ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಾಜ್ಯ ರಾಜಧಾನಿಯಲ್ಲಿ ಆಘಾತಕಾರಿ ಘಟನೆ! ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೊ ನೋಡಿ

Zomato Delivery Agent Thrashed: ಆಹಾರ ತಡವಾಗಿ ತಲುಪಿಸಿದ್ದಕ್ಕೆ ಕೋಪಗೊಂಡ ಇಬ್ಬರು ಪುರುಷರು ಝೊಮ್ಯಾಟೊ ಡೆಲಿವರಿ ಬಾಯ್ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜೊಮ್ಯಾಟೊ ಡೆಲಿವರಿ ಬಾಯ್ ಮೇಲೆ ಡೆಡ್ಲಿ ಅಟ್ಯಾಕ್‌- ವಿಡಿಯೊ ನೋಡಿ

-

Priyanka P Priyanka P Sep 19, 2025 6:26 PM

ಬೆಂಗಳೂರು: ತಮ್ಮ ಆರ್ಡರ್ ತಡವಾಗಿ ಬಂದಿದ್ದಕ್ಕಾಗಿ ಜೊಮ್ಯಾಟೊ ಡೆಲಿವರಿ ಬಾಯ್ (Zomato Delivery Agent) ಮೇಲೆ ಇಬ್ಬರು ಅಮಾನುಷವಾಗಿ ಥಳಿಸಿರುವ ಘಟನೆ ಭಾನುವಾರದಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಶೋಭಾ ಥಿಯೇಟರ್ ಬಳಿ ಈ ಘಟನೆ ನಡೆದಿದ್ದು, ಆರ್ಡರ್ ವಿಳಂಬವಾದ ಬಗ್ಗೆ ಆರೋಪಿಗಳು ಫುಡ್ ಡೆಲಿವರಿ ಬಾಯಿ ಜೊತೆ ವಾಗ್ವಾದ ನಡೆಸಿದರು. ಅದು ಶೀಘ್ರದಲ್ಲೇ ಹಿಂಸಾತ್ಮಕ ರೂಪ ಪಡೆಯಿತು. ಡೆಲಿವರಿ ಬಾಯ್‌ಗೆ ಇಬ್ಬರು ಸೇರಿ ಥಳಿಸಿದ್ದಾರೆ. ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಆರ್ಡರ್ ವಿಳಂಬವಾದ ಬಗ್ಗೆ ಕೋಪಗೊಂಡ ಇಬ್ಬರು ವ್ಯಕ್ತಿಗಳು ತಮ್ಮ ಸುತ್ತಲೂ ಬಿದ್ದಿದ್ದ ವಸ್ತುಗಳನ್ನು ಎತ್ತಿಕೊಂಡು ಡೆಲಿವರಿ ಬಾಯ್‍ಗೆ ಮನಸೋಇಚ್ಛೆ ಥಳಿಸಿದ್ದಾರೆ. ಒಬ್ಬ ವ್ಯಕ್ತಿ ಹತ್ತಿರದಲ್ಲಿದ್ದ ಪ್ಲಾಸ್ಟಿಕ್ ಪಾತ್ರೆಯನ್ನು ಎತ್ತಿಕೊಂಡು ಡೆಲಿವರಿ ಬಾಯ್ ತಲೆಗೆ ಎರಡು ಬಾರಿ ಹೊಡೆದರೆ, ಮತ್ತೊಬ್ಬ ವ್ಯಕ್ತಿ ಕುರ್ಚಿಯಿಂದ ಹೊಡೆದಿದ್ದಾನೆ. ಘಟನೆ ತಿಳಿದ ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಜಗಳವನ್ನು ಬಿಡಿಸಿದ್ದಾರೆ. ಡೆಲಿವರಿ ಬಾಯ್ ಹಾಗೂ ಆತನ ಮೇಲೆ ಹಲ್ಲೆ ನಡೆಸಿದ ಇಬ್ಬರು ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಇನ್ನು ಘಟನೆ ಸಂಬಂಧ ಡೆಲಿವರಿ ಬಾಯ್ ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ.

ವಿಡಿಯೊ ವೀಕ್ಷಿಸಿ:



ಜೊಮ್ಯಾಟೊ ಬಾಯ್ ಮೇಲೆ ಈ ರೀತಿಯ ಹಲ್ಲೆ ನಡೆಸಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಹೀಗಾಗಿ ಕೆಲವೊಮ್ಮೆ ಆಹಾರ ತಡವಾಗಿ ತಲುಪಬಹುದು ಎಂದು ನೆಟ್ಟಿಗರು ಹೇಳಿದ್ದಾರೆ. ವಿಳಂಬವಾಗಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಈ ರೀತಿ ಹಲ್ಲೆ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ ರಾತ್ರಿ ಊಟಕ್ಕೆ ಆರ್ಡರ್ ಮಾಡಲು ಪ್ರಯತ್ನಿಸುವಾಗ ಸತತ ಸೇವಾ ವೈಫಲ್ಯಗಳನ್ನು ಎದುರಿಸಿದ ನಂತರ ಮಹಿಳೆಯೊಬ್ಬರು ಆಹಾರ ವಿತರಣಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಘಟನೆ ನಡೆದಿತ್ತು. ಅಲ್ಲದೆ ಇದನ್ನು ತಲೆನೋವು ಎಂದು ಕರೆದಿದ್ದರು.

ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಎಐ, ಟ್ರ್ಯಾಕಿಂಗ್ ಮತ್ತು ಚಾಟ್ ಬೆಂಬಲದ ಉಪಸ್ಥಿತಿಯ ಹೊರತಾಗಿಯೂ, ಇಂದಿನ ಅಪ್ಲಿಕೇಶನ್-ಚಾಲಿತ ಜಗತ್ತಿನಲ್ಲಿ ಗ್ರಾಹಕರ ಅನುಭವ ಮತ್ತು ಸೇವಾ ಹೊಣೆಗಾರಿಕೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಈ ಪೋಸ್ಟ್ ತ್ವರಿತವಾಗಿ ಜೊಮ್ಯಾಟೊದ ಗಮನ ಸೆಳೆಯಿತು. ಕೂಡಲೇ ಮಹಿಳೆಯ ಬಳಿ ಕಂಪನಿಯು ತಮ್ಮ ಸೇವೆಗಾಗಿ ಕ್ಷಮೆಯಾಚಿಸಿತು. ಅನುಭವದ ಬಗ್ಗೆ ಕೇಳಿ ನಿರಾಶೆಗೊಂಡಿದ್ದೇವೆ ಎಂದು ಹೇಳಿತು. ಹೆಚ್ಚಿನ ತನಿಖೆ ನಡೆಸಲು ಸಂಪರ್ಕ ವಿವರಗಳನ್ನು ಹಂಚಿಕೊಳ್ಳುವಂತೆ ಕಂಪನಿಯು ಅವರನ್ನು ವಿನಂತಿಸಿತ್ತು.

ಇದನ್ನೂ ಓದಿ: Viral Video: ಮರಾಠಿ ಮಾತನಾಡು....ಇಲ್ಲದಿದ್ದರೆ ಎತ್ತಿ ಹೊರಗೆ ಎಸೆಯುತ್ತೇನೆ... ರೈಲಿನಲ್ಲಿ ಮಹಿಳೆಗೆ ಬೆದರಿಕೆ