ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪ್ರಿಯಕರನೊಟ್ಟಿಗೆ ಸೇರಿ ಪತಿಗೆ ಸ್ಕೆಚ್‌; ಹಿಟ್‌ ಆ್ಯಂಡ್‌ ರನ್‌ ನಾಟಕ, ನವವಿವಾಹಿತೆಯ ಬಣ್ಣ ಬಯಲಾಗಿದ್ದೇಗೆ?

ಕಳೆದ ವರ್ಷ ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪತ್ನಿಯೇ ತನ್ನ ಪ್ರಿಯಕರನೊಟ್ಟಿಗೆ ಸೇರಿ ತನ್ನ ಪತಿಯನ್ನು ಹತ್ಯೆ ಮಾಡಿದ್ದಳು. ಇದೀಗ ಅಂತಹುದೇ ಪ್ರಕರಣವೊಂದು ನಡೆದಿದ್ದು, ನವವಿವಾಹಿತೆ ತನ್ನ ಪತಿಯನ್ನು ಕೊಲ್ಲಲು ತನ್ನ ಪ್ರಿಯಕರನಿಗೆ ಸುಪಾರಿ ನೀಡಿದ್ದಳು ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ಕಳೆದ ವರ್ಷ ಮೇಘಾಲಯದಲ್ಲಿ ನಡೆದಿದ್ದ ರಾಜಾ ರಘುವಂಶಿ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಪತ್ನಿಯೇ ತನ್ನ ಪ್ರಿಯಕರನೊಟ್ಟಿಗೆ ಸೇರಿ ತನ್ನ ಪತಿಯನ್ನು ಹತ್ಯೆ ಮಾಡಿದ್ದಳು. ಇದೀಗ ಅಂತಹುದೇ ಪ್ರಕರಣವೊಂದು ನಡೆದಿದ್ದು, ನವವಿವಾಹಿತೆ ತನ್ನ ಪತಿಯನ್ನು ಕೊಲ್ಲಲು ತನ್ನ ಪ್ರಿಯಕರನಿಗೆ ಸುಪಾರಿ ನೀಡಿದ್ದಳು ಎಂದು ತಿಳಿದು ಬಂದಿದೆ. ರಾಜಸ್ಥಾನದ ನವವಿವಾಹಿತ ದಂಪತಿಗಳಾದ ಆಶಿಶ್ ಮತ್ತು ಅಂಜು ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ಅವರ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದರು. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆರಂಭದಲ್ಲಿ ಇದೊಂದು ಹಿಟ್‌ ಆಂಡ್‌ ರನ್‌ ಪ್ರಕರಣದಂತೆ ಕಂಡು ಬಂದರೂ, ತನಿಖೆ ನಡೆಸಿದ ಪೊಲೀಸರೇ ಖತರ್ನಾಕ್‌ ಮಹಿಳೆಯ ಕೃತ್ಯಕ್ಕೆ ಬೆಚ್ಚಿ ಬಿದ್ದಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಅಂಜು ತನ್ನ ಗೆಳೆಯ ಸಂಜು ಮತ್ತು ಇತರ ಇಬ್ಬರ ಜೊತೆ ಸೇರಿ ತನ್ನ ಗಂಡನನ್ನು ಕೊಂದಿದ್ದಾಳೆ ಎಂದು ತಿಳಿದು ಬಂದಿದೆ. ಬಳಿಕ ಕೊಲೆಯನ್ನು ಅಪಘಾತವೆಂದು ಬಿಂಬಿಸಿದ್ದರು. ಘಟನೆ ಕುರಿತು, ಶ್ರೀ ಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಮಾತನಾಡಿ, ಜನವರಿ 30 ರ ರಾತ್ರಿ ಸುಮಾರು 9 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ರಸ್ತೆಯಲ್ಲಿ ದಂಪತಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಲಾಯಿತು. ದಂಪತಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಶಿಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ನಾವು ಅಪಘಾತದ ಸ್ಥಳವನ್ನು ಸಮೀಕ್ಷೆ ಮಾಡಿದೆವು ಮತ್ತು ತಾಂತ್ರಿಕ ದೃಷ್ಟಿಕೋನದಿಂದ ತನಿಖೆ ನಡೆಸಲು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (FSL) ತಂಡವನ್ನು ಸಹ ಕರೆಸಿದೆವು ಎಂದು ಹೇಳಿದರು.

ಬಳಿಕ ಅಂಜುವಿಗೆ ಅಪಘಾತದ ಕುರಿತು ಮಾಹಿತಿ ಕೇಳಿದಾಗ, ತಾನು ಮತ್ತು ತನ್ನ ಪತಿ ಸಂಜೆ ವಾಕಿಂಗ್‌ಗೆ ಹೊರಗೆ ಹೋದಾಗ ಆಶಿಶ್ ಮತ್ತು ತನ್ನ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ತಾನು ಧರಿಸಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದೂ ಆಕೆ ಹೇಳಿಕೊಂಡಿದ್ದಳು. ಆದಾಗ್ಯೂ, ತನಿಖೆಯ ಸಮಯದಲ್ಲಿ ಪೊಲೀಸರು ಅಂಜು ಹೇಳಿದ ಘಟನೆಗೆ ಸಿಕ್ಕಿರುವ ಸಾಕ್ಷಿಗಳಿಗೆ ವ್ಯತ್ಯಾಸ ಕಂಡುಕೊಂಡಿದ್ದಾರೆ. ಆಶಿಶ್‌ನ ದೇಹದ ಮೇಲೆ ಗಾಯದ ಗುರುತುಗಳಿದ್ದವು, ಮತ್ತು ವೈದ್ಯಕೀಯ ವರದಿಯ ಪ್ರಕಾರ ಆತನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ.

ಕೊಲೆ ಮಾಡಿದ್ಯಾಕೆ?

ಅಂಜು ಮತ್ತು ಆಶಿಶ್ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ ಅಂಜುಗೆ ಮದುವೆ ಇಷ್ಟವಿರಲಿಲ್ಲ. ಕೆಲ ದಿನಗಳ ಬಳಿಕ ಆಕೆ ತನ್ನ ಊರಿಗೆ ಮರಳಿದ್ದಳು. ಅಲ್ಲಿ ಅವಳು ತನ್ನ ಮಾಜಿ ಗೆಳೆಯ ಸಂಜು ಜೊತೆ ರಾಜಿ ಮಾಡಿಕೊಂಡಳು ಮತ್ತು ಆ ಸಮಯದಲ್ಲಿ ಇಬ್ಬರೂ ಆಶಿಶ್‌ನ ಕೊಲೆಗೆ ಯೋಜನೆ ರೂಪಿಸಿದ್ದರು ಎಂದು ಹೇಳಲಾಗುತ್ತದೆ.

ಪ್ರಿಯಕರನೊಂದಿಗೆ ಸೇರಿ ಮಾವನ ಕತ್ತು ಸೀಳಿ ಕೊಲೆಗೈದ ಸೊಸೆ; ಭೀಕರ ದೃಶ್ಯವನ್ನು ರೆಕಾರ್ಡ್ ಮಾಡಿದ ಪಾಪಿಗಳು

"ಊಟದ ನಂತರದ ಅಂಜು ಆಶಿಶ್ ಜೊತೆ ವಾಕಿಂಗ್‌ಗೆ ಹೋಗಲು ಪ್ರಾರಂಭಿಸಿದ್ದಳು. ಜನವರಿ 30 ರ ರಾತ್ರಿ, ಅಂಜು ಆಶಿಶ್‌ನನ್ನು ಒಂದು ನಿರ್ಜನ ರಸ್ತೆಗೆ ಕರೆದೊಯ್ದಳು, ಅಲ್ಲಿ ಮೂವರು ಆರೋಪಿಗಳಾದ ಸಂಜು ಮತ್ತು ಅವನ ಸಹಚರರಾದ ರೋಹಿತ್ ಎಂದೂ ಕರೆಯಲ್ಪಡುವ ರಾಕಿ ಮತ್ತು ಬಾದಲ್ ಅಲಿಯಾಸ್ ಸಿದ್ಧಾರ್ಥ್ - ಪೊದೆಗಳಲ್ಲಿ ಅಡಗಿಕೊಂಡಿದ್ದರೆಂದು ಹೇಳಲಾಗಿದೆ. ಬಳಿಕ ಆರೋಪಿಗಳು ಆಶಿಶ್‌ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು. ತನಿಖೆಯಲ್ಲಿ ಆರೋಪಿಗಳು ಕೃತ್ಯದ ಕುರಿತು ತಪ್ಪೊಪ್ಪಿಕೊಂಡಿದ್ದಾರೆ.

Vishakha Bhat Heggar

View all posts by this author