ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಮಯ ಕೇಳಲೆಂದು ಬಸ್ ಬಳಿ ಬಂದಿದ್ದ ಮೂವರು ಮಕ್ಕಳ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ

ದೆಹಲಿಯಲ್ಲಿ ಸೋಮವಾರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಪೊಲೀಸರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದು, ಆ ದಿನ ಸಮಯ ಕೇಳಲೆಂದು ಆಕೆ ಬಸ್ ಹತ್ತಿರ ಹೋಗಿರುವುದಾಗಿ ಹೇಳಿದ್ದಾಳೆ. ಅದರೊಳಗಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಒಳಗೆ ಕರೆದಿದ್ದು, ಬಳಿಕ ಅದರೊಳಗಿದ್ದ ಇಬ್ಬರೊಂದಿಗೆ ಸೇರಿ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಆಕೆ ತಿಳಿಸಿದ್ದಾಳೆ.

ಸಂಗ್ರಹ ಚಿತ್ರ

ನವದೆಹಲಿ: ಮಧ್ಯರಾತ್ರಿ ವೇಳೆ ಸಮಯ ಕೇಳಲೆಂದು ಬಸ್ ಬಳಿ ಹೋಗಿದ್ದಾಗ ತನ್ನನ್ನು ಒಳಗೆ ಎಳೆದು ಹಾಕಿ ಮೂವರು ಸಾಮೂಹಿಕ ಅತ್ಯಾಚಾರ (gangrape case) ಮಾಡಿದ್ದಾರೆ ಎಂದು ದೆಹಲಿ (delhi) ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ದೆಹಲಿಯ (delhi crime news) ಪಿತಾಂಪುರದ ಮೂವರು ಮಕ್ಕಳ ತಾಯಿ, 30 ವರ್ಷದ ಮಹಿಳೆ ಮೇಲೆ ಕಳೆದ ಸೋಮವಾರ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾಳೆ. ಘಟನೆಯ ಕುರಿತು ಪೊಲೀಸರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾಳೆ.

ಸರಸ್ವತಿ ವಿಹಾರ್ ಬಸ್ ನಿಲ್ದಾಣದಲ್ಲಿ ಆ ದಿನ ಆಕೆ ಬಸ್ ನಲ್ಲಿದ್ದವರ ಬಳಿ ಸಮಯ ಕೇಳಲೆಂದು ಹೋಗಿದ್ದಳು. ಆಕೆ ಬಸ್ ಒಳಗೆ ಕಾಲಿಟ್ಟ ಕೆಲವೇ ಕ್ಷಣಗಳಲ್ಲಿ ಬಸ್ ಚಲಿಸಲು ಪ್ರಾರಂಭಿಸಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಬಸ್ ನ ಹಿಂಭಾಗಕ್ಕೆ ತಳ್ಳಿ ಅತ್ಯಾಚಾರ ಮಾಡಿದನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ: 500ರಿಂದ 600 ಅಂಕ ಗ್ಯಾರಂಟಿ ಭರವಸೆ ನೀಡಿದ್ದ ಆರೋಪಿಗಳು

ಸುಲ್ತಾನಪುರಿಯಲ್ಲಿರುವ ತನ್ನ ಸಹೋದರ ಮನೆ ಬದಲಾಯಿಸಿದ್ದರಿಂದ ಆತನಿಗೆ ಸಹಾಯ ಮಾಡಲೆಂದು ಹೋಗಿ ಮರಳಿ ಬರುವಾಗ ತಡವಾಗಿತ್ತು. ಹೀಗಾಗಿ ಹೊರ ವರ್ತುಲ ರಸ್ತೆಯಲ್ಲಿರುವ ಸರಸ್ವತಿ ವಿಹಾರ್ ವರೆಗೆ ಇ-ರಿಕ್ಷಾದಲ್ಲಿ ಹೋಗಿದ್ದಳು. ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಾಸಗಿ ಬಸ್ ನಲ್ಲಿ ವ್ಯಕ್ತಿಯೊಬ್ಬರ ಬಳಿ ಸಮಯ ಎಷ್ಟು ಎಂದು ಕೇಳಿದ್ದಾಳೆ. ಆಗ ಆತ ಒಳಗೆ ಬಂದು ಮಾತನಾಡಲು ಹೇಳಿದ್ದರು. ಆದ್ದರಿಂದ ನಾನು ಬಸ್ ಹತ್ತಿದೆ ಎಂದು ಆಕೆ ತಿಳಿಸಿದ್ದಾಳೆ.

ಮಕ್ಕಳು ನನಗಾಗಿ ಕಾಯುತ್ತಿದ್ದಾರೆ, ನನ್ನನ್ನು ಹೋಗಲು ಬಿಡಿ ಎಂದು ಆಕೆ ಪದೇ ಪದೇ ಕೇಳಿಕೊಂಡರೂ ಅವರು ಬಿಡಲಿಲ್ಲ. ನಿಮ್ಮ ವಿರುದ್ಧ ನಾನು ಯಾರಿಗೂ ಹೇಳುವುದಿಲ್ಲ ಎಂದರು ಕೂಡ ಕೇಳಲಿಲ್ಲ. ಬಸ್ ನಂಗ್ಲೋಯಿ ರೈಲ್ವೆ ನಿಲ್ದಾಣದ ಬಳಿ ತಲುಪಿದಾಗ ವಾಹನ ನಿಂತಿತು. ಅಲ್ಲಿ ಚಾಲಕ ಕೂಡ ತನ್ನ ಮೇಲೆ ಅತ್ಯಾಚಾರ ಮಾಡಿದನು. ನನ್ನನ್ನು ಬಿಡಿ, ಯಾರಿಗೂ ನಾನು ಹೇಳುವುದಿಲ್ಲ ಎಂದು ಹೇಳಿದ ಬಳಿಕ ಅವರು ಬಿಟ್ಟು ಬಿಟ್ಟರು. ಬಳಿಕ ನಾನು ಪೊಲೀಸರಿಗೆ ಕರೆ ಮಾಡಿದೆ ಎಂದು ಹೇಳಿದ್ದಾಳೆ.

ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್​ಪೆಕ್ಟರ್

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಉತ್ತರ ಪ್ರದೇಶ ಮೂಲದ ಉಮೇಶ್ ಕುಮಾರ್ ಮತ್ತು ರಾಮೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪುವಾಗ ಇತರ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಉಮೇಶ್ ಅಲ್ಲೇ ಇದ್ದನು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆಯನ್ನು ತಕ್ಷಣವೇ ವೈದ್ಯಕೀಯ ಪರೀಕ್ಷೆಗಾಗಿ ಪಿತಾಂಪುರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author