Murder case: ಹೊಸ ಕಾರಿನೊಂದಿಗೆ ಪೂಜೆಗೆ ಬಂದವನ ಬರ್ಬರ ಕೊಲೆ, ಕಾರಿಗೂ ಬೆಂಕಿ
ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (36) ಮೃತ ದುರ್ದೈವಿ. ಈ ಘಟನೆಯ ಕ್ರೌರ್ಯ ಕಂಡು ಕನ್ನೋಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮೃತನ ದೊಡ್ಡಪ್ಪನ ಮಗ ಸದಾಶಿವ ಪಡಸಲಗಿಯೇ ಕೊಲೆಗೈದ ಆರೋಪಿ ಎನ್ನಲಾಗುತ್ತಿದೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಟ್ಟುಹಾಕಲಾದ ಕಾರು -
ಬಾಗಲಕೋಟೆ, ಏ.21: ಹೊಸದಾಗಿ ಕಾರು (Car) ಖರೀದಿಸಿ ಊರ ದೇವರ ಪೂಜೆಗೆಂದು ಹೋದವನನ್ನೇ ಬರ್ಬರವಾಗಿ ಕೊಲೆಗೈದಿರುವ (Murder case) ಘಟನೆ ಬಾಗಲಕೋಟೆಯ (Bagalakote) ಕನ್ನೋಳಿ ಗ್ರಾಮದಲ್ಲಿ ನಡೆದಿದೆ. ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (36) ಮೃತ ದುರ್ದೈವಿಯಾಗಿದ್ದಾರೆ. ಹತ್ಯೆ ಮಾಡಿದ ಬಳಿಕ ಹೊಸ ಕಾರಿನಲ್ಲಿಯೇ ಶವವನ್ನು ಇಟ್ಟು ಕಾರು ಸಮೇತ ಸುಟ್ಟುಹಾಕಲಾಗಿದೆ.
ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (36) ಮೃತ ದುರ್ದೈವಿ. ಈ ಘಟನೆಯ ಕ್ರೌರ್ಯ ಕಂಡು ಕನ್ನೋಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮೃತನ ದೊಡ್ಡಪ್ಪನ ಮಗ ಸದಾಶಿವ ಪಡಸಲಗಿಯೇ ಕೊಲೆಗೈದ ಆರೋಪಿ ಎನ್ನಲಾಗುತ್ತಿದೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆ ಹಿಂದೆ ಅನೈತಿಕ ಸಂಬಂಧ?
ಆರೋಪಿ ಸದಾಶಿವನ ಪತ್ನಿಯ ಜೊತೆಗೆ ಮೃತ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಹಳೆ ವೈಷಮ್ಯವಿತ್ತು. ಹೊಸ ಕಾರು ಖರೀದಿಸಿದ್ದ ಮೃತ ಸೋಮಲಿಂಗ, ಹೊಸ ಕಾರಿಗೆ ಪೂಜೆ ಮಾಡಿಸಿ ಸಂಜೆ 7.30ಕ್ಕೆ ಊರಿಗೆ ಮರಳುತ್ತಿದ್ದ ವೇಳೆ ಕನೋಳಿ ಗ್ರಾಮದ ಬಳಿ ಕಾದು ನಿಂತಿದ್ದ ಆರೋಪಿಗಳು ಸೋಮಲಿಂಗನನ್ನು ತಡೆದು ಕೊಲೆ ಮಾಡಿದ್ದಾರೆ.
ಬೇರೋಂದು ಕಾರಿನಲ್ಲಿ ಬಂದಿದ್ದ ಆರೋಪಿಗಳಾದ ಸದಾಶಿವ ಪಡಸಲಗಿ ಸಹಚರರಾದ ರವಿ ಪಾಟೀಲ, ಕಾರಿನಿಂದ ಇಳಿದ ತಕ್ಷಣ ಸೋಮಲಿಂಗ ಅವರಿಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಕಾರಿನ ಪಕ್ಕದಲ್ಲೇ ಸೋಮಲಿಂಗ ಕುಸಿದು ಬಿದ್ದಿದ್ದಾನೆ. ಬಳಿಕ ಕಾರಿನ ಸಮೇತ ಮೃತದೇಹಕ್ಕೆ ಕಾರಿನಲ್ಲಿದ್ದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಸಾವಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kalaburagi shootout: ಕಲಬುರಗಿಯಲ್ಲಿ ಹಾಡಹಗಲೇ ಗುಂಡು ಹಾರಿಸಿ, ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ