ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಟವಾಡಿದ್ದಕ್ಕೆ ಮಕ್ಕಳ ಅರ್ಧ ಕೂದಲು ಬೋಳಿಸಿ ಶಿಕ್ಷೆ , ಶಾಲೆ ವಿರುದ್ಧ ಪೋಷಕರ ಆಕ್ರೋಶ

ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಆಶ್ರಮ ಶಾಲೆಯೊಂದರ 82 ವಿದ್ಯಾರ್ಥಿಗಳಿಗೆ ತಲೆ ಕೂದಲನ್ನು ಅರ್ಧ ಬೋಳು ಮಾಡಿಸಿ ಶಿಕ್ಷೆ ವಿಧಿಸಲಾಗಿದೆ. ಕೂದಲು ಕತ್ತರಿಸಲು ಸರತಿಯಲ್ಲಿ ನಿಲ್ಲಬೇಕಾದ ಮಕ್ಕಳು ಆಟವಾಡುತ್ತಿದ್ದುದ್ದಕ್ಕೆ ಈ ಶಿಕ್ಷೆ ವಿಧಿಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಕ್ಕಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಗ್ರಹ ಚಿತ್ರ

ಮಹಾರಾಷ್ಟ್ರ: ಆಟವಾಡಿದ್ದಕ್ಕೆ ಮಕ್ಕಳ ಕೂದಲು ಅರ್ಧ ಬೋಳಿಸಿ (Half bald) ಶಿಕ್ಷೆ ವಿಧಿಸಿರುವ ಘಟನೆ ಮಹಾರಾಷ್ಟ್ರದ (maharastra) ಚಂದ್ರಪುರ ಜಿಲ್ಲೆಯ (Chandrapur district) ಆಶ್ರಮ ಶಾಲೆಯೊಂದರಲ್ಲಿ ನಡೆದಿದೆ. ಇದರ ಚಿತ್ರಗಳು ಹೊರಬಿದ್ದ ಮೇಲೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಪುರ ಜಿಲ್ಲೆಯ ಸರ್ಕಾರಿ ಆಶ್ರಮ ಶಾಲೆಯೊಂದರಲ್ಲಿ (government secondary ashram school) ಕೂದಲು ಕತ್ತರಿಸಲು ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿದ್ದ ಮಕ್ಕಳು ಆಟವಾಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ. ಸುಮಾರು 82 ಮಕ್ಕಳ ತಲೆಯ ಅರ್ಧ ಭಾಗದಷ್ಟು ಕೂದಲನ್ನು ಮಾತ್ರ ತೆಗೆಯಲಾಗಿದೆ ಎಂದು ಆರೋಪಿಸಲಾಗಿದೆ.

ಚಂದ್ರಪುರ ಜಿಲ್ಲೆಯ ಚಿಮೂರ್ ತಾಲೂಕಿನ ಜಂಭುಲ್‌ಘಾಟ್‌ನಲ್ಲಿರುವ ಸರ್ಕಾರಿ ಪ್ರೌಢ ಆಶ್ರಮ ಶಾಲೆಯಲ್ಲಿ ಶನಿವಾರ ಎಲ್ಲಾ ಮಕ್ಕಳ ಕೂದಲು ಕತ್ತರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಕೆಲವು ಮಕ್ಕಳು ಆಟವಾಡುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಶಾಲಾ ಅಧೀಕ್ಷಕರು, ಆಟವಾಡುತ್ತಿದ್ದ ಮಕ್ಕಳ ಕೇವಲ ಅರ್ಧದಷ್ಟು ಕೂದಲನ್ನು ಮಾತ್ರ ಕತ್ತರಿಸುವಂತೆ ಕ್ಷೌರಿಕನಿಗೆ ಸೂಚಿಸಿದರು ಎನ್ನಲಾಗಿದೆ.

TMC ತೊರೆದಿದ್ದ ಮಾಜಿ ಸಂಸದೆ ಕೋಯಲ್‌ ಮಲಿಕ್‌ಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್‌

ಅಸಮರ್ಪಕವಾಗಿ ಕೂದಲು ತೆಗೆಸಿಕೊಂಡ ಸ್ಥಿತಿಯಲ್ಲಿದ್ದ ಮಕ್ಕಳ ಚಿತ್ರಗಳು ಹೊರಬಿದ್ದ ಮೇಲೆ ಪೋಷಕರು ಶಾಲೆಯ ಅಧೀಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬಳಿಕ ಮೇಲಾಧಿಕಾರಿಗಳು ಶಾಲೆಯನ್ನು ಸಂಪರ್ಕಿಸಿ ವಿದ್ಯಾರ್ಥಿಗಳ ಕೂದಲನ್ನು ಸರಿಯಾಗಿ ಕತ್ತರಿಸುವಂತೆ ಸೂಚಿಸಿದ್ದಾರೆ.

ಹೀಗಾಗಿ ಶನಿವಾರ ತಡರಾತ್ರಿ ಮತ್ತೆ ಮಕ್ಕಳ ಕೂದಲು ಕತ್ತರಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು. ರಾತ್ರಿ 11 ಗಂಟೆ ಸುಮಾರಿಗೆ ಕೆಲವು ವಿದ್ಯಾರ್ಥಿಗಳು ಮಲಗಲು ಸಿದ್ಧರಾಗುತ್ತಿದ್ದಾಗ ಮಕ್ಕಳ ಕೂದಲು ಸರಿಯಾದ ರೀತಿಯಲ್ಲಿ ತೆಗೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಇದು ಭಾನುವಾರ ಬೆಳಗ್ಗೆ 4 ಗಂಟೆಯವರೆಗೆ ಮುಂದುವರಿದಿದೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಶಾಲಾ ಅಧೀಕ್ಷಕ ಪ್ರಶಾಂತ್ ಮೆಶ್ರಮ್ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಆದರೆ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಮತ್ತು ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದ್ದಾರೆ.

ಮಳೆಯ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಕೆಲವು ಸಮಯದಿಂದ ನಿಯಮಿತವಾಗಿ ಕೂದಲು ಕತ್ತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕೆಲವರು ಕೂದಲಿನ ಸ್ವಚ್ಛತೆಯನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಮುಖ್ಯವಾಗಿತ್ತು ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ಇಂಡಿಯಾ ಗೇಟ್‌ನಿಂದ ಜಂತರ್ ಮಂತರ್‌ವರೆಗೆ 2 ಮೆರವಣಿಗೆ: ಭದ್ರತೆಗಾಗಿ 5,000 ಪೊಲೀಸ್‌ ಸಿಬ್ಬಂದಿ, ಡ್ರೋನ್‌ ನಿಯೋಜನೆ

ಶಾಲಾ ಪ್ರಾಂಶುಪಾಲ ಪ್ರಶಾಂತ್ ಗಿರಿ ಅವರು ಘಟನೆಗೆ ಸಂಬಂಧಿಸಿದಂತೆ ಅಧೀಕ್ಷಕರಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದು, ಈ ನಡುವೆ ಪೋಷಕರು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author