ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Abuse: ಬೆಂಗಳೂರಿನ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಜೂನಿಯರ್‌ ವಿದ್ಯಾರ್ಥಿಯಿಂದ ಅತ್ಯಾಚಾರ

Bengaluru crime: ಜೂನಿಯರ್‌ ವಿದ್ಯಾರ್ಥಿ, ತನಗಿಂತ ಸೀನಿಯರ್‌ ಆಗಿರುವ ವಿದ್ಯಾರ್ಥಿನಿಯನ್ನು ಪುರುಷರ ಶೌಚಗೃಹದೊಳಕ್ಕೆ ಎಳೆದೊಯ್ದು ಅಲ್ಲಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಅಲ್ಲದೆ, ಬಲವಂತ ಮಾಡಿದ್ದಾನೆ. ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಜೂನಿಯರ್‌ ವಿದ್ಯಾರ್ಥಿಯಿಂದ ಅತ್ಯಾಚಾರ

-

ಹರೀಶ್‌ ಕೇರ ಹರೀಶ್‌ ಕೇರ Oct 17, 2025 10:30 AM

ಬೆಂಗಳೂರು: ಬೆಂಗಳೂರಿನ (Bengaluru) ಪ್ರತಿಷ್ಠಿತ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ (Engineering Student) ಮೇಲೆ ಅದೇ ಕಾಲೇಜಿನ ಜ್ಯೂನಿಯರ್ ವಿದ್ಯಾರ್ಥಿ ಅತ್ಯಾಚಾರ (Physical Abuse) ಎಸಗಿದ್ದು, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಲೇಜಿನ ಶೌಚಾಲಯಕ್ಕೆ ವಿದ್ಯಾರ್ಥಿನಿಯನ್ನು ಎಳೆದೊಯ್ದು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪಿ, ಅತ್ಯಾಚಾರ ಎಸಗಿದ್ದಾನೆ. ಸದ್ಯ ಆರೋಪಿ ಜೀವನ್ ಗೌಡ ಎಂಬಾತನನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 10-10-2025 ರಂದು ಬೆಳಿಗ್ಗೆ 8.55ಕ್ಕೆ ತರಗತಿಗೆ ಹಾಜರಾಗಿದ್ದ ಸಂತ್ರಸ್ತೆ ಆರೋಪಿ ಜೀವನ್​ನಿಂದ ಕೆಲವೊಂದು ಸಾಮಗ್ರಿಗಳನ್ನು ಕಲೆಕ್ಟ್ ಮಾಡಿಕೊಳ್ಳಬೇಕಾಗಿದ್ದು, ಲಂಚ್ ಬ್ರೇಕ್​​ನಲ್ಲಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾಳೆ. ಹೀಗೆ ಲಂಚ್ ವೇಳೆಯಲ್ಲಿ ಭೇಟಿಯಾದಾಗ ಆರೋಪಿಯು ಸಂತ್ರಸ್ತೆಯ ಬಳಿ ಸ್ವಲ್ಪ ಮಾತನಾಡಬೇಕೆಂದು ಹೇಳಿ ಕೆಳಮಹಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಂದ ಆರೋಪಿಯ ಮನವಿ ಮೇರೆಗೆ 7ನೇ ಮಹಡಿ ಪಿಜಿ ಬ್ಲಾಕ್​ಗೆ ಹೋಗಿದ್ದಾರೆ. ಅಲ್ಲಿ, ಆರೋಪಿಯು ಸಂತ್ರಸ್ತೆಗೆ ಕಿಸ್ ಮಾಡಲು ಬಂದಿದ್ದಾನೆ. ತಪ್ಪಿಸಿಕೊಳ್ಳಲು ಮುಂದಾದಾಗ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು 6ನೇ ಮಹಡಿಗೆ ಬಂದ ಆರೋಪಿ, ಆಕೆಯನ್ನು ಬಲವಂತವಾಗಿ ವಾಶ್ ರೂಮ್ ಒಳಗೆ ಕರೆದುಕೊಂಡು ಡೋರ್ ಲಾಕ್ ಮಾಡಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ಇಬ್ಬರ ಬಂಧನ

ಸಂತ್ರಸ್ತೆಯನ್ನು ಪುರುಷರ ಶೌಚಗೃಹದೊಳಕ್ಕೆ ಎಳೆದೊಯ್ದ ಆರೋಪಿ ಅಲ್ಲಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಅಲ್ಲದೆ, ಬಲವಂತ ಮಾಡಿದ್ದಾನೆ. ನಂತರ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಿಂದ ಆಘಾತಗೊಂಡ ವಿದ್ಯಾರ್ಥಿನಿ ಈ ವಿಚಾರವನ್ನು ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಿದ್ದಾಳೆ. ಅವರು ಆಕೆಗೆ ಧೈರ್ಯ ತುಂಬಿ ಪೋಷಕರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ನಂತರ ಪೊಲೀಸರ ಜತೆ ಹನುಮಂತನಗರ ಠಾಣೆಗೆ ತೆರಳಿ ಸಂತ್ರಸ್ತೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.