ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ಬಾಂಬ್ ಸ್ಫೋಟ: ಮತ್ತೆ ನಾಲ್ವರು ಪ್ರಮುಖರ ಬಂಧನ

ದೆಹಲಿಯ ಕೆಂಪು ಕೋಟೆ ಬಳಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಬಂಧಿಸಿದೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ ಆರಕ್ಕೆ ಏರಿದೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಕೆಂಪುಕೋಟೆ (Delhi's Red Fort Metro Station) ಬಳಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ (Delhi bomb blast ) ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಪ್ರಮುಖ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ (Jammu and kashmir) ಶ್ರೀನಗರದಲ್ಲಿ (srinagar) ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಬಂಧಿಸಿದೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ ಆರಕ್ಕೆ ಏರಿದೆ. ಗುರುವಾರ ಬಂಧಿಸಲಾಗಿರುವ ನಾಲ್ವರು ಹಲವಾರು ಅಮಾಯಕರ ಸಾವಿಗೆ ಕಾರಣವಾದ ದೆಹಲಿಯ ಭಯೋತ್ಪಾದಕ ದಾಳಿಯಲ್ಲಿ (delhi terror attack) ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ತಿಳಿಸಿದೆ.

ದೆಹಲಿಯ ಕೆಂಪು ಕೋಟೆಯ ಹೊರಗೆ ನವೆಂಬರ್ 10 ರಂದು ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ನೀಡಿದ ಪ್ರೊಡಕ್ಷನ್ ಆದೇಶಗಳನ್ನು ಅನುಸರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದೆ.

ಇದನ್ನೂ ಓದಿ: ದೆಹಲಿ ಸ್ಫೋಟ: ಉಮರ್ ಭೇಟಿಯಾಗಿದ್ದ ಮೌಲಾನಾ, ಶಿಕ್ಷಕನ ಬಂಧನ

ಬಂಧಿತರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನೈ, ಅನಂತನಾಗ್ ನ ಡಾ. ಅದೀಲ್ ಅಹ್ಮದ್ ರಾಥರ್, ಶೋಪಿಯಾನ್ ದ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಮತ್ತು ಉತ್ತರ ಪ್ರದೇಶದ ಲಕ್ನೋ ದ ಡಾ. ಶಾಹೀನ್ ಸಯೀದ್ ಎಂದು ಗುರುತಿಸಲಾಗಿದೆ.

ಈ ನಾಲ್ವರು ದೆಹಲಿ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇತರ ಇಬ್ಬರು ಶಂಕಿತರನ್ನು ಬಂಧಿಸಿದ ಬಳಿಕ ಇವರನ್ನು ಬಂಧಿಸಲಾಗಿದೆ.

ಸ್ಫೋಟಕ್ಕೆ ಬಳಸಲಾದ ಕಾರನ್ನು ನೋಂದಾಯಿಸಿಕೊಂಡಿದ್ದ ಅಮೀರ್ ರಶೀದ್ ಅಲಿ ಹಾಗೂ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನಿಗೆ ತಾಂತ್ರಿಕ ನೆರವು ನೀಡಿದ ಡ್ಯಾನಿಶ್ ಎಂದು ಕರೆಯಲ್ಪಡುವ ಜಾಸಿರ್ ಬಿಲಾಲ್ ವಾನಿ ಎಂಬವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ. ಇವರ ಕಸ್ಟಡಿಯನ್ನು ಪಡೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ವಶದಲ್ಲಿರುವವರ ಸಂಖ್ಯೆ ಆರಕ್ಕೆ ಏರಿದೆ.

ಇದನ್ನೂ ಓದಿ: Viral News: ಗಾಯಗೊಂಡ ಮಗುವಿಗೆ ಫೆವಿಕ್ವಿಕ್ ಬಳಸಿ ಚಿಕಿತ್ಸೆ: ವೈದ್ಯರ ವಿರುದ್ಧ ದೂರು ದಾಖಲು

ಕೆಂಪುಕೋಟೆಯ ಬಳಿ ನವೆಂಬರ್ 10 ರಂದು ನಡೆದ ಕಾರು ಸ್ಪೋಟಕ್ಕೆ ಬಳಸಲಾದ ಐ20 ಕಾರನ್ನು ಚಾಲನೆ ಮಾಡುತ್ತಿದ್ದ ಡಾ. ಉಮರ್-ಉನ್-ನಬಿ ಅಲಿಯ ಹೆಸರಿನಲ್ಲಿ ವಾಹನವನ್ನು ಖರೀದಿ ಮಾಡಲಾಗಿತ್ತು. ಉಮರ್ ಗೂ ಮೊದಲು ವಾನಿಯನ್ನು ಉಮರ್ ಆತ್ಮಹತ್ಯಾ ಬಾಂಬರ್ ಆಗಲು ಮನವೊಲಿಸಲು ಪ್ರಯತ್ನಿಸಿದ್ದಾನೆ. ಆದರೆ ವಾನಿ ಇದಕ್ಕೆ ನಿರಾಕರಿಸಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಭೂಗತ ಬೆಂಬಲಿಗನಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ ನಾಲ್ವರನ್ನು ಬಂಧಿಸುವ ಮೊದಲು ದೆಹಲಿ ಸ್ಫೋಟದ ಪ್ರಮುಖ ಆರೋಪಿ ಉಮರ್ ಸ್ಪೋಟಕ್ಕೂ ಮೊದಲು ಭೇಟಿಯಾಗಿದ್ದ ಹರ್ಯಾಣದ ಉಮರ್ ಸೊಹ್ನಾದ ರಾಯ್ಪುರ ಗ್ರಾಮದ ಮಸೀದಿಯ ಮೌಲಾನಾ ತಯ್ಯಬ್ ಹುಸೇನ್ ಮತ್ತು ಉರ್ದು ಶಿಕ್ಷಕನನ್ನು ಫರೀದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು.

ವಿದ್ಯಾ ಇರ್ವತ್ತೂರು

View all posts by this author