ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Police constable caught in Lokayukta trap: ಜಾಮೀನು ಷರತ್ತು ಸಡಿಲಿಸಲು ₹3 ಸಾವಿರ ಬೇಡಿಕೆ: ಲಂಚ ಸ್ವೀಕರಿಸಿದ ಆರೋಪ: ಪೊಲೀಸ್ ಪೇದೆ ಲೋಕಾಯುಕ್ತ ಬಲೆಗೆ

ಸುಲೇಪೇಟ್‌ ಠಾಣೆಯ ರೈಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನೀಲ ಲೋಕಾಯುಕ್ತರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಪೇದೆ. ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಚಂದ್ರಕಾಂತ ರಂಗನೂರ ಅವರು ಜಾತಿ ನಿಂದನೆ ಪ್ರಕರಣವೊಂದರಲ್ಲಿ ಜಾಮೀನು ಪಡೆದಿದ್ದರು. ನ್ಯಾಯಾಲಯದ ಷರತ್ತಿನಂತೆ ಪ್ರತಿ ತಿಂಗಳು ಠಾಣೆಯ ತನಿಖಾಧಿಕಾರಿ ಎದುರು ಹಾಜರಾಗಬೇಕಿತ್ತು.

ಕಲಬುರಗಿ: ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿಯಿಂದ ₹3 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇರೆಗೆ ಸುಲೇಪೇಟ್‌ ಪೊಲೀಸ್‌ ಠಾಣೆಯ ಪೇದೆಯೊಬ್ಬರು ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸುಲೇಪೇಟ್‌ ಠಾಣೆಯ ರೈಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನೀಲ ಲೋಕಾಯುಕ್ತರ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಪೇದೆ. ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಚಂದ್ರಕಾಂತ ರಂಗನೂರ ಅವರು ಜಾತಿ ನಿಂದನೆ ಪ್ರಕರಣವೊಂದರಲ್ಲಿ ಜಾಮೀನು ಪಡೆದಿದ್ದರು. ನ್ಯಾಯಾಲಯದ ಷರತ್ತಿನಂತೆ ಪ್ರತಿ ತಿಂಗಳು ಠಾಣೆಯ ತನಿಖಾಧಿಕಾರಿ ಎದುರು ಹಾಜರಾಗಬೇಕಿತ್ತು.

ಇದನ್ನೂ ಓದಿ: Lokayukta Raid: ಖಾತೆ ಮಾಡಲು ₹1 ಲಕ್ಷ ಲಂಚ: ಸಿಕ್ಕಿಬಿದ್ದ ಆರ್.ಐ. ನಾಗೇಶ್

ಆದರೆ, ಠಾಣೆಯ ಪೇದೆ ಅನೀಲ ಅವರು ಪ್ರತಿವಾರ ಭಾನುವಾರ ಠಾಣೆಗೆ ಬಂದು ಹಾಜರಾತಿ ನೀಡುವಂತೆ ಚಂದ್ರಕಾಂತ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಹಾಜರಾಗದಿದ್ದರೆ ಜಾಮೀನು ರದ್ದುಪಡಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Lokayukta Trap constabe 2

ವಾರಕ್ಕೊಮ್ಮೆ ಠಾಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಲು ಚಂದ್ರಕಾಂತ ಅವರು ಮಧ್ಯವರ್ತಿ ಕೃಷ್ಣ ಅವರ ಮೊಬೈಲ್‌ ಸಂಖ್ಯೆಗೆ ₹3 ಸಾವಿರವನ್ನು ಫೋನ್‌ಪೇ ಮೂಲಕ ವರ್ಗಾಯಿಸಿದ್ದರು ಎನ್ನಲಾಗಿದೆ. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು.

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಹಣ ವರ್ಗಾ ವಣೆಯಾದ ಬಳಿಕ ಪೇದೆ ಅನೀಲ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಲೋಕಾ ಯುಕ್ತ ತನಿಖಾಧಿಕಾರಿ ರವಿಕುಮಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.