ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokayukta Raid: ಖಾತೆ ಮಾಡಲು ₹1 ಲಕ್ಷ ಲಂಚ: ಸಿಕ್ಕಿಬಿದ್ದ ಆರ್.ಐ. ನಾಗೇಶ್

ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ವಾಸಿ ರೇಣುಕೇಶ್ ಎಂಬುವವರು ತಮ್ಮ ತಾತನ ಜಮೀನನ್ನು ಪೌತಿ ಖಾತೆ ಮಾಡಿಕೊಡುವಂತೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. ಖಾತೆ ಮಾಡಲು ಆರ್.ಐ. ನಾಗೇಶ್ ₹1 ಲಕ್ಷ ಲಂಚ ಕೇಳಿದ್ದರು. ಈ ಪೈಕಿ ಮೊದಲ ಕಂತಾಗಿ ₹35,000 ಹಣವನ್ನು ನೀಡಲಾಗಿತ್ತು. ನಂತರ ಕೆಲಸ ಮಾಡಿಕೊಡದೆ ಉಳಿದ ಹಣಕ್ಕೆ ಸತಾಯಿಸುತ್ತಿದ್ದಾಗ ರೋಸಿ ಹೋದ ರೇಣುಕೇಶ್ ಲೋಕಾಯುಕ್ತ ಕಚೇರಿಯ ಬಾಗಿಲು ತಟ್ಟಿದ್ದರು.

ಖಾತೆ ಮಾಡಲು ₹1 ಲಕ್ಷ ಲಂಚ: ಸಿಕ್ಕಿಬಿದ್ದ ಆರ್.ಐ. ನಾಗೇಶ್

-

Profile
Ashok Nayak Sep 24, 2026 6:39 PM

ಮಧುಗಿರಿ: ತೀವ್ರ ಬರಗಾಲದಲ್ಲೂ ಭೂ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದ ರೈತನಿಂದ ಪೌತಿ ಖಾತೆ ಮಾಡಲು ₹1 ಲಕ್ಷ ಲಂಚದ ಬೇಡಿಕೆಯಿಟ್ಟಿದ್ದ ಕಸಬಾ ಕಂದಾಯ ನಿರೀಕ್ಷಕ (ಆರ್.ಐ.) ನಾಗೇಶ್, ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ: Lokayukta: ಮ್ಯೂಟೇಷನ್‌ಗೆ ₹10 ಸಾವಿರ: ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಘಟನೆಯ ಹಿನ್ನೆಲೆ: ತಾಲೂಕಿನ ಕಸಬಾ ಹೋಬಳಿಯ ಮುದ್ದೇನಹಳ್ಳಿ ಗ್ರಾಮದ ವಾಸಿ ರೇಣುಕೇಶ್ ಎಂಬುವವರು ತಮ್ಮ ತಾತನ ಜಮೀನನ್ನು ಪೌತಿ ಖಾತೆ ಮಾಡಿಕೊಡುವಂತೆ ತಿಂಗಳ ಹಿಂದೆ ಮನವಿ ಸಲ್ಲಿಸಿದ್ದರು. ಖಾತೆ ಮಾಡಲು ಆರ್.ಐ. ನಾಗೇಶ್ ₹1 ಲಕ್ಷ ಲಂಚ ಕೇಳಿದ್ದರು. ಈ ಪೈಕಿ ಮೊದಲ ಕಂತಾಗಿ ₹35,000 ಹಣವನ್ನು ನೀಡಲಾಗಿತ್ತು. ನಂತರ ಕೆಲಸ ಮಾಡಿಕೊಡದೆ ಉಳಿದ ಹಣಕ್ಕೆ ಸತಾಯಿಸುತ್ತಿದ್ದಾಗ ರೋಸಿ ಹೋದ ರೇಣುಕೇಶ್ ಲೋಕಾಯುಕ್ತ ಕಚೇರಿಯ ಬಾಗಿಲು ತಟ್ಟಿದ್ದರು.

ಲೋಕಾಯುಕ್ತ ದಾಳಿ: ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್ಪಿ ಮಲ್ಲೇಶ್ ಅವರ ನೇತೃತ್ವದಲ್ಲಿ ದಾಳಿಗೆ ಯೋಜನೆ ರೂಪಿಸಲಾಯಿತು. ಸೆಪ್ಟೆಂಬರ್ 24ರ ಗುರುವಾರ ಮಧ್ಯಾಹ್ನ ಸುಮಾರು 12:30ರ ವೇಳೆಯಲ್ಲಿ, ದೂರುದಾರ ರೇಣುಕೇಶ್ ಅವರಿಂದ ಎರಡನೇ ಕಂತಿನ ₹30,000 ಲಂಚದ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಆರ್.ಐ. ನಾಗೇಶ್ ಅವರನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಬಂಧಿಸಿದ್ದಾರೆ.

image (38) ok

ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪಿ.ಐ. ರಾಜು, ಪಿ.ಐ. ನಿರ್ಮಲ ದೇವಿ, ಪಿ.ಐ. ಶಾಂತಿನಾಥ್ ಹೊನ್ನೂರು ಹಾಗೂ ಸಿಬ್ಬಂದಿಗಳಾದ ನಳಿನ, ರಂಗಸ್ವಾಮಿ, ಪ್ರಕಾಶ್, ಮಹೇಶ್, ಗಿರೀಶ್, ನಾಗರಾಜು ಪಿ. ಭಾಗವಹಿಸಿದ್ದರು.

image

ವರ್ಷಗಳಿಂದ ಬೀಡು ಬಿಟ್ಟಿರುವ ಅಧಿಕಾರಿಗಳನ್ನು ಜಿಲ್ಲೆಯಿಂದ ಹೊರ ಕಳಿಸಿ "ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಇಲಾಖೆ ಸಚಿವರ ತವರು ಜಿಲ್ಲೆಯಲ್ಲಿ ದಿನನಿತ್ಯ ರೈತರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅಲೆದಾಡುತ್ತಿದ್ದಾರೆ. ಲಂಚದ ಹಣ ನೀಡದಿದ್ದರೆ ಕೆಲಸವೇ ಆಗುವುದಿಲ್ಲ. ಪೌತಿ ಖಾತೆ ಆಂದೋಲನದಲ್ಲಿ ₹1 ಲಕ್ಷ ಲಂಚ ಕೇಳಿದ ಆರ್.ಐ. ನಾಗೇಶ್ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಆರ್.ಐ., ವಿ.ಎ., ಗ್ರೇಡ್-2 ಸೇರಿದಂತೆ ಹಲವು ಅಧಿಕಾರಿಗಳನ್ನು ತಕ್ಷಣವೇ ಜಿಲ್ಲೆಯಿಂದ ಹೊರಕಳಿಸಬೇಕು. ಇವರು ವರ್ಷಗಳಿಂದ ಇಲ್ಲೇ ತಿಕಾಣಿ ಹೂಡಿರುವ ಕಾರಣ ಭ್ರಷ್ಟಾಚಾರ ಮಿತಿ ಮೀರಿದ್ದು, ಸಾಲು ಸಾಲು ರಾಜಕಾಲುವೆ ಹಾಗೂ ಕೆರೆ-ಕಟ್ಟೆಗಳು ಭೂಮಾಫಿಯಾದವರ ಪಾಲಾಗಿವೆ. ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಂದಾಯ ಸಚಿವರು ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು."

ಟೈಗರ್ ನಾಗ್ (ಜೆಟ್ಟಿ ಅಗ್ರಹಾರ ನಾಗರಾಜು), ಸಾಮಾಜಿಕ ಹೋರಾಟಗಾರ
image

ಭ್ರಷ್ಟ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಿ "ಡಿಸಿಎಂ ಮತ್ತು ಕಂದಾಯ ಸಚಿವರ ತವರಲ್ಲಿ ಅಧಿಕಾರಿಗಳು ಲಂಚವಿಲ್ಲದೆ ಯಾವ ಕೆಲಸವನ್ನೂ ಮಾಡುತ್ತಿಲ್ಲ. ಸರ್ಕಾರವೇ ಪೌತಿ ಖಾತೆ ಆಂದೋಲನ ಮಾಡುತ್ತಿದೆ. ಆದರೆ ಒಂದು ಪೌತಿ ಖಾತೆಗೆ ₹1 ಲಕ್ಷ ಕೇಳಿದರೆ ರೈತರು ಯಾಕೆ ಲಂಚ ಕೊಡಬೇಕು? ಮಾನ್ಯ ಡಿಸಿಎಂ ಮತ್ತು ಕಂದಾಯ ಸಚಿವರು ಇಂತಹ ಭ್ರಷ್ಟ ಅಧಿಕಾರಿಗಳನ್ನು ಮುಲಾಜಿಲ್ಲದೆ ಸರ್ಕಾರಿ ಕೆಲಸದಿಂದ ವಜಾ ಮಾಡಬೇಕು."

ಮಹೇಶ್ ಮಧುಗಿರಿ, ಸಾಮಾಜಿಕ ಹೋರಾಟಗಾರ
image

ಬಡ ರೈತರು ಲಂಚ ಎಲ್ಲಿಂದ ತರಬೇಕು? "ರಾಜ್ಯಾದ್ಯಂತ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತಮ್ಮ ಪೂರ್ವರೀಕರಿಂದ ಬಂದ ಜಮೀನನ್ನು ಪೌತಿ ಖಾತೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದರೆ ₹1 ಲಕ್ಷ ಲಂಚ ಕೇಳಿದರೆ ಬಡ ರೈತರು ಎಲ್ಲಿಂದ ಕೊಡಬೇಕು? ಜಿಲ್ಲಾ ಮತ್ತು ತಾಲೂಕು ಆಡಳಿತ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ. ಹಣ ಕೊಟ್ಟರೆ ಮಾತ್ರ ತಾಲೂಕು ಕಚೇರಿಯಲ್ಲಿ ಕೆಲಸ ನಡೆಯುತ್ತದೆ."

ರಫೀಕ್ ಪಾಷ, ಸಾಮಾಜಿಕ ಹೋರಾಟಗಾರ