ಲೂಧಿಯಾನ: ಪ್ರೀತಿಸಿ ಮದುವೆಯಾಗಿದ್ದ (Love marrage case) ಪತ್ನಿ ಬಳಿ ಕಾರು, ಬೈಕ್ ಗೆ ಬೇಡಿಕೆ (Dowry case) ಇಟ್ಟು ಹಲ್ಲೆ (assault) ನಡೆಸಿರುವ ಘಟನೆ ಪಂಜಾಬ್ನ (Punjab crime) ಲೂಧಿಯಾನದಲ್ಲಿ (Ludhiana) ನಡೆದಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ರಿತೀಶ್ ಶರ್ಮಾ ಎಂಬಾತ ಪತ್ನಿ ಟ್ವಿಂಕಲ್ ಮೇಲೆ ಅಕ್ಟೋಬರ್ 21 ರ ರಾತ್ರಿ ಹಲ್ಲೆ ನಡೆಸಿದ್ದಾನೆ. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೊಬ್ಬೆ ಕೇಳಿ ಓಡಿ ಬಂದ ನೆರೆಹೊರೆಯವರು ಆಕೆಯನ್ನು ರಕ್ಷಿಸಿದರು. ಬಳಿಕ ಟ್ವಿಂಕಲ್ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಾವಳಿಯನ್ನು ಒದಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯ ಬಳಿಕ ಪತಿಗೆ ಮಹೀಂದ್ರಾ ಥಾರ್ ಕಾರು ಮತ್ತು ಬೈಕ್ ನೀಡಬೇಕೆಂದು ಒತ್ತಾಯಿಸಲಾಗುತ್ತಿತ್ತು. ಇದನ್ನು ವಿರೋಧಿಸಿರುವುದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟ್ವಿಂಕಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಅವರು ಸಾಕ್ಷಿಯಾಗಿ ನೀಡಿರುವ ಸಿಸಿಟಿವಿ ದೃಶ್ಯದಲ್ಲಿ ಅಕ್ಟೋಬರ್ 21 ರ ರಾತ್ರಿ, ತಮ್ಮ ಮನೆಯ ಹೊರಗೆ ಪತಿ ರಿತೀಶ್ ಶರ್ಮಾ ಅವರಿಗೆ ಕಪಾಳಮೋಕ್ಷ ಮಾಡಿ, ಕೂದಲನ್ನು ಹಿಡಿದು ಎಳೆಯುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ತೀವ್ರವಾದ ನೋವಿನಿಂದ ಟ್ವಿಂಕಲ್ ಅವರು ಕೂಗಿಕೊಂಡಾಗ ಗಾಬರಿಗೊಂಡ ನೆರೆಹೊರೆಯವರು ಕೂಡಲೇ ತಮ್ಮ ಮನೆಗಳಿಂದ ಹೊರಬಂದು ಆಕೆಯನ್ನು ರಕ್ಷಿಸಿರುವುದು ಕೂಡ ಇದರಲ್ಲಿ ಸೆರೆಯಾಗಿದೆ,
ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ರಿತೀಶ್ ಶರ್ಮಾ ಅವರು ಸಲೂನ್ ನಡೆಸುತ್ತಿದ್ದ ಟ್ವಿಂಕಲ್ ಅವರನ್ನು ಕಳೆದ ವರ್ಷದ ನವೆಂಬರ್ನಲ್ಲಿ ವಿವಾಹವಾದರು. ರಿತೀಶ್ ಶರ್ಮಾ ಅವರಿಗೆ ಇದು ಮೊದಲ ಮದುವೆಯಾಗಿದ್ದರೆ, ಟ್ವಿಂಕಲ್ ಅವರಿಗೆ ಎರಡನೇ ಮದುವೆಯಾಗಿತ್ತು. ಸುಮಾರು ಎರಡು ವರ್ಷಗಳ ಹಿಂದೆ ಟ್ವಿಂಕಲ್ ಅವರ ವಿಚ್ಛೇದನ ಪ್ರಕ್ರಿಯೆಯ ಸಂದರ್ಭದಲ್ಲಿ ಭೇಟಿಯಾಗಿದ್ದ ಇವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.
ಮದುವೆಯಾದ ಮೂರು ತಿಂಗಳ ಅನಂತರ ರಿತೀಶ್ ಶರ್ಮಾ ತನಗೆ ಕಾರು, ಬೈಕ್ ಕೊಡಿಸುವಂತೆ ಟ್ವಿಂಕಲ್ ಅವರನ್ನು ಪೀಡಿಸಲು ಪ್ರಾರಂಭಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಪ್ರತಿದಿನದಂತೆ ಜಗಳಗಳು ನಡೆಯಲಾರಂಭಿಸಿದವು. ಬಳಿಕ ಮಧ್ಯವರ್ತಿಯೊಬ್ಬರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆ ಹರಿಸಿದರು. ಆದರೆ ಇದರ ಬಳಿಕ ಶರ್ಮಾ ಬೈಕ್ ಕೊಡಿಸುವಂತೆ ಪಟ್ಟು ಹಿಡಿದಿದ್ದನು ಎನ್ನಲಾಗಿದೆ.
ಶಾಲೆಗೆ ಹುಸಿ ಬಾಂಬ್ ಇಮೇಲ್ ಕಳುಹಿಸಿದ 16 ವರ್ಷದ ವಿದ್ಯಾರ್ಥಿನಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಅಕ್ಟೋಬರ್ 21ರಂದು ಜಗಳ ತೀವ್ರಗೊಂಡಿದ್ದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಟ್ವಿಂಕಲ್ ನೆರೆಮನೆಗೆ ಓಡಿ ಹೋಗಿದ್ದರು. ಆದರೆ ರಿತೀಶ್ ಅಲ್ಲಿಗೂ ಹಿಂಬಾಲಿಸಿಕೊಂಡು ಬಂದು ಆಕೆಯ ಮೇಲೆ ಹಲ್ಲೆ ನಡೆಸಿ ಕೂದಲು ಹಿಡಿದು ರಸ್ತೆವರೆಗೆ ಎಳೆದುಕೊಂಡು ಹೋಗಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.