Guru Maa Arrest: ಮಂಗಳಮುಖಿಯರ ʻಗುರು ಮಾʼ ಅರೆಸ್ಟ್; ಈಕೆ ಮೇಲಿರುವ ಕೇಸ್‌ಗಳೆಷ್ಟು ಗೊತ್ತಾ?
rans Leader arrested: ಮುಂಬೈನಲ್ಲಿ ಟ್ರಾನ್ಸ್ ಸಮುದಾಯದ ಗುರು ಮಾ ಎಂದೇ ಗುರುತಿಸಲ್ಪಟ್ಟಿರುವ ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿಯನ್ನು ಭಾರತಕ್ಕೆ ಬಾಂಗ್ಲಾದೇಶದಿಂದ 200 ಮಂದಿಯನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ. ಈಕೆಯ ವಿರುದ್ಧ ಅಕ್ರಮ ವಸತಿ ಮತ್ತು ವೇಶ್ಯಾವಾಟಿಕೆ ದಂಧೆಯ ಆರೋಪಗಳು ಕೇಳಿ ಬಂದಿವೆ.

-

ಮುಂಬೈ: ಭಾರತಕ್ಕೆ (India) ಬಾಂಗ್ಲಾದೇಶದಿಂದ (bangladesh) 200 ಮಂದಿಯನ್ನು ಕಳ್ಳಸಾಗಣೆ (Human trafficking) ಮಾಡಿದ ಆರೋಪದಲ್ಲಿ ಗುರು ಮಾ (Guru maa) ಎಂದೇ ಕರೆಯಲ್ಪಡುವವ ಬಾಂಗ್ಲಾದೇಶದ ಟ್ರಾನ್ಸ್ ನಾಯಕಿಯನ್ನು ಗುರುವಾರ ಮುಂಬೈನಲ್ಲಿ (Mumbai crime) ಬಂಧಿಸಲಾಗಿದೆ. ಮೂಲತಃ ಬಾಂಗ್ಲಾದೇಶದವನಾದ ಬಾಬು ಅಯಾನ್ ಖಾನ್ ಎಂಬಾಕೆ 200 ಬಾಂಗ್ಲಾದೇಶಿಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದು ಮಾತ್ರವಲ್ಲದೆ ಅಕ್ರಮ ವಸತಿ ಮತ್ತು ವೇಶ್ಯಾವಾಟಿಕೆ ದಂಧೆಯನ್ನು ಕೂಡ ನಡೆಸುತ್ತಿದ್ದಳು. ಈಕೆ ನಕಲಿ ದಾಖಲೆಗಳನ್ನು ಬಳಸಿ ಕಳೆದ 30 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ಬಾಬು ಅಯಾನ್ ಖಾನ್, ಅಲಿಯಾಸ್ ಜ್ಯೋತಿ, ಅಲಿಯಾಸ್ ಗುರು ಮಾ ಎಂದು ಗುರುತಿಸಲಾಗಿರುವ ಆರೋಪಿ, 200 ಬಾಂಗ್ಲಾದೇಶಿ ಪ್ರಜೆಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡಿದ್ದಾಳೆ ಎನ್ನಲಾಗಿದೆ. ಆದರೆ ತನಿಖೆ ಮುಂದುವರಿದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿ ತನ್ನನ್ನು ತಾನು ಆಧ್ಯಾತ್ಮಿಕ ನಾಯಕಿಯಾಗಿ ಗುರುತಿಸಿಕೊಂಡಿದ್ದಳು. ಮುಂಬೈನಲ್ಲಿ ಟ್ರಾನ್ಸ್ ಸಮುದಾಯದ ಗುರುವಾಗಿ ಗುರು ಮಾ ಎಂಬ ಹೆಸರನ್ನು ಹೊಂದಿದ್ದಳು. ಈಕೆ ನಗರದ ವಿವಿಧ ಭಾಗಗಳಲ್ಲಿ ಸುಮಾರು 300 ಅನುಯಾಯಿಗಳನ್ನು ಹೊಂದಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: Physical Abuse: ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಜೂನಿಯರ್ ವಿದ್ಯಾರ್ಥಿಯಿಂದ ಅತ್ಯಾಚಾರ
ತಾನು ಭಾರತೀಯ ಪ್ರಜೆ ಎಂದು ಗುರುತಿಸಿಕೊಳ್ಳಲು ಗುರು ಮಾ ನಕಲಿ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಪಡೆದಿದ್ದಳು. ಈ ಕುರಿತು ಪರಿಶೀಲನೆ ನಡೆಸಿರುವ ಪೊಲೀಸರು ದಾಖಲೆಗಳು ನಕಲಿ ಎಂದು ತಿಳಿಸಿದ್ದಾರೆ ಮತ್ತು ಆಕೆಯನ್ನು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಗಡಿಯ ಮೂಲಕ ಭಾರತಕ್ಕೆ ಜನರನ್ನು ಕಳ್ಳಸಾಗಣೆ ಮಾಡುವ ಜಾಲವನ್ನು ಆಕೆ ಹೊಂದಿದ್ದಾಳೆ. ಇಲ್ಲಿಗೆ ಬಂದ ಮೇಲೆ ಕೆಲವು ದಿನಗಳ ಕಾಲ ಅವರನ್ನು ಕೋಲ್ಕತ್ತಾದಲ್ಲಿ ಬಂಧನದಲ್ಲಿರಿಸಿ ಬಳಿಕ ಅವರಿಗೆ ಜನನ ಪ್ರಮಾಣಪತ್ರಗಳು ಮತ್ತು ಶಾಲೆ ಬಿಡುವ ಪ್ರಮಾಣಪತ್ರಗಳನ್ನು ನೀಡಲಾಗುತ್ತಿತ್ತು. ಬಳಿಕ ಮುಂಬೈಗೆ ಕರೆತಂದು ಶಿವಾಜಿ ನಗರದಲ್ಲಿ ಇರಿಸಲಾಗುತ್ತಿತ್ತು. ಈ ವೇಳೆ ಪ್ರತಿ ಕೋಣೆಯಲ್ಲಿ 3- 4 ಮಂದಿ ವಾಸವಾಗಿರಬೇಕಿತ್ತು. ಅಲ್ಲದೇ ಇವರು ಗುರು ಮಾಗೆ ತಿಂಗಳಿಗೆ 5,000- 10,000 ರೂ. ಗಳ ಕಡ್ಡಾಯ ಬಾಡಿಗೆಯನ್ನು ಪಾವತಿಸಬೇಕಾಗಿತ್ತು.
ಇದನ್ನೂ ಓದಿ: Bribery case: 5 ಕೋಟಿ ರೂ. ನಗದು, ಐಷಾರಾಮಿ ಕೈಗಡಿಯಾರ, ವಾಹನಗಳು.. ಸಿಬಿಐ ಬಲೆಗೆ ಬಿದ್ದ ಐಪಿಎಸ್ ಅಧಿಕಾರಿ
ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MHADA) ಅಡಿಯಲ್ಲಿ ನೋಂದಾಯಿಸಲಾದ ಹಲವು ಫ್ಲಾಟ್ ಮತ್ತು ಗುಡಿಸಲುಗಳ ಅತಿಕ್ರಮಣದಲ್ಲಿ ಗುರು ಮಾ ಹೆಸರು ಕೇಳಿ ಬಂದಿದೆ. ಆಕೆ 200ಕ್ಕೂ ಹೆಚ್ಚು ಮನೆಗಳನ್ನು ಅತಿಕ್ರಮಿಸಿದ್ದು, ಇದರಿಂದ ಲಕ್ಷಾಂತರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಳು ಎನ್ನಲಾಗಿದೆ.