ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಫ್ಲೈಓವರ್‌ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಯ್ತು ಮೂವರ ಮೃತದೇಹ; ತನಿಖೆ ಚುರುಕು

ನವದೆಹಲಿಯ ಪೀರಗಢಿ ಫ್ಲೈಓವರ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫ್ಲೈಓವರ್‌ನಲ್ಲಿ ಕಾರನ್ನು ನಿಲ್ಲಿಸಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕಾರಿನ ಡೋರ್‌ ಓಪನ್‌ ಮಾಡಿದಾಗ ಮೂರು ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ರಣಧೀರ್ ಸಿಂಗ್ (60 ವರ್ಷ), ಲಕ್ಷ್ಮಿ ಸಿಂಗ್ (40 ವರ್ಷ) ಮತ್ತು ಶಿವ ನಾರಾಯಣ್ (46 ವರ್ಷ) ಎಂದು ಹೇಳಲಾಗಿದೆ.

ಸಂಗ್ರಹ ಚಿತ್ರ

ದೆಹಲಿ: ನವದೆಹಲಿಯ ಪೀರಗಢಿ ಫ್ಲೈಓವರ್‌ನಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಬ್ಬ ಮಹಿಳೆ ಸೇರಿದಂತೆ ಮೂವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ಆ ಪ್ರದೇಶವನ್ನು ಸುತ್ತುವರೆದಿದ್ದು, ವಿಧಿವಿಜ್ಞಾನ ತಂಡಕ್ಕೆ ಮಾಹಿತಿ ನೀಡಲಾಗಿದೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆಯಂತೆ ಕಂಡುಬರುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಸಾವಿಗೆ ಕಾರಣವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ಫ್ಲೈಓವರ್‌ನಲ್ಲಿ ಕಾರನ್ನು ನಿಲ್ಲಿಸಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕಾರಿನ ಡೋರ್‌ ಓಪನ್‌ ಮಾಡಿದಾಗ ಮೂರು ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ರಣಧೀರ್ ಸಿಂಗ್ (60 ವರ್ಷ), ಲಕ್ಷ್ಮಿ ಸಿಂಗ್ (40 ವರ್ಷ) ಮತ್ತು ಶಿವ ನಾರಾಯಣ್ (46 ವರ್ಷ) ಎಂದು ಹೇಳಲಾಗಿದ್ದು, ಮೃತದೇಹವನ್ನು ಸದ್ಯ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಬಿಹಾರದ ನಳಂದ ಜಿಲ್ಲೆಯ ಧರ್ಮಶಾಲೆಯೊಂದರಲ್ಲಿ ಕರ್ನಾಟಕದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಪ್ರವಾಸಿಗರು ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಭ್ಯವಿರುವ ದಾಖಲೆಗಳ ಪ್ರಕಾರ ಸಾವನ್ನಪ್ಪಿದವರು ಒಂದು ಕುಟುಂಬದ ಸದಸ್ಯರು. ಒಬ್ಬ ವೃದ್ಧ ಮಹಿಳೆ, ಆಕೆಯ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಬೌದ್ಧರು ಮತ್ತು ಜೈನರ ಪ್ರಮುಖ ಯಾತ್ರಾ ಸ್ಥಳವಾದ ರಾಜಗೀರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಜಿ.ಆರ್. ನಾಗ ಪ್ರಸಾದ್ ಹೆಸರಿನಲ್ಲಿ ರಿಜಿಸ್ಟರ್ ಆಗಿದ್ದ ಅವರ ಕೋಣೆಯಿಂದ ದುರ್ವಾಸನೆ ಬರುತ್ತಿದ್ದಂತೆ, ಪೊಲೀಸರು ಬಾಗಿಲು ಒಡೆದು ನೋಡಿದಾಗ ನಾಲ್ವರು ಪ್ರವಾಸಿಗರು ಮೃತಪಟ್ಟಿರುವುದು ಕಂಡುಬಂದಿದೆ.

ಮೃತರನ್ನು ಜಿ.ಆರ್. ಸುಮಂಗಲ (78), ಅವರ ಪುತ್ರಿಯರಾದ ಶಿಲ್ಪಾ ಜಿ.ಆರ್. (48) ಮತ್ತು ಶ್ರುತಾ ಜಿ.ಬಿ. (43) ಮತ್ತು ಮಗ ಜಿ.ಆರ್. ನಾಗ ಪ್ರಸಾದ್ (50) ಎಂದು ಗುರುತಿಸಲಾಗಿದೆ, ಇವರೆಲ್ಲರೂ ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ನಿವಾಸಿಗಳು. ದಾಖಲೆಗಳ ಪ್ರಕಾರ ಜಿ.ಆರ್. ಸುಮಂಗಲ ಅವರು ರತ್ನಬಾಲ ರಾಜು ಅವರ ಪತ್ನಿ. ಆತ್ಮಹತ್ಯೆ ಮಾಡಿಕೊಂಡ ನಾಗಪ್ರಸಾದ್‌ ಸೋದರಿಯ 14 ವರ್ಷದ ಮಗ ಅಮೋಘ ಕೀರ್ತಿ ಆನ್ ಲೈನ್‌ ಗೇಮ್‌ಗೆ ಅಡಿಕ್ಟ್ ಆಗಿದ್ದನಂತೆ. ಫ್ರೀ ಫೈರ್ ಗೇಮ್ ನಿಂದ ಸಾಕಷ್ಟು ಹಣವನ್ನು ಕಳೆದಿದ್ದ. ಇದರಿಂದ ನೊಂದು, ಸೋದರಿಯ ಮಗ ಅಮೋಘ ಕೀರ್ತಿಯನ್ನು ಸೋದರ ಮಾವ ನಾಗಪ್ರಸಾದ್ ಹತ್ಯೆ ಮಾಡಿದ್ದಾರೆ. ಬಳಿಕ ನಾಗಪ್ರಸಾದ್ ಜೈಲು ಪಾಲಾಗಿದ್ದರು.

ಮಕ್ಕಳಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ? ಮೂವರು ಸಹೋದರಿಯರ ಆತ್ಮಹತ್ಯೆ ಕುರಿತು ತಂದೆ ಹೇಳಿದ್ದೇನು?

ನಾಗಪ್ರಸಾದ್ ಸೋದರಿಯರಾದ ಶಿಲ್ಪಾ, ಶುತ್ರಾ ಅವರೇ ನಾಗಪ್ರಸಾದ್ ರನ್ನು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಕರೆ ತಂದಿದ್ದರು. ಬಳಿಕ ಜನವರಿ 30 ರಂದು ನೇಪಾಳ ಪ್ರವಾಸಕ್ಕೆಂದು ಹೊರಟವರು ನಳಂದದ ರಾಜಗೀರ್ ಧರ್ಮಶಾಲಾದಲ್ಲಿ ರೂಮು ಪಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಶವ ನೇಣು ಬಿಗಿದ ಸ್ಥಿತಿಯಲ್ಲಿದ್ದರೇ, ಇನ್ನೂ ಮೂವರು ನಿದ್ರೆ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಆರಂಭಿಕ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

Vishakha Bhat Heggar

View all posts by this author