ಅಗರ್ತಲ, ಮೇ 25: 9ನೇ ತರಗತಿಯ ಬಾಲಕನೊಬ್ಬ ತನ್ನ ನೆರೆಮನೆಯ 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ತ್ರಿಪುರಾದ (Tripura) ಖೋವಾಯ್ ಜಿಲ್ಲೆಯಲ್ಲಿ ನಡೆದಿದೆ (Crime News). ಸದ್ಯ ಆರೋಪಿ ಬಾಲಕನನ್ನು ಬಂಧಿಸಲಾಗಿದೆ. ಹೂವುಗಳನ್ನು ತೋರಿಸುವುದಾಗಿ ಆಮಿಷವೊಡ್ಡಿ ಬಾಲಕ ಈ ಕೃತ್ಯ ಎಸಗಿದ್ದಾನೆ. ಬಾಲಕಿ ತನ್ನ ಅಕ್ಕನೊಂದಿಗೆ ಮನೆಯಲ್ಲಿದ್ದಾಗ ಈ ಘಟನೆ ನಡೆದಿದ್ದು, ಈ ವೇಳೆ ಆಕೆಯ ಪೋಷಕರು ಹೊಲಕ್ಕೆ ಹೋಗಿದ್ದರು.
ದೂರಿನ ಪ್ರಕಾರ, ಆರೋಪಿಯು ಬಾಲಕಿಯನ್ನು ಹೂವುಗಳನ್ನು ತೋರಿಸುವ ನೆಪದಲ್ಲಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಆಕೆಯ ಪೋಷಕರು ಹಿಂತಿರುಗಿದಾಗ ಖಾಸಗಿ ಭಾಗಗಳಲ್ಲಿ ನೋವು ಇದೆ ಎಂದು ಹೇಳಿದ್ದಾಳೆ. ಆಕೆಯ ತಾಯಿಗೆ ಪರೀಕ್ಷಿಸಿದಾಗ ಬಾಲಕಿಯ ದೇಹ ತುಂಬಾ ಗಾಯಗಳು ಕಂಡುಬಂದಿವೆ. ನಂತರ ಈ ವಿಚಾರವನ್ನು ತನ್ನ ಪತಿಗೆ ಬಾಲಕಿಯ ತಾಯಿ ತಿಳಿಸಿದ್ದಾರೆ. ಮರುದಿನ ಆರೋಪಿಯ ಕುಟುಂಬಕ್ಕೂ ಘಟನೆ ವಿಚಾರ ಗೊತ್ತಾಯಿತು. ʼʼಅವರು ತಮ್ಮ ಮಗನನ್ನು ಕ್ಷಮಿಸುವಂತೆ ನಮ್ಮ ಬಳಿ ಬೇಡಿಕೊಂಡರುʼʼ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಕಾಲೇಜು ಯುವತಿ ಮೇಲೆ ಅತ್ಯಾಚಾರ ಆರೋಪ
ಘಟನೆ ನಡೆದ ಒಂದು ದಿನದ ನಂತರ, ಸ್ಥಳೀಯರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದರು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಕ್ಸೋ ಕಾಯ್ದೆಯ ನಿಬಂಧನೆಗಳ ಪ್ರಕಾರ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಮೌಲ್ವಿಗೆ ಜೀವಾವಧಿ ಶಿಕ್ಷೆ
ಮಸೀದಿ ಆವರಣದೊಳಗೆ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಸೀದಿಯ ಧರ್ಮಗುರುವಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಹಮೀರ್‌ಪುರದ ವಿಶೇಷ ಪೋಕ್ಸೋ ನ್ಯಾಯಾಲಯವು ಈ ಆದೇಶ ನೀಡಿದೆ. ಜತೆಗೆ ಅಪರಾಧಿ ಮುಂತಜಿರ್ ಆಲಂಗೆ 26,000 ರುಪಾಯಿ ದಂಡ ವಿಧಿಸಲಾಗಿದೆ.
2023ರ ನವೆಂಬರ್ 29ರ ಬೆಳಗ್ಗೆ ಕುರಾರಾ ಪೊಲೀಸ್ ವ್ಯಾಪ್ತಿಯ ಹಳ್ಳಿಯಲ್ಲಿ ಮೌಲಿ ಬಾಲಕಿಗೆ ಕಿರುಕುಳ ನೀಡಿದ್ದ. 11 ವರ್ಷದ ಬಾಲಕಿ ಮತ್ತು ಆಕೆಯ 10 ವರ್ಷದ ಸಹೋದರ ಆಲಂ ದಿನನಿತ್ಯದ ಪಾಠಕ್ಕಾಗಿ ಗ್ರಾಮದ ಮಸೀದಿಗೆ ಹೋಗಿದ್ದಾಗ ಮೌಲ್ವಿ ರಕ್ಕಸನಂತೆ ಬಾಲಕಿ ಮೇಲೆ ಎರಗಿದ್ದಾನೆ ಎಂದು ದೂರಲಾಗಿದೆ.