ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಗುಂಡು ಹಾರಿಸಿ ವ್ಯಕ್ತಿಯ ಕೊಲೆ, ದೇಹದೊಳಗೆ 69 ಬುಲೆಟ್ ಪತ್ತೆ

Crime News: ಎರಡು ಕುಟುಂಬಗಳ ನಡುವಿನ ಕಲಹದಲ್ಲಿ 52 ವರ್ಷದ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮೃತದೇಹದಲ್ಲಿ 69 ಗುಂಡುಗಳು ಪತ್ತೆಯಾಗಿದ್ದು, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ಕಲಹದ ನಂತರ 52 ವರ್ಷದ ವ್ಯಕ್ತಿಯೊಬ್ಬರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ನವೆಂಬರ್ 30 ರಂದು ದಕ್ಷಿಣ ದೆಹಲಿಯ (Delhi) ಆಯಾ ನಗರದಲ್ಲಿ ಈ ಘಟನೆ ನಡೆದಿದೆ. ರಟ್ಟನ್ ಲೋಹಿಯಾ ಎಂಬುವವರು ಮೃತ ದುರ್ದೈವಿ. ಮೃತರ ದೇಹದಲ್ಲಿ 69 ಗುಂಡುಗಳು ಪತ್ತೆಯಾಗಿವೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ (Crime News).

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಭಾರತದ ಹೊರಗಿನ ದರೋಡೆಕೋರರಿಗೆ ರಟ್ಟನ್ ಲೋಹಿಯಾ ಅವರನ್ನು ಕೊಲ್ಲಲು ಸುಪಾರಿ ನೀಡಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

Murder Attempt: ಮರ್ಯಾದೆ ಕೊಡಲಿಲ್ಲ ಎಂದು ಹೆಂಡತಿಯನ್ನು ಕೊಲ್ಲಲು ಸುಪಾರಿ ಕೊಟ್ಟ ಗಂಡ!

ದೆಹಲಿ ಪೊಲೀಸರ ಪ್ರಕಾರ, ನವೆಂಬರ್ 30ರ ಮುಂಜಾನೆ ರಟ್ಟನ್ ಲೋಹಿಯಾ ಕೆಲಸಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದರು. ಈ ವೇಳೆ ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿತು. ಹಲವಾರು ಸುತ್ತು ಗುಂಡು ಹಾರಿಸಿದ್ದರಿಂದ ರಟ್ಟನ್ ಸ್ಥಳದಲ್ಲೇ ಮೃತಪಟ್ಟರು.

ವಿಷಯ ತಿಳಿದ ಕೂಜಲೇ ಸ್ಥಳಕ್ಕೆ ಧಾವಿಸಿ ಪರಿಸೀಲಿಸಿದ ಪೊಲೀಸರು, ಖಾಲಿ ಶೆಲ್‌ಗಳು ಮತ್ತು ಮೂರು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡರು. ನವೆಂಬರ್ 30 ರಂದು ಭಾನುವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಆಯಾ ನಗರದ ಮಾರುಕಟ್ಟೆಯ ಬಳಿ ಕಪ್ಪು ಬಣ್ಣದ ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಮೂವರು ದಾಳಿಕೋರರು ರಟ್ಟನ್‌ಗಾಗಿ ಕಾಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ದೃಶ್ಯಗಳನ್ನು ವಿಶ್ಲೇಷಿಸಿದಾಗ, ಕಾರಿನ ನಂಬರ್ ಪ್ಲೇಟ್‌ಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

Murder Case: ಮುಸ್ಲಿಂ ಯುವತಿಯನ್ನು ಬಿಟ್ಟು ಬಿಡು ಎಂದಿದ್ದ ತಂದೆ ತಾಯಿಯನ್ನೇ ಕೊಲೆಗೈದು ನದಿಗೆಸೆದ ಪಾಪಿ ಮಗ

ಈ ಹತ್ಯೆಯನ್ನು ರಂಬೀರ್ ಲೋಹಿಯಾ ಮತ್ತು ಅವರ ಸಂಬಂಧಿಕರು ತಮ್ಮ ಪುತ್ರ ಅರುಣ್ ಅವರ ಸಾವಿಗೆ ಪ್ರತೀಕಾರವಾಗಿ ನಡೆಸಿದ್ದಾರೆ ಎಂದು ರಟ್ಟನ್ ಕುಟುಂಬ ಆರೋಪಿಸಿದೆ. ಮೇ 15 ರಂದು, ಅರುಣ್ ತನ್ನ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಅವರನ್ನು ಕೊಂದಿದ್ದರು.

ಅರುಣ್ ಸಾವಿನ ಪ್ರಕರಣದಲ್ಲಿ ರಟ್ಟನ್ ಅವರ ಹಿರಿಯ ಮಗ ದೀಪಕ್ ಅವರನ್ನು ಬಂಧಿಸಲಾಯಿತು. ರಟ್ಟನ್ ಅವರ ಪುತ್ರಿ ನೀಡಿದ ಸಂದರ್ಶನದಲ್ಲಿ, ರಂಬೀರ್ ಮತ್ತು ಅವರ ಸಂಬಂಧಿಕರು ತಮ್ಮ ತಂದೆಗೆ ಬಹಳ ಸಮಯದಿಂದ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದರು. ತಮ್ಮ ತಂದೆಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ ಎಂದು ಅವರು ಹೇಳಿದ್ದರು.

ಯುವಕರ ನಡುವಿನ ಘರ್ಷಣೆಯಿಂದ ಕೌಟುಂಬಿಕ ಜಗಳ ಉಂಟಾಗಿದೆ ಎಂದು ಮೃತ ರಟ್ಟನ್ ಅವರ ಸಹೋದರಿ ಬೇಸರ ವ್ಯಕ್ತಪಡಿಸಿದ್ದಾರೆ.