ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assaulting Case: ಕುಡಿದ ಮತ್ತಿನಲ್ಲಿ ವಿದೇಶಿ ಪ್ರಜೆ ಪುಂಡಾಟ; ಬೆತ್ತೆಲೆಯಾಗಿ ವಸತಿ ಪ್ರದೇಶಕ್ಕೆ ಎಂಟ್ರಿ

ಗುರುಗ್ರಾಮದ ಸೆಕ್ಟರ್ 85 ರಲ್ಲಿ ವಸತಿ ಸೊಸೈಟಿಗೆ ವಿದೇಶಿ ಪ್ರಜೆಯೊಬ್ಬ ಬೆತ್ತಲೆಯಾಗಿ ಬಂದಿದ್ದಾನೆ. ಆತ ಭದ್ರತಾ ಸಿಬ್ಬಂದಿ ಮತ್ತು ನಿವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆ ಆರೋಪದ ಮೇಲೆ ಕ್ಯಾಮರೂನಿಯನ್ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಬೆತ್ತೆಲೆಯಾಗಿ ವಸತಿ ಪ್ರದೇಶಕ್ಕೆ ನುಗ್ಗಿದ ವಿದೇಶಿ ಪ್ರಜೆ

ಸಾಂದರ್ಭಿಕ ಚಿತ್ರ

Profile Vishakha Bhat Mar 20, 2025 12:24 PM

ಲಖನೌ: ಗುರುಗ್ರಾಮದ ಸೆಕ್ಟರ್ 85 ರಲ್ಲಿ ವಸತಿ ಸೊಸೈಟಿಗೆ ವಿದೇಶಿ ಪ್ರಜೆಯೊಬ್ಬ ಬೆತ್ತಲೆಯಾಗಿ ಬಂದಿದ್ದಾನೆ. ಆತ ಭದ್ರತಾ ಸಿಬ್ಬಂದಿ ಮತ್ತು ನಿವಾಸಿಗಳ ಮೇಲೆ ಹಲ್ಲೆ (Assaulting Case) ನಡೆಸಿದ್ದಾನೆ ಎನ್ನಲಾಗಿದೆ. ಹಲ್ಲೆ ಆರೋಪದ ಮೇಲೆ ಕ್ಯಾಮರೂನಿಯನ್ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಮಧ್ಯ ಆಫ್ರಿಕಾದ ಕ್ಯಾಮರೂನ್ ಗಣರಾಜ್ಯದ ನಿವಾಸಿ ಥಾಮಸ್ ಅಲೆಕ್ಸ್ (34) ಎಂಬಾತನ ವಿರುದ್ಧ ಖೇರ್ಕಿ ದೌಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಸೋಮವಾರ ರಾತ್ರಿ ಪಿರಮಿಡ್ ಹೈಟ್ಸ್ ಸೊಸೈಟಿಯ ಟವರ್ 4 ರ ನಿವಾಸಿಗಳ ನಡುವೆ ಗಲಾಟೆ ನಡೆದಿದೆ. ಗಲಾಟೆಯಾದ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಆಗ ವಿದೇಶಿ ಪ್ರಜೆಯೊಬ್ಬ ನಿವಾಸಿಗಳ ವಿರುದ್ಧ ಕೂಗಾಡುತ್ತಿರುವುದು ಕಂಡು ಬಂದಿದೆ. ರಾತ್ರಿ 11.45 ರ ಸುಮಾರಿಗೆ ಆರೋಪಿಯು ಸಂಪೂರ್ಣ ಬೆತ್ತಲೆಯಾಗಿ ಭದ್ರತಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಟವರ್ 4 ರಲ್ಲಿರುವ 1101 ನೇ ಸಂಖ್ಯೆಯ ಫ್ಲಾಟ್‌ಗೆ ಬಲವಂತವಾಗಿ ಪ್ರವೇಶಿಸಿದ್ದಾನೆ ಎಂದು ನಿವಾಸಿಯೊಬ್ಬರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಹದ ಮೇಲೆ ಗಾಯದ ಗುರುತುಗಳಿದ್ದು, ಮದ್ಯದ ನಶೆಯಲ್ಲಿದ್ದಂತೆ ಕಾಣುತ್ತಿದ್ದ. ನಿವಾಸಿಗಳು ಅವನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ವಿದೇಶಿ ಪ್ರಜೆ ನಿವಾಸಿಗಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಥಾಮಸ್ ಪ್ರಸ್ತುತ ಪಿರಮಿಡ್ ಹೈಟ್ಸ್‌ನ ಟವರ್ 5 ರಲ್ಲಿ ವಾಸಿಸುತ್ತಿದ್ದ ಎಂದು ಅಧಿಕಾರಿ ಹೇಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಆತ ನವೆಂಬರ್ 2024 ರಲ್ಲಿ ವೈದ್ಯಕೀಯ ವೀಸಾದ ಮೇಲೆ ಭಾರತಕ್ಕೆ ಬಂದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Goa Murder Case: ವಿದೇಶಿ ಯುವತಿ ಮೇಲೆ ಅತ್ಯಾಚಾರ-ಕೊಲೆ; ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಪ್ರತ್ಯೇಕ ಘಟನೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೊಲೀಸ್‌ ಕಾನ್ಸ್ಟೇಬಲ್‌ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ವಿದೇಶಿ ಪ್ರಜೆಯನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ನೈಜೀರಿಯಾ ಮೂಲದ ಕೆಲ್ವಿನ್‌ ಬಂಧಿತ ಆರೋಪಿಯಾಗಿದ್ದಾನೆ. ಪೊಲೀಸ್‌ ಕಾನ್ಸ್ಟೇಬಲ್‌ ಭೀಮಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಈತನನ್ನು ಬಂಧಿಸಲಾಗಿತ್ತು.