ಮುಂಬೈ: ಸಂಗೀತ ಕಾರ್ಯಕ್ರಮವೊಂದರಲ್ಲಿ (Mumbai Concert) ಮಾದಕ ದ್ರವ್ಯ (Drug) ಸೇವಿಸಿದ ಮೂವರು ಎಂಬಿಎ ವಿದ್ಯಾರ್ಥಿಗಳಲ್ಲಿ (MBA Student) ಇಬ್ಬರು ಸಾವನ್ನಪ್ಪಿದ್ದಾರೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಗೋರೆಗಾಂವ್‌ನ (Goregaon) ನೆಸ್ಕೋ ಕೇಂದ್ರದಲ್ಲಿ ಏಪ್ರಿಲ್ 11ರಂದು ರಾತ್ರಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸುಮಾರು 4,000 ಜನರು ತಲಾ 2,000 ರೂ. ಪ್ರವೇಶ ಶುಲ್ಕವನ್ನು ಪಾವತಿಸಿ ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದ ಮೂವರು ಎಂಬಿಎ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಗೋರೆಗಾಂವ್‌ನ ನೆಸ್ಕೋ ಕೇಂದ್ರದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯಿಂದ ಸಾವನ್ನಪ್ಪಿದ್ದಾರೆ. ಇವರು ನಿಷೇಧಿತ ಔಷಧ ಎಂಡಿಎಂಎ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿಜಯಪುರದಲ್ಲಿ ಹೀನ ಕೃತ್ಯ; ನೋಡಕ್ಕೆ ತನ್ನಂತೆ ಕಾಣಲ್ಲ ಎಂದು 6 ವರ್ಷದ ಮಗನನ್ನು ನದಿಗೆ ತಳ್ಳಿ ಕೊಂದ ಪಾಪಿ ತಂದೆ!
ಏಪ್ರಿಲ್ 11ರಂದು ರಾತ್ರಿ ನಡೆದ ಸಂಗೀತ ಕಚೇರಿಯಲ್ಲಿ ಇವರು ಪಾಲ್ಗೊಂಡಿದ್ದು,12 ಗಂಟೆ ಸುಮಾರಿಗೆ ಮೂವರು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಗಿದೆ.
ಎಂಬಿಎ ವಿದ್ಯಾರ್ಥಿಗಳಲ್ಲಿ 24 ವರ್ಷದ ವಿದ್ಯಾರ್ಥಿನಿ ಮತ್ತು 28 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. 25 ವರ್ಷದ ಇನ್ನೋರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾವಿಗೆ ಮಿತಿ ಮೀರಿದ ಡ್ರಗ್ಸ್ ಸೇವನೆಯೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಹೋಗುವಾಗ ದಾರಿ ಮಧ್ಯೆ ಇವರು ಟ್ಯಾಕ್ಸಿಯಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ. ಬಳಿಕ ಕಾರ್ಯಕ್ರಮದಲ್ಲಿ ಮತ್ತೆ ಡ್ರಗ್ಸ ಸೇವನೆ ಮಾಡಿದ್ದು ಇದು ಮಿತಿ ಮೀರಿದ್ದರಿಂದ ಸಾವಿಗೆ ಕಾರಣವಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಇವರಿಗೆ ಡ್ರಗ್ಸ್ ಪೂರೈಸಿದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಆತನಿಂದ ೬- ೭ ಡ್ರಗ್ಸ್ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈ ಹೊರಗಿನಿಂದ ಮಾದಕ ದ್ರವ್ಯಗಳನ್ನು ತರಿಸಲಾಗಿದ್ದು, ಈ ಜಾಲದ ಕುರಿತು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಘೋರ ಘಟನೆ; 14 ವರ್ಷದ ಮಗಳನ್ನು ಕೊಂದು ತಾಯಿಯೂ ಆತ್ಮಹತ್ಯೆ!
ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಕ್ರಮ ಆಯೋಜಕ ವಿಹಾನ್ ಅಲಿಯಾಸ್ ಆಕಾಶ್ ಸಮಲ್, ನೆಸ್ಕೋ ಈವೆಂಟ್ ಆರ್ಗನೈಸೇಶನ್ ಮತ್ತು ಮ್ಯಾನೇಜ್‌ಮೆಂಟ್‌ನ ಸನ್ನಿ ವಿನೋದ್ ಜೈನ್, ಆಂತರಿಕ ಭದ್ರತಾ ತಂಡದ ಸದಸ್ಯ ಬಾಲಕೃಷ್ಣನ್ ಬಲರಾಮ್ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳು ಬಂಧಿಸಲಾಗಿದೆ. ತನಿಖೆಗಾಗಿ ನೆಸ್ಕೋ ಕೇಂದ್ರವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದೆ.