ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming Case: ಸರ್ಕಾರಿ ಆಸ್ಪತ್ರೆ ವೈದ್ಯೆ ಆತ್ಮಹತ್ಯೆ ಕೇಸ್; ಡೆತ್‌ನೋಟ್‌ನಲ್ಲಿದೆ ಸಂಸದನ ಹೆಸರು!

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮಹಿಳಾ ಸರ್ಕಾರಿ ವೈದ್ಯೆಯ ಆತ್ಮಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದನೆ ಅವರನ್ನು ಶನಿವಾರ ಸಂಜೆ ಬಂಧಿಸಲಾಗಿದೆ. ಮುಂಜಾನೆ, ಫಾಲ್ಟನ್ ಪೊಲೀಸರ ತಂಡವು ಪುಣೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್ ಎಂಬಾತನ್ನನು ಬಂಧಿಸಿತು.

ಮುಂಬೈ: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮಹಿಳಾ ಸರ್ಕಾರಿ ವೈದ್ಯೆಯ ಆತ್ಮಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Self Harming Case) ಗೋಪಾಲ್ ಬದನೆ ಅವರನ್ನು ಶನಿವಾರ ಸಂಜೆ ಬಂಧಿಸಲಾಗಿದೆ. ಮುಂಜಾನೆ, ಫಾಲ್ಟನ್ ಪೊಲೀಸರ ತಂಡವು ಪುಣೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್ ಎಂಬಾತನ್ನನು ಬಂಧಿಸಿತು. ವೈದ್ಯೆ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಈ ಇಬ್ಬರ ಹೆಸರನ್ನು ಉಲ್ಲೇಖಿಸಿದ್ದರು. ಪಿಎಸ್ಐ ಬದನೆ ಫಾಲ್ಟನ್ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ಶರಣಾದರು ಎಂದು ಸತಾರಾ ಎಸ್ಪಿ ತುಷಾರ್ ದೋಷಿ ತಿಳಿಸಿದ್ದಾರೆ.

ಸಂತ್ರಸ್ತೆಗೆ ಮಾನಸಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬಂಕರ್‌ನನ್ನು ಸತಾರಾ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಆತನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತು. ವೈದ್ಯೆ ಆತ್ಮಹತ್ಯೆಗೂ ಮುನ್ನ ಡೆತ್‌ ನೋಟ್‌ ಬರೆದಿದ್ದಳು. ಅದರಲ್ಲಿ, ಗೋಪಾಲ್‌ ಬಡ್ನೆ ನನ್ನ ಮೇಲೆ ಕಳೆದ ಐದು ತಿಂಗಳಲ್ಲಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಪೊಲೀಸ್‌ ಅಧಿಕಾರಿ ನನಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದು, ಈ ಕಿರುಕುಳವನ್ನು ಸಹಿಸಲಾರದೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ" ಎಂದು ಮೃತ ಸರ್ಕಾರಿ ವೈದ್ಯೆ ತಮ್ಮ ಎಡ ಅಂಗೈನಲ್ಲಿ ಬರೆದ ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿದ್ದರು.

ಇದೇ ವೇಳೆ ಆತ್ಮಹತ್ಯೆಗೆ ಶರಣಾದ ವೈದ್ಯೆಯ ಅಂಗೈ ಮೇಲೆ ಬರೆದ ಡೆತ್‌ ನೋಟ್‌ನಲ್ಲಿ ಎಎಸ್‌ಐ ಲಾಡಪುತ್ರೆ ಅವರ ಹೆಸರನ್ನೂ ಉಲ್ಲೇಖಿಸಲಾಗಿದ್ದು, ಸತತ ಮನವಿಯ ಹೊರತಾಗಿಯೂ ಇವರಿಬ್ಬರೂ ವೈದ್ಯೆಗೆ ನಿರಂತರ ಕಿರಿಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಮೃತ ವೈದ್ಯೆಯು ತಮ್ಮ ಎಡ ಅಂಗೈಯಲ್ಲಿ ಬರೆದ ಡೆತ್‌ ನೋಟ್‌ನ್ನು, ಫಾಲ್ಟನ್ ಉಪ-ವಿಭಾಗೀಯ ಕಚೇರಿಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಅವರನ್ನು ಉದ್ಧೇಶಿಸಿ ಬರೆದಿದ್ದರು.

ಈ ಸುದ್ದಿಯನ್ನೂ ಓದಿ: Munawar Faruqui: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಕೊಲೆಗೆ ಸಂಚು; ಇಬ್ಬರು ಅರೆಸ್ಟ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮೃತ ವೈದ್ಯೆಯ ಸಹೋದರ ಸಂಬಂಧಿ, "ತಪ್ಪು ಮರಣೋತ್ತರ ವರದಿಗಳನ್ನು ನೀಡುವಂತೆ ಆಕೆಯ ಮೇಲೆ ಪೊಲೀಸರು ಮತ್ತು ರಾಜಕೀಯ ಒತ್ತಡವಿತ್ತು. ಆಕೆ ಅದರ ಬಗ್ಗೆ ದೂರು ನೀಡಲು ಪ್ರಯತ್ನಿಸಿದ್ದಳು. ನನ್ನ ತಂಗಿಗೆ ನ್ಯಾಯ ಸಿಗಬೇಕು" ಎಂದು ಒತ್ತಾಯಿಸಿದ್ದಾರೆ.