ಕೋಲ್ಕತ್ತಾ: ಪಶ್ಚಿಮ ಬಂಗಾಳ (west bengal) ಮಾಜಿ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (All India Trinamool Congress) ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿದೆ. ಮಾದಕ ನಾಗರಿಕ ಸ್ವಯಂಸೇವಕಿ ಮತ್ತು ಮಾದಕ ವ್ಯಸನಿ ಮಹಿಳೆಯೊಬ್ಬರು ಮಮತಾ ಬ್ಯಾನರ್ಜಿ ಅವರ ಕೋಲ್ಕತ್ತಾದ ಕಾಳಿಘಾಟ್ನಲ್ಲಿರುವ ನಿವಾಸದ ಬಳಿಯೇ ಅವರ ಮೇಲೆ ದಾಳಿ ನಡೆಸಿದ್ದಾರೆ. ಮಹಿಳೆಯನ್ನು ತನಿಷ್ಠಾ ಸಹಾ ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ತಿಳಿಸಿದೆ
ಕಾಳಿಘಾಟ್ನ ತಮ್ಮ ನಿವಾಸದಿಂದ ಮಂಗಳವಾರ ಸಂಜೆ ಹೊರಬರುತ್ತಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಮೇಲೆ ತನಿಷ್ಠಾ ಸಹಾ ಎಂದು ಗುರುತಿಸಲಾಗಿರುವ ಮಾದಕ ವ್ಯಸನಿ ಮಹಿಳೆಯೊಬ್ಬರು ದಾಳಿ ನಡೆಸಿದ್ದಾರೆ. ದಾಳಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ.
ಬಿಹಾರ ದೋಣಿ ದುರಂತ: 13 ಮಕ್ಕಳು ಸಾವು
ದಾಳಿಯ ಕುರಿತು ಪೊಲೀಸರಿಗೆ ದೂರು ನೀಡಿರುವ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡೋಲಾ ಸೇನ್ ಅವರು, ಮಮತಾ ಬ್ಯಾನರ್ಜಿ ಅವರ ಸೋದರ ಸಂಬಂಧಿ ಸೊಸೆ ಎಂದು ಹೇಳಿಕೊಂಡು ಬಂದ ತನಿಷ್ಠಾ ಸಹಾ ಒಬ್ಬ 'ಸಿವಿಕ್ ವಾಲೆಂಟಿಯರ್' ಆಗಿದ್ದಾರೆ. ತನಿಷ್ಠಾ ಸಹಾ ಅವರು ಸಂಜೆ 6 ಗಂಟೆ ಸುಮಾರಿಗೆ ಕಾಳಿಘಾಟ್ನಲ್ಲಿರುವ ಮನೆಯಿಂದ ಹೊರ ಬರುತ್ತಿದ್ದ ಮಮತಾ ಬ್ಯಾನರ್ಜಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಿವಿಕ್ ವಾಲೆಂಟಿಯರ್ಗಳು ಎಂದರೆ ಸಂಚಾರ ನಿರ್ವಹಣೆ, ಜನಸಂದಣಿ ನಿಯಂತ್ರಣ ಮತ್ತು ಸಾರ್ವಜನಿಕ ಸುರಕ್ಷತಾ ಕರ್ತವ್ಯಗಳಲ್ಲಿ ಸಹಾಯ ಮಾಡಲು ಪಶ್ಚಿಮ ಬಂಗಾಳ ಪೊಲೀಸ್ ಮತ್ತು ಕೋಲ್ಕತ್ತಾ ಪೊಲೀಸ್ ಇಲಾಖೆಗಳು ನೇಮಿಸಿಕೊಂಡಿರುವ ಗುತ್ತಿಗೆ ಸಿಬ್ಬಂದಿಯಾಗಿದ್ದಾರೆ. ತನಿಷ್ಕಾ ಸಹಾ ಒಬ್ಬ ಮಾದಕ ವ್ಯಸನಿ. ಇವರು ಝೆಡ್ ಪ್ಲಸ್ ಭದ್ರತೆ ಹೊಂದಿರುವವರ ಮಮತಾ ಬ್ಯಾನರ್ಜಿ ಅವರ ನಿವಾಸದ ಬಳಿ ಬರಲು ಹೇಗೆ ಸಾಧ್ಯವಾಯಿತು ಎಂಬುದರ ಕುರಿತು ತನಿಖೆಯಾಗಲಿ ಎಂದು ಪಕ್ಷ ಆಗ್ರಹಿಸಿದೆ.
ತನಿಷ್ಕಾ ಅವಾಚ್ಯ ಶಬ್ದಗಳನ್ನು ಬಳಸಿ ಮಮತಾ ಬ್ಯಾನರ್ಜಿ ಅವರನ್ನು ನಿಂದಿಸಿದ್ದಾರೆ. ಆಗ ಅವರು ಅಮಲಿನ ಸ್ಥಿತಿಯಲ್ಲಿದ್ದರು. ಪಶ್ಚಿಮ ಬಂಗಾಳದ ಗೌರವಾನ್ವಿತ ಮಾಜಿ ಮುಖ್ಯಮಂತ್ರಿಗೆ ಹಾನಿ ಮಾಡುವ ಉದ್ದೇಶದಿಂದ ರಸ್ತೆಯ ಮೇಲೆ ಮಲಗಿದರು ಎಂದು ಸೇನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಪ್ರತಿಯನ್ನು ಪಕ್ಷದ ವಕ್ತಾರ ಸಾಕೇತ್ ಗೋಖಲೆ ಅವರು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಂಗಾಳದಲ್ಲಿ ಪರಿಸ್ಥಿತಿ ಹೀಗಿದೆ. ಝೆಡ್ ಪ್ಲಸ್ ಭದ್ರತೆ ಹೊಂದಿರುವ ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯೇ ಇಲ್ಲಿ ಸುರಕ್ಷಿತವಾಗಿಲ್ಲ. ದೆಹಲಿಯಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡಲು 'ದೀದಿ' ದೃಢಸಂಕಲ್ಪ ಮಾಡಿರುವುದರಿಂದ ಇದು ಆ ಪಕ್ಷದ ಯೋಜಿತ ಪಿತೂರಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮಹಿಳೆಯನ್ನು ಪೊಲೀಸರು 38 ವರ್ಷದ ಅನುಸೂಯಾ ಸಹಾ ಎಂದು ಗುರುತಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯವರು ತಮ್ಮ ನಿವಾಸದಿಂದ ಹೊರಬರುತ್ತಿದ್ದಾಗ ಅನುಸೂಯಾ ಸಾಹಾ ಎಂಬವರು ಅವರನ್ನು ತಡೆಯಲು ಪ್ರಯತ್ನಿಸಿದ್ದು, ಇದರಿಂದ ತೀವ್ರ ವಾಗ್ವಾದ ಉಂಟಾಗಿದೆ. ತಕ್ಷಣವೇ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಈ ಮಧ್ಯೆ, ಟಿಎಂಸಿ ಸದಸ್ಯರು ದೂರು ದಾಖಲಿಸಿದ್ದಾರೆ. ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
SIR ಹೋರಾಟದ ನಂತರ ವಿದ್ಯಾರ್ಥಿ ನಾಯಕರಿಗೆ, ಸ್ವಪಕ್ಷದವರಿಗೆ ಚಹಾ ಕೂಟ ಆಯೋಜಿಸಿದ ರಾಹುಲ್ ಗಾಂಧಿ
ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿಯಾಗುತ್ತಿರುವುದು ಇದು ಮೊದಲೇನಲ್ಲ. ಕಳೆದ ಮೇ ತಿಂಗಳಿನಿಂದೀಚೆಗೆ ಅವರ ಮೇಲೆ ಹಲವು ಬಾರಿ ದಾಳಿ ನಡೆಸುವ ಪ್ರಯತ್ನಗಳು ನಡೆದಿವೆ. ಆಗಸ್ಟ್ನಲ್ಲಿ ಕೋಲ್ಕತ್ತಾದ ಶ್ಯಾಮ್ಬಜಾರ್ ಪ್ರದೇಶದಲ್ಲಿ ಅವರ ಕಾರಿನ ಮೇಲೆ ದೊಡ್ಡ ಕಲ್ಲನ್ನು ಎಸೆಯಲಾಗಿತ್ತು.