ಬೆಳಗಾವಿ, ಫೆ.16 : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ SIT ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. 400 ಕೋಟಿ ರೂ. ದರೋಡೆ ಆಗಿದೆ ಎಂಬುದೇ ಸುಳ್ಳು ಎಂದು ಮಹಾರಾಷ್ಟ್ರ ಎಸ್ಐಟಿ ತನಿಖೆಯಲ್ಲಿ ವರದಿ ಬಹಿರಂಗವಾಗಿದೆ.
400 ಕೋಟಿ ರೂ. ದರೋಡೆ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಎಸ್ಐಟಿ ರಚಿಸಿತ್ತು. ಒಂದು ತಿಂಗಳ ಕಾಲ ಎಸ್ಐಟಿ ಅಧಿಕಾರಿಗಳು ಈ ಪ್ರಕರಣದ ಬೆನ್ನು ಬಿದ್ದಿದ್ದರು. ಅಮಾನ್ಯೀಕರಿಸಿದ 2000 ರೂ. ನೋಟುಗಳನ್ನು ತುಂಬಿದ ಕಂಟೈನರ್ ಮಾಯವಾಗಿದೆ ಎಂದು ಮೊದಲು ಆರೋಪಿಸಲಾಗಿತ್ತು. ಸಂದೀಪ್ ಪಾಟೀಲ್ ಎಂಬವರು ನಾಸಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ದೂರುದಾರ ಸಂದೀಪ್ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೃತ್ಯದ ಸ್ಥಳ, ಸಮಯ ಕರೆ ವಿವರದ ನಿಖರ ಮಾಹಿತಿ ಲಭ್ಯವಾಗಿಲ್ಲ. ಚೋರ್ಲ ಘಾಟ್‌ನಲ್ಲಿ ದರೋಡೆ ನಡೆದಿದೆ ಎಂಬುದಕ್ಕೆ ಯಾವ ನಂಬಲರ್ಹ ಸಾಕ್ಷಿಗಳೂ ಇಲ್ಲವೆಂದು ಎಸ್ಐಟಿ ವರದಿ ಸಲ್ಲಿಸಿದೆ. ಸಾಕ್ಷಿ ಕೊರತೆಯಿಂದಾಗಿ ಆರೋಪಿಗಳ ಬಿಡುಗಡೆಗೆ ಕೋರ್ಟ್ ಆದೇಶ ಹೊರಡಿಸಿದೆ.
400 ಕೋಟಿ ರು. ದರೋಡೆಯಲ್ಲಿ ಬೆಳಗಾವಿ ಪೊಲೀಸರು ಭಾಗಿ ?
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ತಥಾಕಥಿತ 400 ಕೋಟಿ ರೂ. ದರೋಡೆ ಪ್ರಕರಣ ಸಂಚಲನ ಸೃಷ್ಟಿಸಿತ್ತು. ದೂರು ನೀಡಿದ ಸಂದೀಪ್ ಪಾಟೀಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದೀಗ ಮಹಾರಾಷ್ಟ್ರದ ನಾಸಿಕ್ ಪೊಲೀಸರು ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.