ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fire Accident: ದಿನಸಿ ಅಂಗಡಿಯಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ವಸ್ತುಗಳು

ಭೀಕರ ಅಗ್ನಿ ಅವಘಡವೊಂದು ನಡೆದಿದ್ದು, ಬನಶಂಕರಿಯ ಬ್ಯಾಂಕ್ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿ ಬೆಂಕಿ ಅನಾಹುತ (Fire Accident) ಸಂಭವಿಸಿದೆ. ರಾತ್ರಿ 10.30ಕ್ಕೆ ಮಾಲೀಕ ಅಂಗಡಿ ಕ್ಲೋಸ್ ಮಾಡಿದ್ದರು. ಶಂಭುಶೆಟ್ಟಿ ಎಂಬುವರಿಗೆ ಸೇರಿದ ಧನಲಕ್ಷ್ಮಿ ಡಿಪಾರ್ಟ್ಮೆಂಟಲ್ ಸ್ಟೋರ್ ಸುಟ್ಟು ಕರಕಲಾಗಿದೆ.

ಬೆಂಗಳೂರು: ಭೀಕರ ಅಗ್ನಿ ಅವಘಡವೊಂದು ನಡೆದಿದ್ದು, ಬನಶಂಕರಿಯ ಬ್ಯಾಂಕ್ ಕಾಲೋನಿಯಲ್ಲಿರುವ ದಿನಸಿ ಅಂಗಡಿಯಲ್ಲಿ ಬೆಂಕಿ ಅನಾಹುತ (Fire Accident) ಸಂಭವಿಸಿದೆ. ರಾತ್ರಿ 10.30ಕ್ಕೆ ಮಾಲೀಕ ಅಂಗಡಿ ಕ್ಲೋಸ್ ಮಾಡಿದ್ದರು. ಬಳಿಕ 11 ಗಂಟೆ ಸುಮಾರಿಗೆ ಅಂಗಡಿಗೆ ಬೆಂಕಿ ತಗುಲಿದೆ ಎನ್ನಲಾಗ್ತಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ದಿನಸಿ ಅಂಗಡಿಯಲ್ಲಿ ಎಣ್ಣೆ-ತುಪ್ಪವಿದ್ದ ಹಿನ್ನೆಲೆ ಕ್ಷಣದಲ್ಲೇ ಬೆಂಕಿ ಜೋರಾಗಿದೆ. ಇಡೀ ಅಂಗಡಿಯೇ ಹೊತ್ತಿ ಉರಿದಿದೆ. ಅಡುಗೆ ಎಣ್ಣೆ, ತುಪ್ಪ ಇದ್ದ ಕಾರಣ ಅಂಗಡಿ ಹೊತ್ತಿ ಉರಿದಿದೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಂಭುಶೆಟ್ಟಿ ಎಂಬುವರಿಗೆ ಸೇರಿದ ಧನಲಕ್ಷ್ಮಿ ಡಿಪಾರ್ಟ್ಮೆಂಟಲ್ ಸ್ಟೋರ್ ಸುಟ್ಟು ಕರಕಲಾಗಿದೆ. ಎರಡು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಬೆಂಕಿ ಹೊತ್ತಿಕೊಳ್ಳಲು ಯುಪಿಎಸ್​​ ಸ್ಫೋಟ ಕಾರಣ ಎಂದು ಹೇಳಲಾಗಿದೆ. ಗ್ರೌಂಡ್ ಫ್ಲೋರ್​​ ನಲ್ಲಿ ಯುಪಿಎಸ್ ಸಿಡಿದು ಬೆಂಕಿ ಅನಾಹುತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮೊದಲ ಫ್ಲೋರ್ ವರೆಗೂ ಹಬ್ಬಿದ ಬೆಂಕಿ ಹಬ್ಬಿದೆ. ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ದಿನಸಿ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.

ಪ್ರತ್ಯೇಕ ಘಟನೆಯಲ್ಲಿ, ಮುಂಬೈನ ಜೋಗೇಶ್ವರಿ ಪ್ರದೇಶದಲ್ಲಿರುವ ಜೆಎಂಎಸ್ ಬಿಸಿನೆಸ್ ಸೆಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡದ ಮೇಲಿನ ಮಹಡಿಯಲ್ಲಿ ಹಲವು ಮಂದಿ ಸಿಲುಕಿಕೊಂಡಿದ್ದರು. ಮೂಲಗಳ ಪ್ರಕಾರ, ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸಿದರು. ಏಣಿಗಳ ಸಹಾಯದಿಂದ ಕಟ್ಟಡದ ಮೇಲೆ ಸಿಲುಕಿಕೊಂಡ ಐದು ಜನರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Chalavadi Narayanaswamy: ಪ್ರಿಯಾಂಕ್ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ದಲಿತರ ನೆನಪು: ಛಲವಾದಿ ನಾರಾಯಣಸ್ವಾಮಿ

ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.