ರಾಂಚಿ, ಮಾ. 18: ದಂತ ಚಿಕಿತ್ಸಾಲಯವೊಂದರಲ್ಲಿ ಹಲ್ಲು ಕಿತ್ತ ನಂತರ ಮಹಿಳೆಯೊಬ್ಬರು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಜಾರ್ಖಂಡ್‌ನ (Jharkhand) ಪಲಮು ಜಿಲ್ಲೆಯ ಖಾಸಗಿ ಚಿಕಿತ್ಸಾಲಯದಲ್ಲಿ ನಡೆದಿದೆ. ರೋಗಿಯ ಸಾವಿನ ನಂತರ ಕ್ಲಿನಿಕ್‌ನ ವೈದ್ಯ ಪರಾರಿಯಾಗಿದ್ದಾನೆ (crime news).
ಮೃತರನ್ನು ವಿಜಯಂತಿ ದೇವಿ ಎಂದು ಗುರುತಿಸಲಾಗಿದ್ದು, ಅವರು ಬಿಹಾರದ ಔರಂಗಾಬಾದ್ ಜಿಲ್ಲೆಯ ಕಾಸಿಂಪುರ ನಿವಾಸಿ. ಹರಿಹರಗಂಜ್ ಪಟ್ಟಣದ ಖಾಸಗಿ ಚಿಕಿತ್ಸಾಲಯದಲ್ಲಿ ಹಲ್ಲು ಹೊರತೆಗೆದ ನಂತರ ಅವರ ಆರೋಗ್ಯ ಹದಗೆಟ್ಟಿದೆ. ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ವೈದ್ಯರಿಗೆ ಅವರ ಪ್ರಾಣ ಕಾಪಾಡಲು ಸಾಧ್ಯವಾಗಲಿಲ್ಲ.
ಮಹಿಳೆಯ ಸಾವಿನ ನಂತರ, ಕ್ಲಿನಿಕ್‌ನ ಮಾಲಕ ಡಾ. ಅಶ್ರಫ್ ಅಲಿ ಪರಾರಿಯಾಗಿದ್ದಾನೆ. ಹರಿಹರಗಂಜ್ ಪೊಲೀಸರು ಡಾ. ಅಲಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಮೃತರ ಕುಟುಂಬ ಸದಸ್ಯರು, ವೈದ್ಯರ ನಿರ್ಲಕ್ಷ್ಯದ ಆರೋಪ ಹೊರಿಸಿ ಲಿಖಿತ ದೂರು ದಾಖಲಿಸಿದ ನಂತರ, ಸ್ಥಳೀಯ ಅಧಿಕಾರಿಗಳು ಖಾಸಗಿ ಚಿಕಿತ್ಸಾಲಯಕ್ಕೆ ಬೀಗ ಜಡಿದಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ.
ರೀಲ್ಸ್‌ಗಾಗಿ ಜೀವಂತ ತಂದೆಯನ್ನೇ ಚೀಲಕ್ಕೆ ತುಂಬಿ ಪಾರ್ಸೆಲ್ ಮಾಡಹೊರಟ ಫ್ಯಾಮಿಲಿ!
ಮಹಿಳೆಯ ಸಾವಿನ ಹಿಂದಿನ ಕಾರಣ ಸ್ಪಷ್ಟವಾಗಿಲ್ಲವಾದರೂ, ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವುಗಳು ಭಾರತದಲ್ಲಿ ಹೊಸದೇನಲ್ಲ. 2025ರ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಯೂಟ್ಯೂಬ್ ವಿಡಿಯೊ ನೋಡಿದ ನಕಲಿ ವೈದ್ಯರೊಬ್ಬ ಮಹಿಳೆಯ ಮೂತ್ರಪಿಂಡದ ಕಲ್ಲಿನ ಶಸ್ತ್ರಚಿಕಿತ್ಸೆ ಮಾಡಿದ್ದ. ಪರಿಣಾಮ ಮಹಿಳೆ ಸಾವಿಗೀಡಾಗಿದ್ದರು.
ಕುಡಿದ ಮತ್ತಿನಲ್ಲಿದ್ದ ವೈದ್ಯರು ಆಕೆಯ ಮೂತ್ರಪಿಂಡದಿಂದ ಕಲ್ಲುಗಳನ್ನು ತೆಗೆದುಹಾಕಲು ವಿಫಲರಾದರು. ಬದಲಾಗಿ ಆಕೆಯ ಹೊಟ್ಟೆ, ಸಣ್ಣ ಕರುಳು ಮತ್ತು ಅನ್ನನಾಳದಲ್ಲಿನ ಬಹು ನರಗಳನ್ನು ಕತ್ತರಿಸಿದರು. ಇದರ ಪರಿಣಾಮವಾಗಿ ಮಹಿಳೆಯ ಸಾವು ಸಂಭವಿಸಿತು. ನಕಲಿ ವೈದ್ಯ ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ನವವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವು
ನವವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಬಿಹಾರದ ಮೋತಿಹಾರಿಯಲ್ಲಿ ನಡೆದಿದೆ. ಘಟನೆಯ ಬಗ್ಗೆ ತಿಳಿದ ಕೂಡಲೇ ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದು, ನೂರಾರು ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ಪಕಾಡಿಯಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ ಪಂಚಾಯತ್‌ನ ವಾರ್ಡ್ ಸಂಖ್ಯೆ 1 ರಲ್ಲಿರುವ ಫುಲ್ವಾರ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಪತಿಯನ್ನು ಬಂಧಿಸಿ ಪತ್ನಿಯನ್ನು ಮಂಚಕ್ಕೆ ಕರೆದ ಕೇಸ್: ಇನ್‌ಸ್ಪೆಕ್ಟರ್ ಸಸ್ಪೆಂಡ್
ಮೃತಳ ಕುಟುಂಬವು ಸುಮನ್ ಅವರ ಪತಿ ಮತ್ತು ಅತ್ತೆ ಮಾವಂದಿರ ಮೇಲೆ ಕೊಲೆ ಆರೋಪ ಹೊರಿಸಿತು. ಸುಮನ್ ಅವರ ಸಾವು ಸಹಜವಲ್ಲ, ಕೊಲೆ ಎಂದು ಆರೋಪಿಸಿ ಸ್ಥಳದಲ್ಲಿ ಭಾರಿ ಪ್ರತಿಭಟನೆ ನಡೆಸಿದರು.
ಮೃತಳ ತಾಯಿ ಕಮಲ ದೇವಿ, ತನ್ನ ಮಗಳನ್ನು ವರದಕ್ಷಿಣೆಗಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸುಮನ್‌ಳ ಅತ್ತೆ-ಮಾವ ನಿರಂತರವಾಗಿ ತನ್ನಿಂದ ಹಣ ಮತ್ತು ಇತರ ವಸ್ತುಗಳನ್ನು ಕೇಳುತ್ತಿದ್ದರು ಮತ್ತು ಈ ಕಾರಣಕ್ಕಾಗಿ ಅವಳನ್ನು ಆಗಾಗ ಹೊಡೆಯುತ್ತಿದ್ದರು ಎಂದು ಹೇಳಿದ್ದಾರೆ.