ಉತ್ತರ ಪ್ರದೇಶ: ಹೊಸ ಶೂ (New Shoes) ವಿಚಾರದಲ್ಲಿ ಸಹೋದರರ ಮಧ್ಯೆ ಜಗಳವಾಗಿದ್ದು, ಕೊಲೆಯಲ್ಲಿ (crime news) ಅಂತ್ಯಗೊಂಡಿದೆ. ಉತ್ತರ ಪ್ರದೇಶದ (Uttar Pradesh) ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹೊಸ ಶೂಗಾಗಿ ಸಹೋದರರಿಬ್ಬರ ಮಧ್ಯೆ ನಡೆದ ಜಗಳ ತಾರಕಕ್ಕೇರಿ ಹಿರಿಯ ಸಹೋದರನು ಕಿರಿಯ ಸಹೋದರನ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಲಕ್ಷ್ಮಣ್ ಶರ್ಮಾ (15) ಮೃತ ಯುವಕ. ಈತನ ಮೇಲೆ ಸೂರಜ್ ಶರ್ಮಾ (16) ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಮಹಾರಾಜ್‌ಗಂಜ್ ಜಿಲ್ಲೆಯ ಘುಗ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಚೌಮುಖ ನೌಕಾ ಟೋಲಾ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಲಕ್ಷ್ಮಣ್ ಶರ್ಮಾ ಎಂಬಾತನ ಮೇಲೆ ಅತನ ಸಹೋದರ ಸೂರಜ್ ಶರ್ಮಾ ದಾಳಿ ನಡೆಸಿದ್ದಾನೆ. ಹೊಸದಾಗಿ ಖರೀದಿ ಮಾಡಿದ ಶೂ ವಿಚಾರದಲ್ಲಿ ಅವರ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ.
Murder case: ಹೊಸ ಕಾರಿನೊಂದಿಗೆ ಪೂಜೆಗೆ ಬಂದವನ ಬರ್ಬರ ಕೊಲೆ, ಕಾರಿಗೂ ಬೆಂಕಿ
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು ರಜ್ ಶರ್ಮಾ ಮತ್ತು ಲಕ್ಷ್ಮಣ್ ಶರ್ಮಾ ಸಹೋದರರು ಆನ್‌ಲೈನ್‌ನಲ್ಲಿ ಶೂ ಖರೀದಿ ಮಾಡಿದ್ದರು. ಇದನ್ನು ಯಾರು ಧರಿಸುವುದು ಎನ್ನುವ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವಾಗ್ವಾದ ತಾರಕಕ್ಕೇರಿ ಕೋಪದ ಭರದಲ್ಲಿ, ಸೂರಜ್ ಕತ್ತರಿ ಎತ್ತಿಕೊಂಡು ಲಕ್ಷ್ಮಣ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಲಕ್ಷ್ಮಣ್ ತಲೆ ಮತ್ತು ಕೈಗಳಿಗೆ ಹಲವು ಗಾಯಗಳಾಗಿದ್ದು, ಸ್ಥಳದಲ್ಲೇ ಆತ ಕುಸಿದು ಬಿದ್ದಿದ್ದಾನೆ ಎಂದು ತಿಳಿಸಿದರು.
ತಕ್ಷಣ ಕುಟುಂಬಸ್ಥರು ಲಕ್ಷ್ಮಣ್ ನನ್ನು ಘುಗ್ಲಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದ ಕಾರಣ ಅಲ್ಲಿಂದ ಆತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.
ED Raid: ಹ್ಯಾರಿಸ್- ನಲಪಾಡ್ ಮೇಲಿನ ಇಡಿ ದಾಳಿಗೆ ಮೃತ ಸಿಜೆ ರಾಯ್ ಜೊತೆಗಿನ ನಂಟು ಕಾರಣ?
ಘಟನೆಯಿಂದ ಕುಟುಂಬ ಆಘಾತಕ್ಕೊಳಗಾಗಿದೆ. ಆರೋಪಿ ಮತ್ತು ಮೃತ ಬಾಲಕರಿಬ್ಬರೂ ಅಪ್ರಾಪ್ತರಾಗಿದ್ದಾರೆ. ಕಾನೂನು ಕ್ರಮಗಳು ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಕುಮಾರ್ ತಿಳಿಸಿದ್ದಾರೆ.
ಹಾಡಹಗಲೇ ಬರ್ಬರವಾಗಿ ವ್ಯಕ್ತಿಯ ಕೊಲೆ
ಹಾಡಹಗಲೇ ದುಷ್ಕರ್ಮಿಗಳು ಗುಂಡು ಹಾರಿಸಿ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಂದ ಘಟನೆ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಲರಾಮ್ ಚೌಕ ಬಳಿ ನಡೆದಿದೆ. ಭಾಯ್ ಭಾಯ್ ಗ್ರೂಪ್ ಮುಖಂಡ ಇರ್ಫಾನ್ (42) ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯ ಕೊಲೆಗೆ ಕಾರಣ ಎನ್ನಲಾಗಿದೆ. ಈ ಕುರಿತು ವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಾಡಿ ಪಟ್ಟಣದ ಬಲರಾಮ್ ಚೌಕ್ ಬಳಿಯ ಸೇವಾಲಾಲ್ ಮಂದಿರದ ಸಮೀಪ ಈ ಕೊಲೆ ನಡೆದಿದೆ. ಇರ್ಫಾನ್ ಮಧ್ಯಾಹ್ನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಮೊದಲು ಗುಂಡು ಹಾರಿಸಿ ಬಳಿಕ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.