ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಷಾರಾಮಿ ಕಾರಲ್ಲಿ ಮೋಜು- ಮಸ್ತಿ; ಅಡ್ಡಾದಿಡ್ಡಿ ವಾಹನ ಓಡಿಸಿ ಡೆಲವೆರಿ ಬಾಯ್​​ ಪ್ರಾಣ ತೆಗೆದ ವಿದ್ಯಾರ್ಥಿ

Car Accident: ವಿದ್ಯಾರ್ಥಿಯೋರ್ವ ತನ್ನ ಮೋಜು ಮಸ್ತಿಗೆ ಐಶಾರಾಮಿ ಕಾರು ಹತ್ತಿಸಿ ಬಡ ಯುವಕನನ್ನು ಕೊಂದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಐಷಾರಾಮಿ ಕಾರನ್ನ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಅಡ್ಡಾದಿಡ್ಡಿ ವಾಹನ ಓಡಿಸಿ ಡೆಲವೆರಿ ಬಾಯ್​​ ಪ್ರಾಣ ತೆಗೆದ ವಿದ್ಯಾರ್ಥಿ

ಸಂಗ್ರಹ ಚಿತ್ರ -

Vishakha Bhat
Vishakha Bhat Dec 28, 2025 9:21 AM

ಬೆಂಗಳೂರು: ವಿದ್ಯಾರ್ಥಿಯೋರ್ವ ತನ್ನ ಮೋಜು ಮಸ್ತಿಗೆ ಐಶಾರಾಮಿ ಕಾರು ಹತ್ತಿಸಿ ಬಡ ಯುವಕನನ್ನು ಕೊಂದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಐಷಾರಾಮಿ ಕಾರನ್ನ ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆದಿದ್ದು, ಈ ಪರಿಣಾಮ ಪಾದಚಾರಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್​​ನ 27ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಪಾದಚಾರಿ ಸಂತೋಷ್ ದೊಡ್ಡಗೌಡರ್ (26) ಮೃತ ದುರ್ದೈವಿಯಾಗಿದ್ದಾರೆ.ಇದೇ ಡಿಸೆಂಬರ್​ 22 ರಂದು ರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಪಾದಚಾರಿ ಸಂತೋಷ್ ದೊಡ್ಡಗೌಡರ್ ಬೆಳಗಾವಿಯ ಬೈಲಹೊಂಗಲ ಮೂಲದವರು ಎಂದು ತಿಳಿದು ಬಂದಿದೆ. ಸಂತೋಷ್ ಬೆಂಗಳೂರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿದ ಬಳಿಕ ರಾತ್ರಿ ಫುಟ್ ಪಾತ್​ನಲ್ಲಿ ಊಟ ಮಾಡಿ ನಡೆದುಕೊಂಡು ಹೋಗ್ತಿದ್ದ ಸಂತೋಪ್​ಗೆ ಕಾರು ಡಿಕ್ಕಿಯಾಗಿದೆ. ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ಅಬ್ದುಲ್ ರೆಹಮಾನ್, ನಡೆದುಕೊಂಡು ಹೋಗ್ತಿದ್ದ ಸಂತೋಷ್​ಗೆ ಮೊದಲು ಡಿಕ್ಕಿ ಹೊಡೆದಿದ್ದಾನೆ.

ಸಂತೋಷ್‌ಗೆ ಡಿಕ್ಕಿ ಹೊಡೆದ ಬಳಿಕ ವೇಗದಲ್ಲಿದ್ದ ಕಾರು ಇತರ ವಾಹನಗಳಿಗೂ ಡಿಕ್ಕಿಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಪೊಲೀಸರು ಕಾರು ಚಾಲಕನನ್ನ ಬಂಧಿಸಿ ವಿಚಾರಣೆ ನಡೆಸಿದ್ದು, ಜೈಲಿಗೆ ಕಳುಹಿಸಿದೆ. ಮದ್ಯ ಸೇವನೆ ಹಿನ್ನಲೆ ರಕ್ತ ಮಾದರಿ ಪರೀಕ್ಷೆಗೆ ಕೂಡ ನಡೆಸಲಾಗಿದೆ.

ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ-ಇಬ್ಬರು ಸ್ಥಳದಲ್ಲೇ ಸಾವು

ಪ್ರತ್ಯೇಕ ಘಟನೆಯಲ್ಲಿ ಕೆಆರ್ ಪೇಟೆ ತಾಲೂಕಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಹಾಕಲಾಗಿದ್ದ ರಾಗಿ ಒಕ್ಕಣೆ ಮೇಲೆ ಸಾಗಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿ ಇದ್ದ ಇಬ್ಬರಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೆಆರ್ ಪೇಟೆ ತಾಲೂಕಿನ ಅಶೋಕನಗರದಲ್ಲಿ ಈ ಅಪಘಾತ ಸಂಭವಿಸಿದೆ. ಮೃತ ಯುವಕನನ್ನು ಪ್ರಜ್ವಲ್ (19) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 26 ವರ್ಷದ ಕಾವ್ಯ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ಕೆಆರ್ ಪೇಟೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.