ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ: 500ರಿಂದ 600 ಅಂಕ ಗ್ಯಾರಂಟಿ ಭರವಸೆ ನೀಡಿದ್ದ ಆರೋಪಿಗಳು

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ವಾಟ್ಸಾಪ್ ಚಾಟ್‌ ನಿಂದ ಹಲವಾರು ಮಾಹಿತಿಗಳು ಬಹಿರಂಗಗೊಂಡಿವೆ. ಈ ಪ್ರಶ್ನೆ ಪತ್ರಿಕೆಯು ಅಭ್ಯರ್ಥಿಗಳಿಗೆ 500 ರಿಂದ 600 ಅಂಕಗಳ ಗ್ಯಾರಂಟಿ ನೀಡುತ್ತದೆ. ಸೋರಿಕೆಯಾದ ನೀಟ್ ಪ್ರಶ್ನೆ ಪತ್ರಿಕೆಯು ಜಮ್ಮು ಮತ್ತು ಕಾಶ್ಮೀರ, ಬಿಹಾರ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಹಂಚಿಕೆಯಾಗಿದೆ ಎನ್ನಲಾಗಿದೆ.

ನೀಟ್ ಪತ್ರಿಕೆ ಸೋರಿಕೆ: ವಾಟ್ಸಾಪ್ ಚಾಟ್‌ಗಳಿಂದ ಹಲವು ಮಾಹಿತಿ ಬಹಿರಂಗ

ಸಂಗ್ರಹ ಚಿತ್ರ -

ನವದೆಹಲಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ (NEET paper leak) ಸೋರಿಕೆ ಸಂಬಂಧ ಆರೋಪಿಯ ವಾಟ್ಸಾಪ್ ಚಾಟ್‌ಗಳು (WhatsApp chats) ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ಪ್ರಶ್ನೆ ಪತ್ರಿಕೆಯು ಅಭ್ಯರ್ಥಿಗಳಿಗೆ 500 ರಿಂದ 600 ಅಂಕಗಳ ಗ್ಯಾರಂಟಿ ನೀಡುತ್ತದೆ ಎನ್ನುವುದು ವಾಟ್ಸಾಪ್ ಚಾಟ್‌ಗಳಿಂದ ತಿಳಿದು ಬಂದಿದೆ. ಈ ಪ್ರಶ್ನೆ ಪತ್ರಿಕೆಯು ಮಹಾರಾಷ್ಟ್ರದ (Maharastra) ಬಳಿಕ ಹರಿಯಾಣದ ಗುರುಗ್ರಾಮ್, ರಾಜಸ್ಥಾನದ ಜೈಪುರ ಮತ್ತು ಪ್ರಮುಖ ತರಬೇತಿ ಕೇಂದ್ರವಾದ ಸಿಕಾರ್, ಜಮ್ಮು ಮತ್ತು ಕಾಶ್ಮೀರ, ಬಿಹಾರ ಮತ್ತು ಕೇರಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಹಂಚಿಕೆಯಾಗಿದೆ ಎನ್ನಲಾಗಿದೆ.

2026ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಶುಭಮ್ ಖೈರ್ನಾರ್ ನ ವಾಟ್ಸಾಪ್ ಚಾಟ್‌ಗಳಿಂದ ಹಲವಾರು ಮಾಹಿತಿಗಳು ಬಹಿರಂಗವಾಗಿವೆ. ಈ ಪ್ರಶ್ನೆ ಪತ್ರಿಕೆಯು ಅಭ್ಯರ್ಥಿಗಳಿಗೆ 500 ರಿಂದ 600 ಅಂಕಗಳ ಗ್ಯಾರಂಟಿ ನೀಡುತ್ತದೆ.

ರಾಮಾಯಣದಲ್ಲಿ ರಾಮನ ಪಾತ್ರ ಮಾಡುತ್ತಿರುವಾಗಲೇ ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ ರಣಬೀರ್ ಕಪೂರ್: ಸರಯೂ ನದಿ ತೀರದಲ್ಲಿ ಹೊಸ ಹೂಡಿಕೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಮೇ 3ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದುಗೊಳಿಸಿ ಜೂನ್ 21ಕ್ಕೆ ಪರೀಕ್ಷೆಯನ್ನು ಮರು ನಿಗದಿಪಡಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಶುಭಮ್ ಖೈರ್ನಾರ್ ಏಪ್ರಿಲ್ ನಲ್ಲಿ ಪುಣೆಯ ಯಶ್ ಯಾದವ್ ಅವರಿಗೆ ಪ್ರಶ್ನೆಪತ್ರಿಕೆಯ ಪ್ರತಿಯನ್ನು ನೀಡಿದ್ದರು.

ತನಿಖೆಯ ಸಮಯದಲ್ಲಿ ಈ ಎಲ್ಲ ಮಾಹಿತಿಗಳು ಪ್ರಮುಖ ಆರೋಪಿ ಮತ್ತು ಇತರರ ನಡುವೆ ನಡೆದ ವಾಟ್ಸಾಪ್ ಚಾಟ್ ಗಳು ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಪ್ರಶ್ನೆ ಪತ್ರಿಕೆ ಹಂಚಿಕೆ ಒಪ್ಪಂದವನ್ನು ಏಪ್ರಿಲ್ 29 ರೊಳಗೆ ಅಂತಿಮಗೊಳಿಸಲಾಗಿದ್ದು, ನೀಟ್ ಬರೆಯುವ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕಗಳು ಮತ್ತು ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶದ ಭರವಸೆ ನೀಡಲಾಗಿತ್ತು.

ಜೂನ್‌ 21ರಂದು ನೀಟ್‌ ಮರು ಪರೀಕ್ಷೆ; ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ ಎನ್‌ಟಿಎ ಹೊಸ ದಿನಾಂಕ ಪ್ರಕಟ

ನಾಸಿಕ್‌ನ ಇಂದಿರಾನಗರ ಪ್ರದೇಶದ ನಿವಾಸಿಯಾಗಿರುವ 30 ವರ್ಷದ ಶುಭಮ್ ಖೈರ್ನರ್ ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾನೆ. ಈತ ನೀಟ್ ಯುಜಿ ಪ್ರಶ್ನೆ ಪತ್ರಿಕೆಯನ್ನು ಪುಣೆ ಮೂಲದ ಶಂಕಿತನಿಂದ 10 ಲಕ್ಷ ರೂ.ಗೆ ಖರೀದಿಸಿ ಹರಿಯಾಣದ ಖರೀದಿದಾರರಿಗೆ 15 ಲಕ್ಷ ರೂ. ಗೆ ಮಾರಾಟ ಮಾಡಿ 5 ಲಕ್ಷ ರೂ. ಲಾಭ ಗಳಿಸಿದ್ದಾನೆ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಆತ ಬಂಧನಕ್ಕೆ ಒಳಗಾಗಿದ್ದಾನೆ.