘಟನೆ (Stabbing) ನಡೆದು ದೊಡ್ಡ ಸುದ್ದಿಯಾಗಿತ್ತು. ವಧುವಿನ ಮಾಜಿ ಪ್ರೇಮಿ, ಮಂಟಪಕ್ಕೆ ಬರುತ್ತಿದ್ದ ವರನ ಕಾರನ್ನು ಅಡ್ಡಗಟ್ಟಿ ಹೊರಗೆಳೆದು ಚಾಕುವಿನಿಂದ ಇರಿದಿದ್ದ. ಘಟನೆಯಲ್ಲಿ ವರ ರವೀಶ್​​ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ವಧುವಿನ ಮಾಜಿ ಪ್ರಿಯಕರನೇ ಕೋಪದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಭಾವಿಸಲಾಗಿತ್ತು. ಆದರೆ ಈಗ ಈ ಕೇಸ್​​ಗೆ ಬಿಗ್​ ಟ್ವಿಸ್ಟ್​​​ ಸಿಕ್ಕಿದೆ.

ಚಾಕು ಚುಚ್ಚಿದ ವಧುವಿನ ಮಾಜಿ ಲವರ್ ಅನ್ನು ಪೊಲೀಸರು ಬಂಧಿಸಿ ಸರಿಯಾಗಿ ವಿಚಾರಣೆ ಮಾಡಿದ್ದಾರೆ. ಆಗ ಆರೋಪಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮದುವೆಯಾಗಲಿದ್ದ ವಧುವೇ ಭಾವಿ ಪತಿಗೆ ಮುಹೂರ್ತ ಫಿಕ್ಸ್​ ಮಾಡಿರೋದು ಬಯಲಾಗಿದೆ. ಚಾಕು ಇರಿತ ಪ್ರಕರಣದಲ್ಲಿ ವಧು ನಯನ ಕೈವಾಡ ಬಹಿರಂಗವಾಗಿದೆ. ವಧು ನಯನ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 29 ರಂದು ಮದುವೆ ಮಂಟಪಕ್ಕೆ ತೆರಳುತ್ತಿದ್ದ ವರ ರವೀಶ್​​ಗೆ ಚಾಕುವಿನಿಂದ ಇರಿಯಲಾಗಿತ್ತು. ವಧು ನಯನಳ ಹಳೆ ಪ್ರೇಮಿ ದರ್ಶನ್​ ಮತ್ತು ಆತನ ಸ್ನೇಹಿತರು ಸೇರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಬಗ್ಗೆ ಕೇಸ್​ ದಾಖಲಿಸಿಕೊಂಡು ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೇ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ, ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Assault Case: ಮದುವೆ ರಿಸೆಪ್ಷನ್‌ಗೆ ತೆರಳುತ್ತಿದ್ದ ವರನಿಗೆ ಚೂರಿಯಿಂದ ಇರಿತ; ವಧುವಿನ ಹಳೆ ಲವರ್‌ ಕೃತ್ಯ?

ಘಟನೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವೀಶ್​​ ಬಳಿ ಬಂದಿದ್ದ ವಧು ನಯನಾ, ಘಟನೆಯಿಂದ ಗಾಬರಿಯಾದವಳಂತೆ ನಾಟಕವಾಡಿದ್ದಳು. ರವೀಶ್​​ ಮುಂದೆ ಕಣ್ಣೀರು ಹಾಕಿ, ತನ್ನನ್ನು ಮದುವೆಯಾಗುವಂತೆ ಗೋಗರೆದಿದ್ದಳು. ಆದರೆ ಇದಕ್ಕೆ ರವೀಶ್​​ ಒಪ್ಪದೆ,​ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದರು. ಮದುವೆಯಾಗಲು ಬಂದ ವೇಳೆ ಚಾಕು ಚುಚ್ಚಿ ಪ್ರಾಣ ತೆಗೆಯಲು ಪ್ರಯತ್ನ ಪಟ್ಟಿದ್ದಾನೆ, ಮುಂದೆ ಇದೇ ರೀತಿಯಾದರೆ ಯಾರು ಹೊಣೆ ಎಂದು ರವೀಶ್​ ಮದುವೆಯಾಗಲು ನಿರಾಕರಿಸಿದ್ದರು.

ಪೊಲೀಸರು ನಯನಾಳ ನಟವಳಿಕೆ ಕುರಿತು ಸಂಶಯ ತಾಳಿದ್ದು, ಆಕೆಯ ಕಾಲ್‌ ಹಾಗೂ ಮೆಸೇಜ್‌ ಹಿಸ್ಟರಿ ತೆಗೆಸಿದ್ದಾರೆ. ಆಗ ಈ ಅಪರಾಧದ ಹಿಂದೆ ಆಕೆಯ ಪಾತ್ರವೂ ಇರುವುದು ಗೊತ್ತಾಗಿದೆ. ಪೊಲೀಸರ ವಿಚಾರಣೆಯ ವೇಳೆ ವಧು ನಯನಾಳ ಕೈವಾಡದ ಬಗ್ಗೆ ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ʻರಾಧಾ ರಮಣʼ ನಟಿ ಕಾವ್ಯ ಗೌಡ ಮೇಲೆ ಗಂಭೀರ ಹಲ್ಲೆ, ಪತಿಗೆ ಇರಿತ! ಪೊಲೀಸ್ FIR ಕಾಪಿಯಲ್ಲಿ ಏನಿದೆ?‌